ಪಾಟ್ನಾ: ಜೆಡಿಯು ಎಂಎಲ್ಎ ಭೀಮಾ ಭಾರ್ತಿ ಅವರ ಪುತ್ರ ದೀಪಕ್ ಅವರ ಮೃತದೇಹವು ಪಾಟ್ನಾದ ರೈಲ್ವೆ ಟ್ರ್ಯಾಕ್ ನಲ್ಲಿ ಕಂಡುಬಂದಿದೆ.


COMMERCIAL BREAK
SCROLL TO CONTINUE READING

ಸಾವಿನ ಕಾರಣ ಇದುವರೆಗೂ ಸಹಿತ ತಿಳಿದುಬಂದಿಲ್ಲ,ಆದರೆ ಇದು ಭೀಮಾ ಬಾರ್ತಿ ಮತ್ತು ಅವರ ಕುಟುಂಬ ಸದಸ್ಯರು ಹೇಳುವಂತೆ ಇದು ಕೊಲೆ ಎಂದು ಹೇಳಲಾಗುತ್ತಿದೆ.ಆದರೆ ಈ ವಿಚಾರವಾಗಿ ಪೊಲೀಸರು ಇನ್ನು ಖಚಿತಪಡಿಸಿಕೊಳ್ಳಬೇಕಿದೆ.


ದೀಪಕ್ ತಡರಾತ್ರಿ ಮುಸಲ್ಲಾಪುರ್ ಹಾಟ್ ಪ್ರದೇಶದಲ್ಲಿ ಸ್ನೇಹಿತರ ಪಾರ್ಟಿಗಾಗಿ ಹೋಗುತ್ತೇನೆಂದು ತೆರಳಿದ್ದರು ಎನ್ನಲಾಗಿದೆ ಎಂದು ಕುಟುಂಬದ ಸದಸ್ಯರು ಪೊಲೀಸರಿಗೆ ವಿಚಾರಣೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಅವರು ನಳಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಮೀಪವಿರುವ ರೈಲ್ವೆ ಟ್ರ್ಯಾಕ್ಗೆ ಹೇಗೆ ತಲುಪಿದರು ಎಂಬುದು ಸ್ಪಷ್ಟವಾಗಿಲ್ಲ ಎನ್ನಲಾಗಿದೆ.


ಬಿಮಾ ಭಾರ್ತಿ ಅವರ ಪತಿ ಅವದೆಶ್ ಮಂಡಲ್  ಬಾಹುಬಲಿ ಎಂದೇ ಈ ಪ್ರದೇಶದಲ್ಲಿ ಹೆಸರು ವಾಸಿಯಾಗಿದ್ದಾರೆ ಎನ್ನಲಾಗಿದೆ. ಆದರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ನಿಷೇಧಿಸಲ್ಪಟ್ಟಿರುವುದರಿಂದ ಅವರ ಪತ್ನಿ ಸಕ್ರಿಯ ರಾಜಕೀಯದಲ್ಲಿ ಬಾಗಿಯಾಗಿದ್ದಾರೆ. ಈಗ  ಈ ಕಾರಣದಿಂದಲೇ ಅವರು ಪ್ರಬಲ ಸ್ನೇಹಿತರು ಮತ್ತು ಶತ್ರುಗಳನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ. ಬಹುಶ ದೀಪಕ್ ಇದೇ ಕಾರಣದಿಂದಲೇ ದೀಪಕ್ ಅವರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ.