PM Kisan Scheme: ನೀವು ಇ-ಕೆವೈಸಿ ಮಾಡಿಸಿಲ್ಲವೇ? ಹಾಗಿದ್ದಲ್ಲಿ ನೀವು ಹೀಗೆ ಮಾಡಿ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪಿಎಂ ಕಿಸಾನ್ ಯೋಜನೆಯಡಿ ಪರಿಹಾರ ಪಡೆಯಲು ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ಇದಕ್ಕಾಗಿ ಫಲಾನುಭವಿಗಳಿಗೆ 2022ರ ಮಾರ್ಚ್ 31ರವರೆಗೆ ಕಾಲಾವಕಾಶ ನೀಡಲಾಗಿದೆ.

Written by - Zee Kannada News Desk | Last Updated : Jan 28, 2022, 04:38 AM IST
  • ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪಿಎಂ ಕಿಸಾನ್ ಯೋಜನೆಯಡಿ ಪರಿಹಾರ ಪಡೆಯಲು ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ಇದಕ್ಕಾಗಿ ಫಲಾನುಭವಿಗಳಿಗೆ 2022ರ ಮಾರ್ಚ್ 31ರವರೆಗೆ ಕಾಲಾವಕಾಶ ನೀಡಲಾಗಿದೆ.
 PM Kisan Scheme: ನೀವು ಇ-ಕೆವೈಸಿ ಮಾಡಿಸಿಲ್ಲವೇ? ಹಾಗಿದ್ದಲ್ಲಿ ನೀವು ಹೀಗೆ ಮಾಡಿ  title=

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪಿಎಂ ಕಿಸಾನ್ ಯೋಜನೆಯಡಿ ಪರಿಹಾರ ಪಡೆಯಲು ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ಇದಕ್ಕಾಗಿ ಫಲಾನುಭವಿಗಳಿಗೆ 2022ರ ಮಾರ್ಚ್ 31ರವರೆಗೆ ಕಾಲಾವಕಾಶ ನೀಡಲಾಗಿದೆ.

ಫಲಾನುಭವಿಗಳು ಸೂಚನೆ ಪಾಲಿಸದಿದ್ದಲ್ಲಿ ಆರ್ಥಿಕ ನೆರವು ಸಹ ಸ್ಥಗಿತಗೊಳ್ಳಲಿದೆ. ನೈಜ್ ಫಲಾನುಭವಿಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಕೇಂದ್ರವು ಈ ಹೊಸ ಆದೇಶ ಹೊರಡಿಸಿದೆ. ಇ-ಕೆವೈಸಿ ಮಾಡಿಕೊಂಡರೆ ಅರ್ಹ ರೈತರ ಖಚಿತ ಮಾಹಿತಿ ಲಭ್ಯವಾಗಲಿದೆ.  

ಅರ್ಹ ಫಲಾನುಭವಿಗಳು http://pmkisan.gov.in ಪೋರ್ಟಲ್‍ನ ಫಾರ್ಮರ್ ಕಾರ್ನರ್‍ನಲ್ಲಿ ಇ-ಕೆವೈಸಿ ಮೂಲಕ ಆಧಾರ ಸಂಖ್ಯೆ ಹಾಗೂ ಆಧಾರ ಕಾರ್ಡ್‍ನಲ್ಲಿರುವ ಮೊಬೈಲ್ ಸಂಖ್ಯೆ ದಾಖಲಿಸಬೇಕು. ನಾಗರಿಕ ಸೇವಾ ಕೇಂದ್ರಗಳಲ್ಲಿಯೂ ಸಹ (ಸಿಎಸ್‍ಸಿ ಬಯೋಮೆಟ್ರಿಕ್ ಆಧಾರಿತವಾಗಿ) ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Budget 2022 : ಜನವರಿ 31 ರಂದು ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ!

ಫಲಾನುಭವಿಗಳು 2022ರ ಮಾರ್ಚ್ 31 ರೊಳಗೆ ಇ-ಕೆವೈಸಿ ಮಾಡಿಸದಿದ್ದಲ್ಲಿ ಫಲಾನುಭವಿಗಳಿಗೆ (ಮುಂದಿನ 2022ರ ಏಪ್ರಿಲ್-ಜುಲೈ ಅವಧಿಗೆ) ಆರ್ಥಿಕ ನೆರವು ಸಿಗುವುದಿಲ್ಲ. ರೈತರು ಈ ಕುರಿತು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News