ವಾರಣಾಸಿಯ ಗಂಗಾ ಆರ್ತಿಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ

ಲೋಕಸಭಾ ಚುನಾವಣೆಯ ನಿಮಿತ್ತ  ನಾಮಪತ್ರ ಸಲ್ಲಿಸುವ ಒಂದು ದಿನಕ್ಕೂ ಮೊದಲು  ಪ್ರಧಾನಿ ಮೋದಿ ವಾರಣಾಸಿಯಲ್ಲಿ ಬೃಹತ್  ರೋಡ್ ಶೋ ವನ್ನು ನಡೆಸಿದರು.

Updated: Apr 25, 2019 , 08:22 PM IST
ವಾರಣಾಸಿಯ ಗಂಗಾ ಆರ್ತಿಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
Photo courtesy: Twitter

ನವದೆಹಲಿ: ಲೋಕಸಭಾ ಚುನಾವಣೆಯ ನಿಮಿತ್ತ  ನಾಮಪತ್ರ ಸಲ್ಲಿಸುವ ಒಂದು ದಿನಕ್ಕೂ ಮೊದಲು  ಪ್ರಧಾನಿ ಮೋದಿ ವಾರಣಾಸಿಯಲ್ಲಿ ಬೃಹತ್  ರೋಡ್ ಶೋ ವನ್ನು ನಡೆಸಿದರು.

ರೋಡ್ ಶೋ ಪ್ರಾರಂಭ ಮಾಡುವುದಕ್ಕೂ ಮೊದಲು ಬನಾರಸ್ ಹಿಂದು ವಿವಿ ಗೇಟ್ ನಲ್ಲಿರುವ ಪಂಡಿತ್ ಮದನ್ ಮೋಹನ್ ಮಾಳವೀಯ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ರೋಡ್ ಶೋ ಗೆ ಚಾಲನೆ ನೀಡಿದರು. ಈ ರೋಡ್ ಶೋ ಲಂಕಾದಿಂದ ಆರಂಭವಾಗಿ ಅಸ್ಸಿ ಘಾಟ್  ಭದಿನಿ, ಸೋನಾರ್ಪುರಾ, ಮದನ್ಪುರಾ, ಜಂಗಂಬಾಡಿ ಮತ್ತು ಗೊಡೋವಿಲಿಯ ಮೂಲಕ ದಶಾಶ್ವಮೇಧ ಘಾಟ್ ಗೆ ಆಗಮಿಸಿತು.ಆರು ಕಿಲೋ ಮೀಟರ್ ದೂರದಷ್ಟು ಹರಡಿದ್ದ ಈ ರೋಡ್ ಶೋದಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದರು. ಅಲ್ಲದೆ ಪ್ರಧಾನಿ ಮೋದಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿ ನಾಯಕರು ಸಾಥ್ ನೀಡಿದರು. 

ಪ್ರಧಾನಿ ಮೋದಿ ರೋಡ್ ಶೋ ಪ್ರಾರಂಭವಾಗುವ ಮೊದಲು ಕಾಂಗ್ರೆಸ್ ವಾರಣಾಸಿ ಅಭ್ಯರ್ಥಿಯಾಗಿ ಅಜಯ್ ರೈ ರನ್ನು ಕಣಕ್ಕೆ ಇಳಿಸಿತು.ಇದಕ್ಕೂ ಮೊದಲು ಪ್ರಿಯಾಂಕಾ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನುವ ಊಹಾಪೋಹ ಹರಡಿತ್ತು. ಇದಕ್ಕೆ ಪೂರಕವಾಗಿ ಸ್ವತಃ ಪ್ರಿಯಾಂಕಾ ಗಾಂಧಿ ನೀಡಿರುವ ಹೇಳಿಕೆಗಳು ಪುಷ್ಟಿ ನೀಡಿದ್ದವು. ಒಂದು ವೇಳೆ ಪಕ್ಷ ಹೇಳಿದಲ್ಲಿ ತಾವು ಖಂಡಿತವಾಗಿ ಸ್ಪರ್ಧಿಸುವುದಾಗಿ ಹೇಳಿದ್ದರು. ಈ ಹಿನ್ನಲೆಯಲ್ಲಿ  ವಾರಾಣಸಿ ಪ್ರಿಯಾಂಕಾ ಸ್ಪರ್ಧೆ ಮೂಲಕ ಹೈ ಪ್ರೋಪೈಲ್ ಕಣವಾಗಿ ಪರಿಗಣಿಸಲಿದೆ ಎಂದು ಭಾವಿಸಲಾಗಿತ್ತು.