ವನ್ಯಜೀವಿ ಸಂರಕ್ಷಣೆಯ ವಂತಾರಾ ಕೇಂದ್ರ ಉದ್ಘಾಟಿಸಿದ ಪ್ರಧಾನಿ ಮೋದಿ

ಮಂಗಳವಾರದಂದು ಗುಜರಾತ್‌ನಲ್ಲಿರುವ 1.5 ಲಕ್ಷಕ್ಕೂ ಹೆಚ್ಚು ರಕ್ಷಿಸಲ್ಪಟ್ಟ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿರುವ ವಂತಾರಾ ಕೇಂದ್ರವನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಿದ್ದಾರೆ.ಇದೆ ವೇಳೆ ವಿಶ್ವ ದರ್ಜೆಯ ವನ್ಯಜೀವಿ ರಕ್ಷಣೆ ಮತ್ತು ಸಂರಕ್ಷಣಾ ಕೇಂದ್ರ ವಂತಾರಾದಲ್ಲಿರುವ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿದ್ದಲ್ಲದೆ ಅಲ್ಲಿ ಪುನರ್ವಸತಿ ಮಾಡಲಾದ ವಿವಿಧ ಜಾತಿಯ ಪ್ರಾಣಿಗಳನ್ನು ವೀಕ್ಷಿಸಿದರು.

Written by - Manjunath Naragund | Last Updated : Mar 4, 2025, 03:44 PM IST
  • ಪ್ರಧಾನಮಂತ್ರಿ ಅವರು ಆಸ್ಪತ್ರೆಯ ಎಂಆರ್ಐ ಕೊಠಡಿಗೆ ಭೇಟಿ ನೀಡಿ, ಏಷ್ಯಾಟಿಕ್ ಸಿಂಹಕ್ಕೆ ಎಂಆರ್ಐ ಮಾಡಿಸಿಕೊಳ್ಳುವುದನ್ನು ವೀಕ್ಷಿಸಿದರು.
  • ಚಿರತೆಯನ್ನು ರಕ್ಷಿಸಿದ ನಂತರ ಇಲ್ಲಿಗೆ ತರಲಾಗುತ್ತಿದ್ದ ಆಪರೇಷನ್ ಥಿಯೇಟರ್‌ಗೂ ಭೇಟಿ ನೀಡಿದರು.
  • ಕೇಂದ್ರದಲ್ಲಿ ರಕ್ಷಿಸಲಾದ ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನವನ್ನು ಪ್ರತಿಬಿಂಬಿಸುವ ಸ್ಥಳಗಳಲ್ಲಿ ಇರಿಸಲಾಗುತ್ತದೆ.
 ವನ್ಯಜೀವಿ ಸಂರಕ್ಷಣೆಯ ವಂತಾರಾ ಕೇಂದ್ರ ಉದ್ಘಾಟಿಸಿದ ಪ್ರಧಾನಿ ಮೋದಿ

ಜಾಮ್ ನಗರ:  ಮಂಗಳವಾರದಂದು ಗುಜರಾತ್‌ನಲ್ಲಿರುವ 1.5 ಲಕ್ಷಕ್ಕೂ ಹೆಚ್ಚು ರಕ್ಷಿಸಲ್ಪಟ್ಟ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿರುವ ವಂತಾರಾ ಕೇಂದ್ರವನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಿದ್ದಾರೆ.ಇದೆ ವೇಳೆ ವಿಶ್ವ ದರ್ಜೆಯ ವನ್ಯಜೀವಿ ರಕ್ಷಣೆ ಮತ್ತು ಸಂರಕ್ಷಣಾ ಕೇಂದ್ರ ವಂತಾರಾದಲ್ಲಿರುವ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿದ್ದಲ್ಲದೆ ಅಲ್ಲಿ ಸಂರಕ್ಷಿಸಿರುವ ವಿವಿಧ ಜಾತಿಯ ಪ್ರಾಣಿಗಳನ್ನು ವೀಕ್ಷಿಸಿದರು.

Add Zee News as a Preferred Source

ವಂತಾರಾದ ವನ್ಯಜೀವಿ ಆಸ್ಪತ್ರೆಗೆ ಭೇಟಿ ನೀಡಿ, ಎಂಆರ್‌ಐ, ಸಿಟಿ ಸ್ಕ್ಯಾನ್‌ಗಳು, ಐಸಿಯುಗಳು ಸೇರಿದಂತೆ ಇತರ ಸೌಲಭ್ಯಗಳನ್ನು ಹೊಂದಿರುವ ಪಶುವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿದರು. ಈ ಆಸ್ಪತ್ರೆಯು ವನ್ಯಜೀವಿ ಅರಿವಳಿಕೆ, ಹೃದ್ರೋಗ, ಮೂತ್ರಪಿಂಡಶಾಸ್ತ್ರ, ಎಂಡೋಸ್ಕೋಪಿ, ದಂತ ಚಿಕಿತ್ಸೆ ಮತ್ತು ಆಂತರಿಕ ಔಷಧ ಸೇರಿದಂತೆ ಬಹು ವಿಭಾಗಗಳನ್ನು ಹೊಂದಿದೆ. 

ಈ ಹಿಂದೆ ಭಾರತದಲ್ಲಿ ಹೇರಳವಾಗಿದ್ದ ಕಂದು ಬಣ್ಣದ ಕಾಡು ಬೆಕ್ಕುಗಳು ಈಗ ಅಳಿವಿನಂಚಿನಲ್ಲಿವೆ.ಈಗ ಅವುಗಳನ್ನು ಈ ವಂತಾರದಲ್ಲಿ ಸಂತಾನೋತ್ಪತ್ತಿ ಮೂಲಕ ಅಭಿವೃದ್ದಿಪಡಿಸಿ ನಂತರ ಅವುಗಳನ್ನು ಕಾಡಿಗೆ ಬಿಡಲಾಗುತ್ತದೆ.ಕೇಂದ್ರದಲ್ಲಿ ರಕ್ಷಿಸಲಾದ ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನವನ್ನು ಪ್ರತಿಬಿಂಬಿಸುವ ಸ್ಥಳಗಳಲ್ಲಿ ಇರಿಸಲಾಗುತ್ತದೆ.ಈ ವಂತಾರಾ ಕೇಂದ್ರದಲ್ಲಿ ಪ್ರಮುಖವಾಗಿ ಏಷ್ಯಾಟಿಕ್ ಸಿಂಹ, ಹಿಮ ಚಿರತೆ ಮತ್ತು ಒಂದು ಕೊಂಬಿನ ಘೇಂಡಾಮೃಗಗಳನ್ನು ಸಂರಕ್ಷಿಸಲಾಗುತ್ತದೆ.

 

ಪ್ರಧಾನಮಂತ್ರಿ ಅವರು ಆಸ್ಪತ್ರೆಯ ಎಂಆರ್ಐ ಕೊಠಡಿಗೆ ಭೇಟಿ ನೀಡಿ, ಏಷ್ಯಾಟಿಕ್ ಸಿಂಹಕ್ಕೆ ಎಂಆರ್ಐ ಮಾಡುವುದನ್ನು ವೀಕ್ಷಿಸಿದರು.ಇದೆ ವೇಳೆ ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದ ನಂತರ ಜೀವ ಉಳಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಚಿರತೆಯನ್ನು ರಕ್ಷಿಸಿದ ನಂತರ ಇಲ್ಲಿಗೆ ತರಲಾಗುತ್ತಿದ್ದ ಆಪರೇಷನ್ ಥಿಯೇಟರ್‌ಗೂ ಭೇಟಿ ನೀಡಿದರು. ಜೊತೆಗೆ ಏಷ್ಯಾಟಿಕ್ ಸಿಂಹದ ಮರಿಗಳು, ಬಿಳಿ ಸಿಂಹದ ಮರಿ, ಚಿರತೆ ಮರಿ (ಅಳಿವಿನಂಚಿನಲ್ಲಿರುವ ಪ್ರಭೇದ) ಮತ್ತು ಕ್ಯಾರಕಲ್ ಮರಿ (ಕಂದು ಬಣ್ಣದ ಬೆಕ್ಕು) ಸೇರಿದಂತೆ ವಿವಿಧ ಜಾತಿಗಳ ಪ್ರಾಣಿಗಳಿಗೆ ಆಹಾರವನ್ನು ನೀಡಿದರು. 

ಪ್ರಧಾನಿ ಅವರು ವಂತಾರಕ್ಕೆ ನೀಡಿದ ಭೇಟಿ ವೇಳೆ ಹುಲಿ, ಹಾಗೂ ನಾಲ್ಕು ಹಿಮದ ಹುಲಿ, ಒಂದು ಬಿಳಿ ಸಿಂಹ ಮತ್ತು ಒಂದು ಹಿಮ ಚಿರತೆಗಳ ಜೊತೆ ಸಂತಸದ ಸಮಯವನ್ನು ಕಳೆದರು. ಜೊತೆಗೆ ಅಲ್ಲಿರುವ ಚಿಂಪಾಂಜಿ, ಜೀಬ್ರಾ,ಮತ್ತು ಘೇಂಡಾಮೃಗ, ಹೆಬ್ಬಾವು ಮರಿ ಚಿರತೆ,ದೈತ್ಯ ನೀರುನಾಯಿ, ಬೊಂಗೊ,ಇನ್ನೂ ಮುಂತಾದ ಸಂರಕ್ಷಣಾ ಕೇಂದ್ರದಲ್ಲಿರುವ ಪ್ರಾಣಿಗಳ ಜೊತೆಗೆ ಆಟವಾಡಿದ್ದಲ್ಲದೆ ಅವುಗಳನ್ನು ಸಂರಕ್ಷಿಸುವ ವಿಧಾನದ ಬಗ್ಗೆ ಅಲ್ಲಿನ ವೈದ್ಯರು, ಸಹಾಯಕ ಸಿಬ್ಬಂದಿ ಮತ್ತು ಕಾರ್ಮಿಕರಿಂದ ಮಾಹಿತಿ ಪಡೆದುಕೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Trending News