ನವದೆಹಲಿ: COVID 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಮತ್ತು ನಾಳೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದೀರ್ಘವಾದ ಸಭೆ ನಡೆಸಲಿದ್ದಾರೆ.


COMMERCIAL BREAK
SCROLL TO CONTINUE READING

ಇಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ‌ ಜೊತೆ ಸಮಾಲೋಚನೆ ನಡೆಯಲಿದೆ. ಪಂಜಾಬ್, ಅಸ್ಸಾಂ, ಕೇರಳ, ಉತ್ತರಾಖಂಡ, ಜಾರ್ಖಂಡ್, ಛತ್ತೀಸ್ಘಡ, ತ್ರಿಪುರ, ಹಿಮಾಚಲ ಪ್ರದೇಶ, ಚಂಡೀಗಢ, ಗೋವಾ, ಮಣಿಪುರ, ನಾಗಾಲ್ಯಾಂಡ್, ಲಡಾಖ್, ಪುದುಚೇರಿ, ಅರುಣಾಚಲ ಪ್ರದೇಶ, ಮೇಘಾಲಯ, ಮಿಜೋರಾಂ, ದಾದಾಮನ್, ನಡಾಬಾರ್ ಸಿಕ್ಕಿಂ ಮತ್ತು ಲಕ್ಷದ್ವೀಪ‌ಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ.


ಕರೋನಾ: 62 ದಿನ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಬಿಲ್ ನೋಡಿ 2 ಬಾರಿ ಹೃದಯಾಘಾತ


ನಾಳೆ 15 ರಾಜ್ಯಗಳ ಮುಖ್ಯಮಂತ್ರಿ ಮತ್ತು ಲೆಫ್ಟಿನೆಂಟ್ ಗವರ್ನರ್ ಗಳ ಜೊತೆ ಚರ್ಚೆ ಇರಲಿದೆ.‌ ನಾಳೆ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ (Maharashtra), ತಮಿಳುನಾಡು, ದೆಹಲಿ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಆಂಧ್ರಪ್ರದೇಶ, ಹರಿಯಾಣ, ಜಮ್ಮು ಕಾಶ್ಮೀರ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತದೆ.


ಚೀನಾದಲ್ಲಿ ಮತ್ತೆ ಕರೋನಾವೈರಸ್ ಸೋಂಕಿನ ಬೆದರಿಗೆ


ದೇಶದಲ್ಲೇ ಅತಿಹೆಚ್ಚು‌ ಕೊರೊನಾ‌ ಇರುವ ಮಹಾರಾಷ್ಟ್ರ, ದೆಹಲಿ, ಗುಜರಾತ್ ಮತ್ತು ತಮಿಳುನಾಡಿನಂತಹ ರಾಜ್ಯಗಳೊಂದಿಗೆ ನಾಳೆ ಚರ್ಚೆಯಾಗಲಿದೆ. ಈ ರಾಜ್ಯಗಳಲ್ಲಿ ಕೊರೊನಾವೈರಸ್ (Coronavirus)  COVID 19 ವ್ಯಾಪಕವಾಗಿ ಹರಡಲು ಕಾರಣ ಏನೆಂಬ ಬಗ್ಗೆ ಸಮಾಲೋಚನೆ ನಡೆಯಲಿದೆ.


ಕೋವಿಡ್ -19 (Covid-19) ಬಿಕ್ಕಟ್ಟು ಆರಂಭವಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಕಳೆದ 88 ದಿನಗಳಲ್ಲಿ 6ನೇ ಬಾರಿಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತಿದ್ದಾರೆ. ಇದಕ್ಕೂ‌‌ ಮೊದಲು ಮಾರ್ಚ್ 20, ಏಪ್ರಿಲ್ 2, ಏಪ್ರಿಲ್ 11, ಏಪ್ರಿಲ್ 27 ಮತ್ತು ಮೇ 11 ರಂದು ವಿಡಿಯೋ ಕಾನ್ಫರೆನ್ಸ್ ಮಾಡಿದ್ದರು.


ದೆಹಲಿಯಲ್ಲಿ ಕರೋನವೈರಸ್ ಹೆಚ್ಚಳದ ಮಧ್ಯೆ AIIMS ವತಿಯಿಂದ 24x7 COVID-19 ಸಹಾಯವಾಣಿ


ಎರಡು ದಿನ ನಡೆಯುವ ಈ ಸಭೆಯಲ್ಲಿ, ಕೇಂದ್ರ ಸರ್ಕಾರವು ಈ COVID 19 ತಡೆಗಟ್ಟುವ ಬಗ್ಗೆ ರಾಜ್ಯಗಳಿಂದ ವರದಿಯನ್ನು ಪಡೆದು ಬಳಿಕ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಅನ್ಲಾಕ್ -1 ಅನ್ನು ಮೂಲಕ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಉಂಟಾದ ಪರಿಸ್ಥಿತಿಯನ್ನು ಸಹ ಚರ್ಚಿಸಬಹುದು. ಅಲ್ಲದೆ ಮುಂದಿನ ದಿನಗಳಲ್ಲಿ COVID 19 ಅನ್ನು ಎದುರಿಸಲು ಮುಖ್ಯಮಂತ್ರಿಗಳಿಂದ ಸಲಹೆಗಳನ್ನು ತೆಗೆದುಕೊಳ್ಳಬಹುದು.


ದೇಶದಲ್ಲೇ ಅತಿಹೆಚ್ಚು COVID 19 ಪ್ರಕರಣಗಳಿರುವ ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಮತ್ತು ಗುಜರಾತ್ ಗಳಿಗೆ ಪ್ರತ್ಯೇಕವಾದ ಯೋಜನೆಗಳನ್ನು ರೂಪಿಸುವ ಬಗ್ಗೆಯೂ ಸಮಗ್ರ ಚರ್ಚೆ ಆಗುವ ಸಾಧ್ಯತೆಗಳಿವೆ. ಅದೇ ರೀತಿ ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾದಂತಹ ಮಹಾನಗರಗಳಲ್ಲಿ COVID 19 ತೀವ್ರವಾಗಿ ಹರಡುತ್ತಿರುವುದರಿಂದ ಮಹಾನಗರಗಳಿಗೆ  ಪ್ರತ್ಯೇಕ ಯೋಜನೆಯನ್ನು ರೂಪಿಸುವ ಬಗ್ಗೆಯೂ‌ ಚರ್ಚೆಯಾಗಲಿದೆ ಎಂದು ತಿಳಿದುಬಂದಿದೆ.


ದೆಹಲಿಯ ಮಾರುಕಟ್ಟೆಗಳು ಮತ್ತೆ ಮುಚ್ಚಲ್ಪಡುತ್ತವೆಯೇ? CAIT ಸಮೀಕ್ಷೆಯಲ್ಲಿ ವ್ಯಾಪಾರಿಗಳ ಸಂಘ ಹೇಳಿದ್ದೇನು?


ರೈಲು ಮತ್ತು ವಿಮಾನಯಾನವನ್ನು ಹೆಚ್ಚಿಸುವ ಬಗ್ಗೆ ವಿವಿಧ ರಾಜ್ಯಗಳು ವಿವಿಧ ರೀತಿಯ ಅಭಿಪ್ರಾಯ ಹೊಂದಿರುವ ಈ ಬಗ್ಗೆಯೂ ಚರ್ಚಿಸಲಾಗುವುದು. ಅಲ್ಲದೆ ದೇಶದೆಲ್ಲೆಡೆ ವೈದ್ಯಕೀಯ ಸೌಲಭ್ಯಗಳ‌ ಕೊರತೆ ಕಂಡುಬರುತ್ತಿರುವುದರಿಂದ ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮನ್ವಯ ನಡೆಸುವ ಬಗ್ಗೆ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ.


COVID 19 ಪರಿಸ್ಥಿತಿ ನಿಭಾಯಿಸಲು ಹಣಕಾಸಿನ ಕೊರತೆ ಇರುವುದರಿಂದ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು‌ ಸಹ ಕೆಲ ರಾಜ್ಯಗಳು ಬೇಡಿಕೆ ಇಡಲಿವೆ ಎಂದು ತಿಳಿದುಬಂದಿದೆ.