Bear viral video : ಹುಲಿ ಮತ್ತು ಕರಡಿ ಮಧ್ಯ ನಡೆದ ಹೋರಾಟದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದೃಶ್ಯವನ್ನು ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.. ಈ ಘೋರ ಯುದ್ಧದಲ್ಲಿ ಗೆದ್ದವರು ಯಾರು..? ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ..

Bear Tiger viral video : ಜಾಂಬವಂತ ಮತ್ತು ಹುಲಿರಾಯನ ಕಾಳಗದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಪೆಂಚ್ ಹುಲಿ ಅಭಯಾರಣ್ಯದಲ್ಲಿ ಜರುಗಿದೆ. ದೃಶ್ಯವನ್ನು ಕಂಡ ಜನರು ತಮಾಷೆಯ ಕಾಮೆಂಟ್ಗಳನ್ನು ಹಾಕುತ್ತಿದ್ದಾರೆ.. ಅಷ್ಟಕ್ಕೂ ಈ ಇಬ್ಬರ ಮಧ್ಯ ಏನಾಯ್ತು..? ಫನ್ನಿ ವಿಡಿಯೋ ಇಲ್ಲಿದೆ ನೋಡಿ..
ವಿಡಿಯೋದಲ್ಲಿ ಕರಡಿ ಘರ್ಜನೆಗೆ ಹೆದರಿ ಹುಲಿರಾಯ ಪಲಾಯನ ಮಾಡುವ ದೃಶ್ಯವಿದೆ. ಕರಡಿಯ ಧೈರ್ಯ ಮತ್ತು ಹೋರಾಟದ ಮನೋಭಾವವನ್ನು ನೆಟಿಜನ್ಗಳು ಪ್ರಶಂಸಿಸುತ್ತಿದ್ದಾರೆ. ಕ್ರೂರ ಹುಲಿಯನ್ನು ನಿರ್ಭಯವಾಗಿ ಕರಡಿ ಎದುರಿಸುತ್ತಿರುವುದನ್ನು ಕಾಣಬಹುದು. ಅಲ್ಲದೆ, ಅಲ್ಲಿಂದ ಕಾಲ್ಕಿತ್ತುವಂತೆ ಮಾಡುತ್ತದೆ.
ಸಾಮಾನ್ಯವಾಗಿ ಕಾಡಿನಲ್ಲಿ ಹುಲಿಗಳನ್ನು ಕಂಡರೆ ಬಹುತೇಕ ಪ್ರಾಣಿಗಳು ಹೆದರಿ ಅಲ್ಲಿಂದ ಜಾಗ ಖಾಲಿ ಮಾಡುತ್ತವೆ. ಸಿಂಹಗಳ ನಂತರ ಹುಲಿಗೆ ಎರಡನೇ ಸ್ಥಾನವಿದೆ. ಅಂತಹ ಟೈಗರ್.. ಸಾಮಾನ್ಯ ಕರಡಿಯ ಘರ್ಜನೆಗೆ ಹೆದರಿ ಓಡುವುದನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
#WATCH | Hilarious! Bear Scares Away Roaring Tiger At Pench Tiger Reserve #MPvideos #MadhyaPradesh #viralvideo pic.twitter.com/FETb4JpEIs
— Free Press Madhya Pradesh (@FreePressMP) April 28, 2025
ಕರಡಿ ಒಂದು ಕೊಳದ ಬಳಿ ನಿಂತಿದ್ದಾಗ ಅಲ್ಲಿಗೆ ಒಂದು ಹುಲಿ ಬರುತ್ತದೆ.. ಹುಲಿ ಕರಡಿಯ ಹತ್ತಿರ ಬರಲು ಪ್ರಯತ್ನಿಸಿತು. ಆ ಸಮಯದಲ್ಲಿ ಕರಡಿ ಭಯವಿಲ್ಲದೆ ಹುಲಿಯ ಮುಂದೆ ಧೈರ್ಯದಿಂದ ಎದ್ದು ನಿಲ್ಲುತ್ತದೆ. ಹುಲಿ ಹತ್ತಿರ ಬರುತ್ತಿದ್ದಂತೆ, ಕರಡಿ ತನ್ನ ದೇಹವನ್ನು ಎರಡು ಬಾರಿ ಅಲ್ಲಾಡಿಸಿತು. ಇದನ್ನು ನೋಡಿ ಹುಲಿ ಹೆದರಿದಂತೆ ತೋರುತ್ತಿತ್ತು. ಆಗ ಕರಡಿ ಇನ್ನೂ ಜೋರಾಗಿ ಘರ್ಜಿಸುತ್ತದೆ. ಆಗ.. ಹುಲಿ ನಿಧಾನವಾಗಿ ಹಿಂದೆ ಸರಿದು ಕೊನೆಗೆ ಅಲ್ಲಿಂದ ಓಡಿಹೋಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.