Pet dog bites neighbor: ಮುಂಬೈನಲ್ಲಿ ನೆರೆಮನೆಯವರೊಬ್ಬರಿಗೆ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ವಾನದ ಮಾಲೀಕನಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಇದಲ್ಲದೇ 4,000 ರೂಪಾಯಿ ದಂಡವನ್ನೂ ವಿಧಿಸಿದೆ. ಈ ಎರಡೂ ಶಿಕ್ಷೆಗಳು ಏಕಕಾಲದಲ್ಲಿ ಜಾರಿಗೊಳಿಸಿ ನ್ಯಾಯಾಲಯ ಆದೇಶಿಸಿದೆ. ದಂಡ ಪಾವತಿಸದಿದ್ದರೆ ನಾಯಿ ಮಾಲೀಕರು ಹೆಚ್ಚುವರಿಯಾಗಿ 15 ದಿನಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಂತಿಮ ತೀರ್ಪಿನ ನಂತರ ದಂಡದ ಮೊತ್ತವನ್ನು ಸಂತ್ರಸ್ತ ವ್ಯಕ್ತಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಲಿಫ್ಟ್ ಒಳಗೆ ಕಚ್ಚಿದ ನಾಯಿ!
ಮಾಹಿತಿಯ ಪ್ರಕಾರ, ವರ್ಲಿಯಲ್ಲಿರುವ ಆಲ್ಫಾ ಅಪಾರ್ಟ್‌ಮೆಂಟ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯನ್ನ ನಿಯಂತ್ರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ಪ್ರಕರಣದಲ್ಲಿ ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶ್ವಾನದ ಮಾಲೀಕರಿಗೆ ನಾಲ್ಕು ತಿಂಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಈ ಘಟನೆ 2018ರ ಫೆಬ್ರವರಿ 1ರಂದು ನಡೆದಿದ್ದು, ರಿಷಭ್ ಮೌಶಿಕ್ ಪಟೇಲ್ ಎಂಬ ವ್ಯಕ್ತಿಯ ಹಸ್ಕಿ ನಾಯಿ ತನ್ನ ನೆರೆಯಮನೆಯ ರಮಿಕ್ ಶಾ ಎಂಬುವರಿಗೆ ಲಿಫ್ಟ್‌ನೊಳಗೆ ಕಚ್ಚಿತ್ತು.
ಇದನ್ನೂ ಓದಿ: ಜಾತಿ ಆಧಾರಿತ ಜನಗಣತಿ: ಸಾಮಾಜಿಕ ನ್ಯಾಯದತ್ತ ಐತಿಹಾಸಿಕ ಹೆಜ್ಜೆ - ಉಪರಾಷ್ಟ್ರಪತಿ ಜಗದೀಪ್ ಧನಕರ್
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ಸುಹಾಸ್ ವಿಜಯ್ ಪಿ.ಭೋಸಲೆ, ಪದೇ ಪದೇ ಎಚ್ಚರಿಕೆ ನೀಡಿದ್ದರೂ ಆರೋಪಿಯು ನಾಯಿಯನ್ನು ಬಲವಂತವಾಗಿ ಲಿಫ್ಟ್‌ಗೆ ಎಳೆದುಕೊಂಡು ಹೋಗಿ ಮಹಿಳೆಯ ಮೇಲೆ ಬಿಟ್ಟಿದ್ದಾರೆಂದು ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನ ಉಲ್ಲೇಖಿಸಿದ ನ್ಯಾಯಾಲಯವು, ಆರೋಪಿಯು ತನ್ನ ಸಾಕು ನಾಯಿಯ ಬಗ್ಗೆ ಯಾವುದೇ ಸೂಕ್ಷ್ಮತೆಯನ್ನ ತೋರಿಸಿಲ್ಲ. ಲಿಫ್ಟ್‌ನಲ್ಲಿ ಅದಾಗಲೇ ಇದ್ದ ಮಹಿಳೆ, ಆಕೆಯ ಒಂದೂವರೆ ವರ್ಷದ ಪುತ್ರ ಮತ್ತು ಮನೆಕೆಲಸದವಳ ಬಗ್ಗೆಯೂ ಕಾಳಜಿ ವಹಿಸಿಲ್ಲವೆಂದು ಹೇಳಿದೆ.
ಘಟನೆ ನಡೆದ ಸಮಯದಲ್ಲಿ ಮಹಿಳೆಯ ಜೊತೆಗೆ ಆಕೆಯ ಒಂದೂವರೆ ವರ್ಷದ ಪುತ್ರ ಕೂಡ ಲಿಫ್ಟ್‌ನಲ್ಲಿದ್ದನು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಆರೋಪಿಯು ನಾಯಿಯನ್ನು ಬಲವಂತವಾಗಿ ಒಳಗೆ ಎಳೆದುಕೊಂಡು ಹೋದ ರೀತಿ, ಮಾಲೀಕ ತನ್ನ ಸಾಕುಪ್ರಾಣಿಯ ಬಗ್ಗೆ ಸೂಕ್ಷ್ಮವಾಗಿಲ್ಲ ಅಥವಾ ಇತರ ಜನರ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಿಲ್ಲವೆಂಬುದನ್ನ ತೋರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆರೋಪಿಗೆ ನಾವು ಯಾವುದೇ ವಿನಾಯ್ತಿ ನೀಡುವುದಿಲ್ಲವೆಂದು ಖಡಕ್ ಸಂದೇಶ ನೀಡಿದೆ.
ಇದನ್ನೂ ಓದಿ: 1 ರೂ, ನಾಣ್ಯದಿಂದ ₹500 ನೋಟುಗಳವರೆಗೆ ಪ್ರಿಂಟ್ ಮಾಡಲು ಖರ್ಚು ಎಷ್ಟಾಗುತ್ತೆ?
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಘಟನೆಯ ನಂತರ ರಮಿಕ್ ಶಾ ಅವರು ವರ್ಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ICC) ಸೆಕ್ಷನ್ 324 (ಉದ್ದೇಶಪೂರ್ವಕವಾಗಿ ನೋವುಂಟುಮಾಡುವುದು), 289 (ಸಾಕುಪ್ರಾಣಿಗಳ ಬಗ್ಗೆ ನಿರ್ಲಕ್ಷ್ಯ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನ್ಯಾಯಾಲಯದಲ್ಲಿ ವಾದ-ಪ್ರತಿವಾದ
ಸಿಸಿಟಿವಿ ದೃಶ್ಯಾವಳಿಗಳು, ವೈದ್ಯಕೀಯ ವರದಿಗಳು ಮತ್ತು ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಪ್ರಾಸಿಕ್ಯೂಷನ್ ನ್ಯಾಯಾಲಯದಲ್ಲಿ ಆರೋಪಿಯ ಪಾತ್ರವನ್ನು ಸಾಬೀತುಪಡಿಸಿತು. ಮತ್ತೊಂದೆಡೆ ಪ್ರತಿವಾದಿಗಳು ವಿಡಿಯೋ ದೃಶ್ಯಗಳ ಸತ್ಯಾಸತ್ಯತೆಯನ್ನು ಪ್ರಶ್ನಿಸಿದರು. ವಾದ-ಪ್ರತಿವಾದವನ್ನ ಆಲಿಸಿದ ನ್ಯಾಯಾಲಯ ಅಂತಿಮವಾಗಿ ಶ್ವಾನದ ಮಾಲೀಕದ್ದೇ ತಪ್ಪು ಎಂಬ ಅಭಿಪ್ರಾಯಕ್ಕೆ ಬಂದಿದೆ. ನ್ಯಾಯಾಲಯವು ಆರೋಪಿಯನ್ನು ಐಪಿಸಿಯ ಸೆಕ್ಷನ್ 324 ಮತ್ತು 289ರ ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿತು. ಆದರೆ ಸಾಕಷ್ಟು ಪುರಾವೆಗಳ ಕೊರತೆಯಿಂದ ಸೆಕ್ಷನ್ 506ರ ಅಡಿಯಲ್ಲಿ ಅವರನ್ನು ಖುಲಾಸೆಗೊಳಿಸಿತ್ತು.
ಅಪರಾಧಿಗೆ ದಂಡ ವಿಧಿಸಿದ ನ್ಯಾಯಾಲಯ
ನ್ಯಾಯಾಲಯವು ಆರೋಪಿಯನ್ನು ಐಪಿಸಿ ಸೆಕ್ಷನ್ 324 ಮತ್ತು ಸೆಕ್ಷನ್ 289ರ ಅಡಿ ತಪ್ಪಿತಸ್ಥವೆಂದು ಘೋಷಿಸಿತು. ಸೆಕ್ಷನ್ 324ರ ಅಡಿ ನ್ಯಾಯಾಲಯವು ನಾಲ್ಕು ತಿಂಗಳ ಕಠಿಣ ಜೈಲು ಶಿಕ್ಷೆ ಮತ್ತು 3,000 ರೂಪಾಯಿ ದಂಡವನ್ನು ವಿಧಿಸಿತು. ಆದರೆ ಐಪಿಸಿ ಸೆಕ್ಷನ್ 289ರ ಅಡಿ ಮೂರು ತಿಂಗಳ ಕಠಿಣ ಜೈಲು ಶಿಕ್ಷೆ ಮತ್ತು 1,000 ರೂಪಾಯಿ ದಂಡವನ್ನು ಸಹ ವಿಧಿಸಿ ಆದೇಶಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









