ಪೆಟ್ರೋಲ್ 1 ರೂ. ಹೆಚ್ಚಳ, ಡೀಸೆಲ್ ಕೂಡ ದುಬಾರಿ; ಇಂದಿನ ಬೆಲೆ ಎಷ್ಟಿದೆ?

ವಿಶ್ವಾದ್ಯಂತ ತೈಲ ಪೂರೈಕೆ ಕಡಿಮೆಯಾದ ಕಾರಣ ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಸೌದಿ ಅರಾಮ್ಕೊ ಸ್ಥಾವರ ಮೇಲೆ ಡ್ರೋನ್ ದಾಳಿ ನಡೆಸಿದ ನಂತರ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಿದ್ದು, ಸತತ ನಾಲ್ಕನೇ ದಿನವೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ತೀವ್ರವಾಗಿ ಏರಿಕೆಯಾಗಿದೆ.

Last Updated : Sep 20, 2019, 08:51 AM IST
ಪೆಟ್ರೋಲ್ 1 ರೂ. ಹೆಚ್ಚಳ, ಡೀಸೆಲ್ ಕೂಡ ದುಬಾರಿ; ಇಂದಿನ ಬೆಲೆ ಎಷ್ಟಿದೆ? title=

ನವದೆಹಲಿ: ವಿಶ್ವದಾದ್ಯಂತ ತೈಲ ಪೂರೈಕೆ ಕಡಿಮೆಯಾದ ಕಾರಣ ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಸೌದಿ ಅರಾಮ್ಕೊ ಸ್ಥಾವರ ಮೇಲೆ ಡ್ರೋನ್ ದಾಳಿಯ ನಂತರ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಿದೆ, ಇದು ಸತತ ನಾಲ್ಕನೇ ದಿನವೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ದೊಡ್ಡ ಏರಿಕೆಗೆ ಕಾರಣವಾಯಿತು. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಸತತ ನಾಲ್ಕನೇ ದಿನವಾದ ಶುಕ್ರವಾರವೂ ಹೆಚ್ಚಾಗಿದ್ದು, ಪ್ರತಿ ಲೀಟರ್‌ಗೆ 35 ಪೈಸೆ ಏರಿಕೆ ಕಂಡಿದೆ. ಇದರಿಂದಾಗಿ ಪೆಟ್ರೋಲ್  ಲೀಟರ್‌ಗೆ 73.06 ರೂ.ಗೆ ಏರಿತು. ಅದೇ ರೀತಿ ಡೀಸೆಲ್ 28 ಪೈಸೆ ಏರಿಕೆಯಾಗಿ ಲೀಟರ್‌ಗೆ 66.29 ರೂ. ತಲುಪಿದೆ.

ಡೀಸೆಲ್ ಪ್ರತಿ ಲೀಟರ್‌ಗೆ 86 ಪೈಸೆ ಹೆಚ್ಚಾಯಿತು
ಕಳೆದ ನಾಲ್ಕು ದಿನಗಳಲ್ಲಿ ಪೆಟ್ರೋಲ್ ಬೆಲೆ 1.03 ರೂ ಮತ್ತು ಡೀಸೆಲ್ 86 ಪೈಸೆ ಹೆಚ್ಚಾಗಿದೆ. ಇದಕ್ಕೂ ಮೊದಲು ಪೆಟ್ರೋಲ್ ಗುರುವಾರ 29 ಪೈಸೆ, ಬುಧವಾರ 25 ಪೈಸೆ ಮತ್ತು ಮಂಗಳವಾರ 14 ಪೈಸೆ ಹೆಚ್ಚಾಗಿದೆ. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 75.19 ರೂ. ಮತ್ತು ಡೀಸೆಲ್ ಬೆಲೆ 68.26 ರೂ. ಆಗಿದೆ.

ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು

ಪೆಟ್ರೋಲ್ 

(ರೂ./ಲೀ)

ಡೀಸೆಲ್ 

(ರೂ./ಲೀ)

ದೆಹಲಿ 73.06 66.29
ಕೊಲ್ಕತ್ತಾ 75.77 68.70
ಮುಂಬೈ 78.73 69.54
ಚೆನ್ನೈ 75.93 70.07
ಬೆಂಗಳೂರು 75.19 68.26
ಹೈದರಾಬಾದ್ 77.29 71.96
ತಿರುವನಂತಪುರಂ 76.10 71.05

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx
 

Trending News