ನವದೆಹಲಿ : ದೇಶಾದ್ಯಂತ ಏಪ್ರಿಲ್ 2ರಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ಬೆಲೆಯಲ್ಲಿ 10 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 11ಪೈಸೆ ಏರಿಕೆಯಾಗಿದೆ. ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ಅನ್ವಯಿಸುತ್ತದೆ. ಕಳೆದ ಒಂದು ವಾರದಲ್ಲಿ ಗಣನೀಯವಾಗಿ ಏರಿಕೆ ಕಂಡಿರುವ ಪೆಟ್ರೋಲ್-ಡೀಸೆಲ್ ದರಗಳು 80 ರಿಂದ 90ಪೈಸೆಯಷ್ಟು ಏರಿಕೆ ಕಂಡಿವೆ.


COMMERCIAL BREAK
SCROLL TO CONTINUE READING

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.


ದೇಶದ ಪ್ರಮುಖ ನಗರಗಳ ಪೆಟ್ರೋಲ್ ಮತ್ತು ಡೀಸೆಲ್ ದರ ಈ ಕೆಳಗಿನಂತಿದೆ


ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 73.83 64.69
ಕೋಲ್ಕತ್ತಾ 76.54 67.38
ಮುಂಬೈ 81.69 68.89
ಚೆನ್ನೈ 76.59 68.24
ಬೆಂಗಳೂರು 75.00 65.78
ಹೈದರಾಬಾದ್ 78.19 70.28
ತಿರುವನಂತಪುರಂ 77.78 70.20

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: https://www.iocl.com/TotalProductList.aspx