ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿ ಉದ್ಘಾಟನೆ ಮಾಡಲಿದ್ದಾರೆ.ಇದರಿಂದ ಪ್ರಯಾಣಿಕರಿಗೆ ವೇಗವಾದ, ಆರಾಮದಾಯಕ ಮತ್ತು ಆಧುನಿಕ ಪ್ರಯಾಣದ ಅನುಭವ ದೊರೆಯಲಿದೆ.
ಈ ಹೊಸ ರೈಲುಗಳು ಕರ್ನಾಟಕ, ಕೇರಳ, ಪಂಜಾಬ್, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ದೆಹಲಿ ನಡುವಿಣ ರೈಲು ಸಂಪರ್ಕವನ್ನು ಇನ್ನಷ್ಟು ಬಲಪಡಿಸಲಿವೆ. ಈ ಸೇವೆಗಳು ಪ್ರಾರಂಭವಾದ ನಂತರ ದೇಶಾದ್ಯಂತ ವಂದೇ ಭಾರತ್ ರೈಲುಗಳ ಸಂಖ್ಯೆ 164ಕ್ಕೆ ಏರಿಕೆಯಾಗಲಿದೆ.ಬೆಂಗಳೂರು-ಕೊಚ್ಚಿ ವಂದೇ ಭಾರತ್ ಎಕ್ಸ್‌ಪ್ರೆಸ್ ಕೇರಳದಲ್ಲಿ ಓಡಾಡುವ ಮೂರನೇ ವಂದೇ ಭಾರತ್ ರೈಲು ಇದಾಗಿದೆ.ಬೆಂಗಳೂರು-ಎರ್ನಾಕುಳಂ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.ರೈಲು ಸಂಖ್ಯೆ 26651 (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು-ಎರ್ನಾಕುಳಂ): ಬೆಂಗಳೂರಿನಿಂದ ಬೆಳಗ್ಗೆ 5:10ಕ್ಕೆ ಹೊರಟು ಮಧ್ಯಾಹ್ನ 1:50ಕ್ಕೆ ಎರ್ನಾಕುಳಂ ತಲುಪಲಿದೆ.
ಇದನ್ನೂ ಓದಿ: 12 ವರ್ಷಗಳ ನಂತರ ಗುರು ಸಂಚಾರ : ಈ ರಾಶಿಯವರಿಗೆ ಹಠಾತ್ ಆರ್ಥಿಕ ಲಾಭ ! ಸಾಲವೆಲ್ಲಾ ತೀರಿ ನೆಮ್ಮದಿಯ ಜೀವನ ನಿಮ್ಮದಾಗುವುದು
ನಿಲುಗಡೆಗಳು: ಕೃಷ್ಣರಾಜಪುರಂ, ಸೇಲಂ, ಈರೋಡ್, ತಿರುಪ್ಪೂರ್, ಕೋಯಂಬತ್ತೂರು, ಪಾಲಕ್ಕಾಡ್ ಮತ್ತು ತ್ರಿಶ್ಶೂರ್.
ವಾಪಸಾತಿ ರೈಲು (26652): ಎರ್ನಾಕುಳಂನಿಂದ ಮಧ್ಯಾಹ್ನ 2:20ಕ್ಕೆ ಹೊರಟು ರಾತ್ರಿ 11ಕ್ಕೆ ಬೆಂಗಳೂರು ತಲುಪಲಿದೆ.
ಒಟ್ಟು ದೂರ: 486 ಕಿ.ಮೀ.
ಪ್ರಯಾಣ ಸಮಯ: 6 ಗಂಟೆ 40 ನಿಮಿಷ.
ಸಂಚಾರ: ವಾರದಲ್ಲಿ ಆರು ದಿನಗಳು (ಬುಧವಾರ ಬಿಟ್ಟು).
ಫಿರೋಜ್‌ಪುರ-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ರೂಟ್: ಫರೀದ್‌ಕೋಟ್, ಭಟಿಂಡಾ, ಧುರಿ, ಪಟಿಯಾಲಾ, ಅಂಬಾಲಾ ಕ್ಯಾಂಟ್, ಕುರುಕ್ಷೇತ್ರ, ಪಾನಿಪತ್.
ರೈಲು ಸಂಖ್ಯೆ 26462: ಫಿರೋಜ್‌ಪುರದಿಂದ ಬೆಳಗ್ಗೆ 7:55ಕ್ಕೆ ಹೊರಟು ಮಧ್ಯಾಹ್ನ 2:35ಕ್ಕೆ ದೆಹಲಿ ತಲುಪಲಿದೆ.
ರೈಲು ಸಂಖ್ಯೆ 26461: ದೆಹಲಿಯಿಂದ ಸಂಜೆ 4 ಗಂಟೆಗೆ ಹೊರಟು ರಾತ್ರಿ 10:35ಕ್ಕೆ ಫಿರೋಜ್‌ಪುರ ತಲುಪಲಿದೆ.
ವಾರಣಾಸಿ-ಖಜುರಾಹೋ ವಂದೇ ಭಾರತ್ ಎಕ್ಸ್‌ಪ್ರೆಸ್ದೂರ: 443 ಕಿ.ಮೀ.
ಪ್ರಯಾಣ ಸಮಯ: 7 ಗಂಟೆ 40 ನಿಮಿಷ.
ನಿಲುಗಡೆಗಳು: ವಿಂಧ್ಯಾಚಲ, ಪ್ರಯಾಗ್‌ರಾಜ್ ಛಿವಕಿ, ಚಿತ್ರಕೂಟ್ ಧಾಮ, ಬಾಂದಾ, ಮಹೋಬಾ.
ರೈಲು ಸಂಖ್ಯೆ 26422: ವಾರಣಾಸಿಯಿಂದ ಬೆಳಗ್ಗೆ 5:25ಕ್ಕೆ ಹೊರಟು ಮಧ್ಯಾಹ್ನ 1:10ಕ್ಕೆ ಖಜುರಾಹೋ ತಲುಪಲಿದೆ.
ರೈಲು ಸಂಖ್ಯೆ 26421: ಖಜುರಾಹೋದಿಂದ ಬೆಳಗ್ಗೆ 3:20ಕ್ಕೆ ಹೊರಟು ರಾತ್ರಿ 11ಕ್ಕೆ ವಾರಣಾಸಿ ತಲುಪಲಿದೆ.
ಲಕ್ನೋ-ಸಹರಾನ್‌ಪುರ ವಂದೇ ಭಾರತ್ ಎಕ್ಸ್‌ಪ್ರೆಸ್ದೂರ: 534 ಕಿ.ಮೀ.
ಪ್ರಯಾಣ ಸಮಯ: 7 ಗಂಟೆ 45 ನಿಮಿಷ.
ನಿಲುಗಡೆಗಳು: ಸೀತಾಪುರ, ಶಾಹಜಹಾನ್‌ಪುರ, ಬರೇಲಿ, ಮೊರಾದಾಬಾದ್, ನಜೀಬಾಬಾದ್, ರೂರ್ಕಿ.
ರೈಲು ಸಂಖ್ಯೆ 26504: ಲಕ್ನೋದಿಂದ ಬೆಳಗ್ಗೆ 5 ಗಂಟೆಗೆ ಹೊರಟು ಮಧ್ಯಾಹ್ನ 12:45ಕ್ಕೆ ಸಹರಾನ್‌ಪುರ ತಲುಪಲಿದೆ.
ರೈಲು ಸಂಖ್ಯೆ 26503: ಸಹರಾನ್‌ಪುರದಿಂದ ಸಂಜೆ 3 ಗಂಟೆಗೆ ಹೊರಟು ರಾತ್ರಿ 11ಕ್ಕೆ ಲಕ್ನೋ ತಲುಪಲಿದೆ.
ಈ ಹೊಸ ರೈಲುಗಳು ರಾಜ್ಯಗಳ ನಡುವಿಣ ಪ್ರಯಾಣವನ್ನು ವೇಗಗೊಳಿಸುವುದಲ್ಲದೆ ಆರಾಮದಾಯಕಗೊಳಿಸಲಿವೆ. ಇದರಿಂದ ಭಾರತೀಯ ರೈಲ್ವೆಯ ಆಧುನಿಕೀಕರಣ ಅಭಿಯಾನಕ್ಕೆ ಇನ್ನಷ್ಟು ಗತಿ ದೊರೆಯಲಿದೆ.









