ಪೆಟ್ರೋಲ್ ಬೆಲೆಯು ಪ್ರತಿ ಲೀಟರ್ಗೆ 10 ಪೈಸೆ ಹೆಚ್ಚಳ, ಡೀಸೆಲ್ ಬೆಲೆ ಸ್ಥಿರ

ಶುಕ್ರವಾರ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 82.32 ರೂ. ಮತ್ತು ಮುಂಬೈನಲ್ಲಿ 89.69 ರೂ.  

Last Updated : Sep 21, 2018, 08:27 AM IST
ಪೆಟ್ರೋಲ್ ಬೆಲೆಯು ಪ್ರತಿ ಲೀಟರ್ಗೆ 10 ಪೈಸೆ ಹೆಚ್ಚಳ, ಡೀಸೆಲ್ ಬೆಲೆ ಸ್ಥಿರ title=

ನವದೆಹಲಿ: ಕಳೆದ ಒಂದು ತಿಂಗಲಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯತ್ತ ಮುಖ ಮಾಡಿದೆ. ಗುರುವಾರ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 10 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಲೀಟರ್ಗೆ 82.32 ರೂ. ತಲುಪಿದೆ. ಆದಾಗ್ಯೂ, ಡೀಸೆಲ್ ಬೆಲೆಗಳ ಮೇಲೆ ಜನರಿಗೆ ಸ್ವಲ್ಪ ಪರಿಹಾರ ಸಿಕ್ಕಿದೆ. ಶುಕ್ರವಾರ ಸತತ ಎರಡನೇ ದಿನಕ್ಕೆ ಡೀಸೆಲ್ ದರದಲ್ಲಿ ಯಾವುದೇ ಹೆಚ್ಚಳವಾಗಿಲ್ಲ.

ಶುಕ್ರವಾರದಂದು ದೆಹಲಿಯಲ್ಲಿ ಡೀಸೆಲ್ ಬೆಲೆ 73.87 ರೂ. ಪೆಟ್ರೋಲ್ ದರ ಲೀಟರ್ಗೆ 82.32 ರೂ. ಆಗಿದೆ.

ಶುಕ್ರವಾರ, ಪೆಟ್ರೋಲ್ ಬೆಲೆಗಳು ಮುಂಬೈಯಲ್ಲಿ ಪ್ರತಿ ಲೀಟರ್ಗೆ 9 ಪೈಸೆಯಷ್ಟು ಏರಿಕೆ ಕಂಡವು. ಇದರಿಂದ ಮುಂಬೈಯಲ್ಲಿ ಪೆಟ್ರೋಲ್ ದರ ಲೀಟರ್ಗೆ 89.69 ರೂ. ಅದೇ ಸಮಯದಲ್ಲಿ, ಎರಡನೇ ದಿನ ಮುಂಬೈ ಡೀಸೆಲ್ ಬೆಲೆ ಏರಿಕೆಯಾಗಲಿಲ್ಲ. ಮುಂಬೈನಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 78.42 ರೂ. ಇದೆ.

ಮುಂಬರುವ ದಿನಗಳಲ್ಲಿ, ಭಾರತೀಯ ಮಾರುಕಟ್ಟೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗಲಿವೆ ಎಂದು ತಜ್ಞರು ನಂಬಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.

Trending News