ಸತತ ನಾಲ್ಕು ದಿನಗಳ ಏರಿಕೆ ನಂತರ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ‌!

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದ ನಂತರ, ದೇಶೀಯ ಮಾರುಕಟ್ಟೆಯಲ್ಲಿ ಸತತ ನಾಲ್ಕು ದಿನಗಳವರೆಗೆ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿತ್ತು.  

Last Updated : Sep 16, 2019, 08:50 AM IST
ಸತತ ನಾಲ್ಕು ದಿನಗಳ ಏರಿಕೆ ನಂತರ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ‌! title=

ಬೆಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದ ನಂತರ, ದೇಶೀಯ ಮಾರುಕಟ್ಟೆಯಲ್ಲಿ ಸತತ ನಾಲ್ಕು ದಿನಗಳವರೆಗೆ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿತ್ತು. ಕಳೆದ ನಾಲ್ಕು ದಿನಗಳಲ್ಲಿ, ಪೆಟ್ರೋಲ್ 27 ಪೈಸೆ ಮತ್ತು ಡೀಸೆಲ್ ಲೀಟರ್ಗೆ 29 ಪೈಸೆಗಳಷ್ಟು ದುಬಾರಿಯಾಗಿದೆ. ಸೋಮವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ. 

ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ 72.03 ರೂ ಮತ್ತು ಡೀಸೆಲ್ ಲೀಟರ್‌ಗೆ 65.43 ರೂ. ತಲುಪಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 74.49 ರೂ. ಮತ್ತು ಡೀಸೆಲ್ ಬೆಲೆ 67.66 ರೂ. ಆಗಿದೆ.

ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು

ಪೆಟ್ರೋಲ್ 

(ರೂ./ಲೀ)

ಡೀಸೆಲ್ 

(ರೂ./ಲೀ)

ದೆಹಲಿ 72.03 65.43
ಕೊಲ್ಕತ್ತಾ 74.76 67.84
ಮುಂಬೈ 77.71 68.62
ಚೆನ್ನೈ 74.85 68.15
ಬೆಂಗಳೂರು 74.49 67.66
ಹೈದರಾಬಾದ್ 76.57 71.33
ತಿರುವನಂತಪುರಂ 75.41 70.44

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx

 

Trending News