ಆಗಸ್ಟ್ ತಿಂಗಳಲ್ಲಿ ಸತತ ಮೂರನೇ ದಿನ ಪೆಟ್ರೋಲ್-ಡೀಸೆಲ್ ದುಬಾರಿ

ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 74.50 ರೂ. ಮತ್ತು ಡೀಸೆಲ್ ಬೆಲೆ 67.55 ರೂ. ಇದೆ. 

Last Updated : Aug 26, 2019, 10:17 AM IST
ಆಗಸ್ಟ್ ತಿಂಗಳಲ್ಲಿ ಸತತ ಮೂರನೇ ದಿನ ಪೆಟ್ರೋಲ್-ಡೀಸೆಲ್ ದುಬಾರಿ title=

ನವದೆಹಲಿ: ಆಗಸ್ಟ್ ತಿಂಗಳಲ್ಲಿ ಸತತ ಮೂರನೇ ದಿನ ಪೆಟ್ರೋಲ್-ಡೀಸೆಲ್ ದುಬಾರಿಯಾಗಿದೆ. ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆಯಲ್ಲಿ ಏರಿಳಿತದ ಮಧ್ಯೆ, ಇಂದು ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾಗಿದೆ.

ಇದರೊಂದಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 72.07 ರೂ., ಡೀಸೆಲ್ ಬೆಲೆ 65.35 ರೂ. ಆಗಿದೆ.

ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

 

ನಗರಗಳು

ಪೆಟ್ರೋಲ್

(ರೂ./ಲೀ)

ಡೀಸೆಲ್

(ರೂ./ಲೀ)

ದೆಹಲಿ 72.07 65.35
ಕೊಲ್ಕತ್ತಾ 74.77 67.73
ಮುಂಬೈ 77.73 68.51
ಚೆನ್ನೈ 74.87 69.05
ಬೆಂಗಳೂರು 74.50 67.55
ಹೈದರಾಬಾದ್ 76.59 71.21
ತಿರುವನಂತಪುರಂ 75.27 70.19

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx
 

Trending News