ಅಂತರಾಷ್ಟ್ರೀಯ ಯೋಗ ದಿನಾಚರಣೆಯಂದು ರಾಷ್ಟ್ರವನ್ನುದ್ದೇಶಿಸಿ ಮೋದಿ ಭಾಷಣ

ಅಂತರಾಷ್ಟ್ರೀಯ ಯೋಗ ದಿನಾಚರಣೆ ( International Yoga Day)ಯಂದು ಪಿಎಂ ನರೇಂದ್ರ ಮೋದಿ (PM Narendra Modi) ಅವರು ಭಾನುವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಜೂನ್ 21 ರಂದು ನವದೆಹಲಿಯಿಂದ ಬೆಳಿಗ್ಗೆ 6.30 ಕ್ಕೆ ಪ್ರಧಾನಿ ನೇರ ಭಾಷಣ ಮಾಡಲಿದ್ದಾರೆ.

Last Updated : Jun 21, 2020, 12:28 AM IST
ಅಂತರಾಷ್ಟ್ರೀಯ ಯೋಗ ದಿನಾಚರಣೆಯಂದು ರಾಷ್ಟ್ರವನ್ನುದ್ದೇಶಿಸಿ ಮೋದಿ ಭಾಷಣ  title=
file photo

ನವದೆಹಲಿ: ಅಂತರಾಷ್ಟ್ರೀಯ ಯೋಗ ದಿನಾಚರಣೆ ( International Yoga Day)ಯಂದು ಪಿಎಂ ನರೇಂದ್ರ ಮೋದಿ (PM Narendra Modi) ಅವರು ಭಾನುವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಜೂನ್ 21 ರಂದು ನವದೆಹಲಿಯಿಂದ ಬೆಳಿಗ್ಗೆ 6.30 ಕ್ಕೆ ಪ್ರಧಾನಿ ನೇರ ಭಾಷಣ ಮಾಡಲಿದ್ದಾರೆ.

ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗದ ತಂಡವು 45 ನಿಮಿಷಗಳ ಸಾಮಾನ್ಯ ಯೋಗ ಪ್ರೋಟೋಕಾಲ್ (ಸಿವೈಪಿ) ನ ನೇರ ಪ್ರದರ್ಶನದ ನಂತರ ಪ್ರಧಾನಿ ಮೋದಿ ಅವರ ಭಾಷಣ ನಡೆಯಲಿದೆ.ಆಯುಷ್ ಸಚಿವಾಲಯವು ಲೇಹ್‌ನಲ್ಲಿ ಅದ್ದೂರಿ ಕಾರ್ಯಕ್ರಮವೊಂದನ್ನು ನಡೆಸಲು ಯೋಜಿಸಿತ್ತು ಮತ್ತು ಪ್ರಧಾನಿ ಮೋದಿ ಅವರು ಈ ಕಾರ್ಯಕ್ರಮಕ್ಕೆ ಹಾಜರಾಗಬೇಕಿತ್ತು, ಆದರೆ ದೇಶದಲ್ಲಿ ಕೋವಿಡ್ -19 ಬಿಕ್ಕಟ್ಟಿನಿಂದಾಗಿ ಅದನ್ನು ರದ್ದುಪಡಿಸಲಾಯಿತು.

ಇದನ್ನೂ ಓದಿ: Watch: ಯೋಗ ದಿನ ಕಾರ್ಯಕ್ರಮದಲ್ಲಿ ವಿಶ್ವದ ಅತ್ಯಂತ ಕುಬ್ಜ ಮಹಿಳೆ! ವೀಡಿಯೋ ಆಯ್ತು ವೈರಲ್

ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆಚರಿಸಲಾಗುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನ ಮಂತ್ರಿ ಮೋದಿಯವರ ಭಾಷಣವು ಮುಖ್ಯ ಹೈಲೆಟ್ ಎಂದು ಆಯುಷ್ ಸಚಿವಾಲಯ ಗುರುವಾರ ತಿಳಿಸಿದೆ."ಕೋವಿಡ್ -19 ನಿಂದಾಗಿ ಉಂಟಾದ ಪ್ರಸ್ತುತ ಜಾಗತಿಕ ಆರೋಗ್ಯ ತುರ್ತುಸ್ಥಿತಿಯ ಕಾರಣದಿಂದಾಗಿ, ಈ ವರ್ಷ ಅಂತಹ ಆಚರಣೆಗಳ ಮೇಲೆ ಕಡಿಮೆ ಗಮನಹರಿಸಲಾಗಿದೆ ಮತ್ತು ಇಡೀ ಕುಟುಂಬದ ಸಹಭಾಗಿತ್ವದಲ್ಲಿ ಆಯಾ ಮನೆಗಳಲ್ಲಿ ಯೋಗವನ್ನು ಪ್ರದರ್ಶಿಸುವ ಜನರ ಮೇಲೆ ಹೆಚ್ಚು ಗಮನ ಹರಿಸಲಾಗಿದೆ" ಎಂದು ಸಚಿವಾಲಯ ತಿಳಿಸಿದೆ.

ಜೂನ್ 21, 2015 ರ ನಂತರ ಮೊದಲ ಬಾರಿಗೆ ಯೋಗ ದಿನವನ್ನು ಡಿಜಿಟಲ್ ರೂಪದಲ್ಲಿ ಆಚರಿಸಲಾಗುವುದು. ಈ ವರ್ಷ ಯೋಗ ದಿನಾಚರಣೆಯನ್ನು  'ಮನೆಯಲ್ಲಿ ಯೋಗ ಮತ್ತು ಕುಟುಂಬದೊಂದಿಗೆ ಯೋಗ' ಎನ್ನುವ ಥೀಮ್ ಮೂಲಕ ಆಚರಿಸಲಾಗುತ್ತಿದೆ.2014 ರ ಡಿಸೆಂಬರ್ 11 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಜೂನ್ 21 ಅನ್ನು ‘ಅಂತರರಾಷ್ಟ್ರೀಯ ಯೋಗ ದಿನ’ ಎಂದು ಘೋಷಿಸಿತು, ಇದನ್ನು ಮೊದಲ ಬಾರಿಗೆ ಮೋದಿ ಪ್ರಸ್ತಾಪಿಸಿದ ನಂತರ ಕಾರ್ಯ ರೂಪಕ್ಕೆ ತರಲಾಯಿತು.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ಮನೆಗಳಲ್ಲಿಯೇ ಯೋಗ ದಿನವನ್ನು ಆಚರಿಸಬೇಕೆಂದು ಪಿಎಂ ಮೋದಿ ಗುರುವಾರ ವೀಡಿಯೊ ಸಂದೇಶದಲ್ಲಿ ಜನರಿಗೆ ಮನವಿ ಮಾಡಿದ್ದರು.
 

Trending News