ನವದೆಹಲಿ: ರಾಷ್ಟ್ರೀಯ ರಾಜಧಾನಿ ದೆಹಲಿ ಸೇರಿದಂತೆ ಮುಂಬೈ, ಕೊಲ್ಕತಾ ಮತ್ತು ಚೆನ್ನೈನಲ್ಲಿ ಸತತ ಎಂಟನೇ ದಿನವಾದ ಇಂದೂ ಸಹ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ  ಕುಸಿತ ಕಂಡಿದೆ. ದೆಹಲಿಯಲ್ಲಿ, ಹಿಂದಿನ ದಿನಕ್ಕಿಂತ ಪೆಟ್ರೋಲ್ ಲೀಟರ್ಗೆ 15 ಪೈಸೆ ಇಳಿಕೆಯಾಗಿದ್ದು, ಡೀಸೆಲ್ಗೆ ಲೀಟರ್ಗೆ ಐದು ಪೈಸೆ ಇಳಿಕೆಯಾಗಿದೆ. ದೇಶದ ರಾಜಧಾನಿ ಪೆಟ್ರೋಲ್ ಬೆಲೆ ಲೀಟರ್ಗೆ 81.10 ಮತ್ತು ಡೀಸೆಲ್ ಪ್ರತಿ ಲೀಟರ್ಗೆ 74.80 ರೂ. ಇದೆ.


COMMERCIAL BREAK
SCROLL TO CONTINUE READING

ಮುಂಬೈನಲ್ಲಿ ಪೆಟ್ರೋಲ್ ಬೆಲೆ 15 ಪೈಸೆ ಇಳಿಕೆಯಾಗಿದ್ದು, ಪ್ರತಿ ಲೀಟರ್ಗೆ 86.58 ರೂ.ಗೆ ಮತ್ತು ಡೀಸೆಲ್ಗೆ ಐದು ಪೈಸೆ ಇಳಿಕೆಯಾಗಿ ಪ್ರತಿ ಲೀಟರ್ಗೆ 78.41 ರೂ. ಇದೆ. ಅದೇ ರೀತಿ, ಕೋಲ್ಕತ್ತಾದಲ್ಲಿ ಡೀಸೆಲ್ ದರ ಲೀಟರ್ಗೆ 5 ಪೈಸೆ ಇಳಿಕೆಯಾಗಿದ್ದು, ಲೀಟರ್ಗೆ 18 ಪೈಸೆಯಷ್ಟು ಪೆಟ್ರೋಲ್ ಅಗ್ಗವಾಯಿತು. ಕೊಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 82.92 ರೂ. ಮತ್ತು ಡೀಸೆಲ್ ಬೆಲೆ 76.65 ರೂ.


ಅದೇ ಸಮಯದಲ್ಲಿ ಚೆನ್ನೈನಲ್ಲಿ ಪೆಟ್ರೋಲ್ ಬೆಲೆಯನ್ನು 16 ಪೈಸೆಯಿಂದ ಇಳಿಸಲಾಗಿದ್ದು ಲೀಟರ್ಗೆ 84.28 ರೂ. ಆಗಿದೆ. ಡೀಸೆಲ್ ಬೆಲೆಯನ್ನು ಆರು ಪೈಸೆ ಇಳಿಸಿದ್ದು 79.09 ರೂ. ಇದೆ. ಮತ್ತೊಂದೆಡೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕುಸಿದಿದೆ, ಇದು ಮತ್ತಷ್ಟು ಪೆಟ್ರೋಲ್ ಮತ್ತು ಡೀಸೆಲ್ಗಳ ಬೆಲೆಯನ್ನು ಕಡಿಮೆಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.