close

News WrapGet Handpicked Stories from our editors directly to your mailbox

ಭಾನುವಾರವೂ ಪೆಟ್ರೋಲ್ ಬೆಲೆ ಸ್ಥಿರ, ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಇಳಿಕೆ!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 73.27 ರೂ. ಮತ್ತು ಡೀಸೆಲ್ ಬೆಲೆ 66.17ರೂ. ನಿಗದಿಯಾಗಿದೆ.

Updated: Oct 20, 2019 , 09:01 AM IST
ಭಾನುವಾರವೂ ಪೆಟ್ರೋಲ್ ಬೆಲೆ ಸ್ಥಿರ, ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಇಳಿಕೆ!

ನವದೆಹಲಿ: ಸತತ ಮೂರನೇ ದಿನವೂ ಪೆಟ್ರೋಲ್ ಬೆಲೆ ಸ್ಥಿರವಾಗಿದ್ದು, ಡೀಸೆಲ್ ಬೆಲೆಯಲ್ಲಿ 8 ಪೈಸೆ ಇಳಿಕೆಯಾಗಿದೆ. 

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 73.27 ರೂ. ಮತ್ತು ಡೀಸೆಲ್ ಬೆಲೆ 66.17ರೂ. ನಿಗದಿಯಾಗಿದೆ.

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಈ ಪರಿಷ್ಕೃತ ದರ ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ. 

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಈ ಕೆಳಕಂಡಂತಿದೆ.

ನಗರಗಳು

ಪೆಟ್ರೋಲ್ (ರೂ./ಲೀ)

ಡೀಸೆಲ್ (ರೂ./ಲೀ)

ದೆಹಲಿ 73.27 67.24
ಕೊಲ್ಕತ್ತಾ 75.92 68.53
ಮುಂಬೈ 78.88 69.35
ಚೆನ್ನೈ 76.09 69.89
ಬೆಂಗಳೂರು 75.74 68.40
ಹೈದರಾಬಾದ್ 77.91 72.15
ತಿರುವನಂತಪುರಂ 76.62 71.17

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx