ಪಹಲ್ಗಾಮ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಎಂಬ ಪ್ರವಾಸಿ ತಾಣದ ಹೊರವಲಯದ ಹುಲ್ಲುಗಾವಲಿನಲ್ಲಿ ಮಂಗಳವಾರ (ಏಪ್ರಿಲ್ 22, 2025) ನಡೆದ ಭಯೋತ್ಪಾದಕ ದಾಳಿಯು ಭದ್ರತಾ ವ್ಯವಸ್ಥೆಯಲ್ಲಿ ಗಂಭೀರ ಲೋಪವನ್ನು ಸೂಚಿಸುತ್ತದೆ ಎಂದು ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ ಎಂದು ಸಿಎನ್ಎನ್ ನ್ಯೂಸ್ 18 ವರದಿ ಮಾಡಿದೆ.
ಗುಪ್ತಚರ ಮೂಲಗಳ ಪ್ರಕಾರ, ದಾಳಿಕೋರರು ಮಿಲಿಟರಿ ಶೈಲಿಯ ಉಡುಗೆ ಧರಿಸಿದ್ದರು, ವಿದೇಶಿ ಭಯೋತ್ಪಾದಕರ ಚಲನವಲನ ಕುರಿತು ಯಾವುದೇ ಮುಂಚಿನ ಗುಪ್ತಚರ ಎಚ್ಚರಿಕೆ ಇರದಿರುವುದು ಸ್ಥಳೀಯ ಗುಪ್ತಚರ ಜಾಲದೊಂದಿಗಿನ ಸಂಪರ್ಕದ ಕೊರತೆ ಅಥವಾ ಭದ್ರತಾ ವ್ಯವಸ್ಥೆಯ ಮೇಲಿನ ವಿಶ್ವಾಸದ ಕೊರತೆಯನ್ನು ಸೂಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: 'ಕಾಶ್ಮೀರಕ್ಕೆ ಬಂದಿರುವ ಅತಿಥಿಗಳನ್ನು ಕೊಲ್ಲಬೇಡಿ' ಎಂದು ಉಗ್ರರ ಎದುರು ಪ್ರಾಣವನ್ನೇ ಪಣಕ್ಕಿಟ್ಟ ಮುಸ್ಲಿಂ ಯುವಕ
ಕೆಲವೇ ನಿಮಿಷಗಳಲ್ಲಿ ಭಾರೀ ಸಾವುನೋವು ಸಂಭವಿಸಿರುವುದು ಇಲ್ಲಿನ ಭದ್ರತಾ ಪಡೆಯ ವಿಳಂಬ ಮತ್ತು ವೈಪಲ್ಯವನ್ನು ತೋರಿಸುತ್ತದೆ.ಜೊತೆಗೆ ದಾಳಿಕೋರರ ತ್ವರಿತ ಪಲಾಯನವು ದಾಳಿಯ ನಂತರ ಪ್ರದೇಶವನ್ನು ಸುತ್ತುವರಿಯುವ ಮತ್ತು ತಡೆಯುವ ಕಾರ್ಯಾಚರಣೆಯ ವೈಫಲ್ಯವನ್ನು ಸೂಚಿಸುತ್ತದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: Forgotten History: ಪಹಲ್ಗಾಮ್ ಎಂದರೇನು? ಈ ಹೆಸರಿನ ಹಿಂದಿದೆ ರೋಚಕ ಕಥೆ..!
ಬೈಸರನ್‌ನಂತಹ ಜನಪ್ರಿಯ ಪ್ರವಾಸಿ ತಾಣದ ಸಮೀಪದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದಿರುವುದು ದಾಳಿಗೆ ಕಾರಣವಾಗಿದೆ ಎಂದು ಗುಪ್ತಚರ ಮೂಲಗಳು ಆರೋಪಿಸಿವೆ.ಭದ್ರತಾ ಪಡೆಗಳು ಈಗ ದಾಳಿಕೋರರನ್ನು ಟ್ರ್ಯಾಕ್ ಮಾಡುತ್ತಿವೆ ಎಂದು ವರದಿಯಾಗಿದೆ. ಈ ಘಟನೆಯು ಭದ್ರತಾ ಕಾರ್ಯಾಚರಣೆಗಳಲ್ಲಿ ಸುಧಾರಣೆ ಮತ್ತು ಸ್ಥಳೀಯ ಗುಪ್ತಚರ ಜಾಲದೊಂದಿಗಿನ ಸಮನ್ವಯವನ್ನು ಬಲಪಡಿಸುವ ತುರ್ತು ಅಗತ್ಯವನ್ನು ಒತ್ತಿಹೇಳಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









