ಪ್ರಧಾನಿ ಮೋದಿ ಮಾವಿನ ಹಣ್ಣನ್ನು ತಿನ್ನುವ ಮೊದಲು ಯೋಚಿಸ್ತಾರಂತೆ, ಯಾಕ್ ಗೊತ್ತಾ?

ವಾಸ್ತವವಾಗಿ, ಅಕ್ಷಯ್ ಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಮೊದಲಿಗೆ 'ನಮ್ಮ ಚಾಲಕರ ಮಗಳು ನಮ್ಮ ಪ್ರಧಾನಿ ಮಾವಿನ ಹಣ್ಣು ತಿಂತಾರಾ ಎಂದು ಕೇಳುತ್ತಿದ್ದರು' ಎಂದು ಪ್ರಶ್ನಿಸಿದರು.

Last Updated : Apr 24, 2019, 10:09 AM IST
ಪ್ರಧಾನಿ ಮೋದಿ ಮಾವಿನ ಹಣ್ಣನ್ನು ತಿನ್ನುವ ಮೊದಲು ಯೋಚಿಸ್ತಾರಂತೆ, ಯಾಕ್ ಗೊತ್ತಾ? title=

ನವದೆಹಲಿ: 2019 ರ ಲೋಕಸಭೆ ಚುನಾವಣೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ವಿಶೇಷ ಸಂದರ್ಶನವನ್ನು ನಡೆಸಿದ್ದಾರೆ. ಈ ವೇಳೆ ಅವರ ಜೀವನಕ್ಕೆ ಸಂಬಂಧಿಸಿದಂತೆ ಜೀವನದ ಅತಿಸೂಕ್ಷ್ಮ ಅಂಶಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನದ ಆರಂಭದಲ್ಲಿ, ಅಕ್ಷಯ್ ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುವ ವೇಳೆ ಪ್ರಧಾನ ಮಂತ್ರಿ ತಮ್ಮ  ಬಾಲ್ಯವನ್ನು ನೆನಪಿಸಿಕೊಂಡು ನಸು ನಕ್ಕರು.

ವಾಸ್ತವವಾಗಿ, ಅಕ್ಷಯ್ ಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಮೊದಲಿಗೆ 'ನಮ್ಮ ಚಾಲಕರ ಮಗಳು ನಮ್ಮ ಪ್ರಧಾನಿ ಮಾವಿನ ಹಣ್ಣು ತಿಂತಾರಾ ಎಂದು ಕೇಳುತ್ತಿದ್ದರು'. ಒಂದು ವೇಳೆ ನೀವೂ ಮಾವಿನ ಹಣ್ಣನ್ನು ತಿನ್ನುವುದಾದರೆ ಅದನ್ನು ಕತ್ತರಿಸಿ ತಿನ್ನುತ್ತೀರೋ ಅಥವಾ ಸಾಮಾನ್ಯವಾಗಿ ಕತ್ತರಿಸದೆ ಹಾಗೆಯೇ ಉಂಡೆ ಹಣ್ಣನ್ನು ಕಚ್ಚಿ ತಿನ್ನುತ್ತೀರೋ ಎಂದು ಕೇಳಿದರು.

ಈ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ, 'ಹೌದು, ನಾನು ಮಾವಿನ ಹಣ್ಣನ್ನು ತಿನ್ನುತ್ತೇನೆ ಮತ್ತು ಮಾವಿನ ಹಣ್ಣು ಎಂದರೆ ನನಗೆ ಬಹಳ ಇಷ್ಟ. ಗುಜರಾತ್ನಲ್ಲಿ ಮಾವಿನ ರಸದ ಸಂಪ್ರದಾಯವಿದೆ. ನಾನು ಚಿಕ್ಕವನಾಗಿದ್ದಾಗ, ಮಾವಿನ ಹಣ್ಣನ್ನು ಖರೀದಿಸುವುದು ನಮಗೆ ಕೇವಲ ಸಾಮಾನ್ಯ ವಿಷಯವಲ್ಲ. ವಾಸ್ತವವಾಗಿ, ನಮ್ಮ ರೈತರು ಬಹಳ ಉದಾರರಾಗಿದ್ದಾರೆ. ನಾವು ಮಾವಿನ ತೋಟಕ್ಕೆ ಹೋದಾಗ ನಮ್ಮ ರೈತರು ನಮ್ಮನ್ನು ತಡೆಯುತ್ತಿರಲಿಲ್ಲ. ಹೌದು, ಕಳ್ಳತನದ ಬಗ್ಗೆ ಖಂಡಿತವಾಗಿಯೂ ಖಂಡಿಸುತ್ತೇನೆ. ಆದರೆ, ನಾನು ಮರದ ಮೇಲತ್ತಿ ಹೆಚ್ಚು ಮಾಗಿದ ಮಾವಿನಹಣ್ಣನ್ನು ಕಿತ್ತಿ ತಿನ್ನುವುದೆಂದರೆ ನನಗೆ ಅತಿ ಪ್ರಿಯ ಎಂದರು.'

'ನಾವು ದೊಡ್ಡವರಾದಂತೆ ಹಲವು ವಿಧದ ಮಾವಿನ ಹಣ್ಣುಗಳು ಸಿಗುತ್ತಿವೆ. ಆದರೆ ಈಗ ಮಾವಿನ ಹಣ್ಣನ್ನು ತಿನ್ನುವುದಕ್ಕೆ ಯೋಚಿಸಬೇಕಾಗುತ್ತದೆ. ನಾನು ಹಣ್ಣನ್ನು ತಿನ್ನಬೇಕೇ? ಎಷ್ಟು ತಿನ್ನಬೇಕು? ಅಥವಾ ತಿನ್ನಬಾರದೇ ಎಂದು ಯೋಚಿಸಬೇಕು ಎಂದು ಹೇಳಿದರು.
 

Trending News