ಗುರುವಾರ ಪೆಟ್ರೋಲ್-ಡೀಸೆಲ್‌ ದರ ಎಷ್ಟಿದೆ?

ಪೆಟ್ರೋಲ್-ಡೀಸೆಲ್ ಬೆಲೆಯ ದಾಖಲೆಯ ಮಟ್ಟ ತಲುಪಿದ ನಂತರ, ತೈಲ ಕಂಪನಿಗಳು ನಿರಂತರವಾಗಿ ಗ್ರಾಹಕರಿಗೆ ಪರಿಹಾರ ನೀಡುತ್ತಿವೆ. ಬುಧವಾರ ಬೆಳಿಗ್ಗೆ ಸ್ಥಿರತೆ ಕಂಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಂದೂ ಕೂಡ ಯಾವುದೇ ಬದಲಾವಣೆ ಆಗಿಲ್ಲ.

Last Updated : Oct 17, 2019, 08:03 AM IST
ಗುರುವಾರ ಪೆಟ್ರೋಲ್-ಡೀಸೆಲ್‌ ದರ ಎಷ್ಟಿದೆ? title=

ನವದೆಹಲಿ: ಪೆಟ್ರೋಲ್-ಡೀಸೆಲ್ ಬೆಲೆ ದಾಖಲೆಯ ಮಟ್ಟ ತಲುಪಿದ ನಂತರ, ತೈಲ ಕಂಪನಿಗಳು ಗ್ರಾಹಕರಿಗೆ ನಿರಂತರವಾಗಿ ಪರಿಹಾರ ನೀಡುತ್ತಿವೆ. ಮಂಗಳವಾರ ಬೆಲೆ ಕುಸಿದ ನಂತರ, ಬುಧವಾರ ಬೆಳಿಗ್ಗೆ ಪೆಟ್ರೋಲ್ ಮತ್ತು ಡೀಸೆಲ್ ಸ್ಥಿರತೆ ಕಂಡುಬಂದಿದೆ. ಅಕ್ಟೋಬರ್ ಆರಂಭದಿಂದ ಪೆಟ್ರೋಲ್ ದರ ಲೀಟರ್‌ಗೆ 1 ರೂಪಾಯಿಗಿಂತಲೂ ಕಡಿಮೆಯಾಗಿದೆ. ಬುಧವಾರ ಬೆಳಿಗ್ಗೆ ಸ್ಥಿರತೆ ಕಂಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಂದೂ ಕೂಡ ಯಾವುದೇ ಬದಲಾವಣೆ ಆಗಿಲ್ಲ.

ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ದೆಹಲಿಯಲ್ಲಿ ಬುಧವಾರ ಬೆಳಿಗ್ಗೆ ಪೆಟ್ರೋಲ್ ಪ್ರತಿ ಲೀಟರ್‌ಗೆ 73.27 ರೂ. ಡೀಸೆಲ್ ಅನ್ನು ಲೀಟರ್‌ಗೆ 66.41 ರೂ.ಗೆ ಮಾರಾಟ ಮಾಡಲಾಗುತ್ತಿದೆ. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 75.72 ರೂ. ಮತ್ತು ಡೀಸೆಲ್ ಬೆಲೆ 68.62 ರೂ. ಆಗಿದೆ.

ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು

ಪೆಟ್ರೋಲ್ 

(ರೂ./ಲೀ)

ಡೀಸೆಲ್ 

(ರೂ./ಲೀ)

ದೆಹಲಿ 73.27 67.41
ಕೊಲ್ಕತ್ತಾ 75.92 68.77
ಮುಂಬೈ 78.88 69.61
ಚೆನ್ನೈ 76.16 70.21
ಬೆಂಗಳೂರು 75.72 68.62
ಹೈದರಾಬಾದ್ 77.91 72.42
ತಿರುವನಂತಪುರಂ 76.48 71.29

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx
 

Trending News