ಶುಕ್ರವಾರವೂ ಡೀಸೆಲ್ ದರ ಇಳಿಕೆ, ಪೆಟ್ರೋಲ್ ಬೆಲೆ ಎಷ್ಟಿದೆ?

ಮಂಗಳವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 16 ಪೈಸೆ ಇಳಿಕೆ ಆಗಿದ್ದ ಪೆಟ್ರೋಲ್ ದರ ಕಳೆದ ಮೂರು ದಿನದಿಂದ ಸ್ಥಿರವಾಗಿದೆ. ಇದೇ ವೇಳೆ ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಡೀಸೆಲ್ ದರ 05 ಪೈಸೆ ಕಡಿತಗೊಂಡಿದೆ.

Updated: Feb 14, 2020 , 08:42 AM IST
ಶುಕ್ರವಾರವೂ ಡೀಸೆಲ್ ದರ ಇಳಿಕೆ, ಪೆಟ್ರೋಲ್ ಬೆಲೆ ಎಷ್ಟಿದೆ?

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಕಡಿಮೆಯಾದ ನಂತರ, ಭಾರತದಲ್ಲಿ ಮಾರಾಟವಾಗುವ ಇಂಧನವೂ ಅಗ್ಗವಾಗಿದೆ. ವಾರದ ಬಳಿಕ ಇಂದು ಪೆಟ್ರೋಲ್, ಡೀಸೆಲ್ ಸ್ಥಿರತೆ ಕಂಡಿದೆ. ಕಳೆದ ಒಂದು ತಿಂಗಳಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 4.30 ರೂ.ಗಳಷ್ಟು ಅಗ್ಗವಾಗಿದೆ, ಅದೇ ವೇಳೆ ಡೀಸೆಲ್ ಬೆಲೆಯಲ್ಲಿ ಗ್ರಾಹಕರಿಗೆ ಲೀಟರ್‌ಗೆ 4.26 ರೂ. ಕಡಿತಗೊಂಡಿದೆ.

ಮಂಗಳವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 16 ಪೈಸೆ ಇಳಿಕೆ ಆಗಿದ್ದ ಪೆಟ್ರೋಲ್ ದರ ಕಳೆದ ಮೂರು ದಿನದಿಂದ ಸ್ಥಿರವಾಗಿದೆ. ಇದೇ ವೇಳೆ ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಡೀಸೆಲ್ ದರ 05 ಪೈಸೆ ಕಡಿತಗೊಂಡಿದೆ.

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

ದೇಶದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯ ಲಾಭ:
ಕಚ್ಚಾ ತೈಲದ ಬೆಲೆ ಕುಸಿತದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಒಂದು ತಿಂಗಳಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ $ 70 ರಿಂದ ಬ್ಯಾರೆಲ್‌ಗೆ $ 50 ಕ್ಕೆ ಇಳಿದಿದೆ. ಇದರ ನೇರ ಪರಿಣಾಮ ಈಗ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗೋಚರಿಸುತ್ತದೆ.

ಇಂದು ಪರಿಷ್ಕರಿಸಲಾದ ತೈಲ ಬೆಲೆ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 71.94 ರೂ. ಮತ್ತು ಡೀಸೆಲ್ ಲೀಟರ್‌ಗೆ 64.82 ರೂ. ಆಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್(Petrol) ದರ 74.39 ರೂ. , ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 67.02 ರೂ. ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು

ಪೆಟ್ರೋಲ್ 

(ರೂ./ಲೀ)

ಡೀಸೆಲ್

(ರೂ./ಲೀ)

ದೆಹಲಿ 71.94 64.77
ಕೊಲ್ಕತ್ತಾ 74.58 67.09
ಮುಂಬೈ 77.60 67.87
ಚೆನ್ನೈ 74.73 68.40
ಬೆಂಗಳೂರು 74.39 66.97
ಹೈದರಾಬಾದ್ 76.45 70.55
ತಿರುವನಂತಪುರಂ 75.38 69.78

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ:

https://www.iocl.com/TotalProductList.aspx