ಅಣ್ವಸ್ತ್ರ ಕುರಿತಾದ ಅಮೇರಿಕಾದ ಹೇಳಿಕೆಯನ್ನು ಖಂಡಿಸಿದ ಪಾಕ್
ನವದೆಹಲಿ: ಅಮೆರಿಕಾವು ಇತ್ತೀಚಿಗೆ ಪಾಕಿಸ್ತಾನಕ್ಕೆ ಅದರ ಬಳಿ ಇರುವ ಅಣ್ವಸ್ತ್ರದ ಬಗ್ಗೆ ಸಂಶಯ ವ್ಯಕ್ತಪಡಿಸಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನವು ಈ ಸಂಶಯಗಳು ಅಧಾರರಹಿತವಾಗಿವೆ ಎಂದು ಅದು ಪ್ರತ್ಯುತ್ತರ ನೀಡಿದೆ.
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಹಲವಾರು ರಾಷ್ಟ್ರಗಳ ವಿದೇಶಾಂಗ ನೀತಿಗಳನ್ನು ಬದಲು ಮಾಡಲು ಯತ್ನಿಸುತ್ತಿದ್ದಾರೆ. ಅದರ ಫಲವಾಗಿ ಇತ್ತೀಚಿಗೆ ತನ್ನದ ಮೊದಲ ವಿದೇಶಾಂಗ ನೀತಿಯಲ್ಲಿ ಅದು ನ್ಯೂಕ್ಲಿಯರ್ ಗಳ ಸುರಕ್ಷತೆಯ ಬಗ್ಗೆ ಶಂಕೆ ವ್ಯಕ್ತಪಡಿಸಿ ಪಾಕಿಸ್ತಾನದಲ್ಲಿನ ಅಣ್ವಸ್ತ್ರಗಳ ಸುರಕ್ಷತೆ ಬಗ್ಗೆ ನೇರವಾಗಿ ಪ್ರಸ್ತಾಪಿಸಿತ್ತು.
ಇದಕ್ಕೆ ಮರು ಉತ್ತರ ನೀಡಿರುವ ಪಾಕಿಸ್ತಾನದ ವಿದೇಶಾಂಗ ಇಲಾಖೆಯು ಈ ಎಲ್ಲ ಆರೋಪ ಮತ್ತು ಸಂಶಯಗಳು ಆಧಾರಹೀನವಾಗಿವೆ, ಅಲ್ಲದೆ ಪಾಕಿಸ್ತಾನವು ಆ ರೀತಿಯ ಹೇಳಿಕೆಯನ್ನು ತಿರಸ್ಕರಿಸುತ್ತದೆ ಎಂದು ವಿದೇಶಾಂಗ ವಕ್ತಾರ ಮೊಹಮ್ಮದ ಫೈಸಲ್ ಹೇಳಿದ್ದಾರೆ