ಪ್ರಧಾನಿ ನರೇಂದ್ರ ಮೋದಿಯ ಪೂರ್ಣ ಅಧಿಕಾರಾವಧಿಯಲ್ಲಿ ಹಿಂಸಾಚಾರ: ಮಾಯಾವತಿ ಟೀಕೆ

ನರೇಂದ್ರ ಮೋದಿ ಅವಧಿಯಲ್ಲಿ ಗುಜರಾತ್ ನಲ್ಲಿ ಬರೀ ಕೋಮುಗಲಭೆಗಳೇ' ನಡೆದಿವೆ. ಆದರೆ ನಮ್ಮ ಸರ್ಕಾರದಲ್ಲಿ ಉತ್ತರ ಪ್ರದೇಶವು ಗಲಭೆಗಳು ಮತ್ತು ಅರಾಜಕತೆಯಿಂದ ಮುಕ್ತವಾಗಿತ್ತು ಎಂದು ಮಾಯಾವತಿ ಹೇಳಿದ್ದಾರೆ.

Last Updated : May 15, 2019, 01:01 PM IST
ಪ್ರಧಾನಿ ನರೇಂದ್ರ ಮೋದಿಯ ಪೂರ್ಣ ಅಧಿಕಾರಾವಧಿಯಲ್ಲಿ ಹಿಂಸಾಚಾರ: ಮಾಯಾವತಿ ಟೀಕೆ title=

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಉತ್ತರ ಪ್ರದೇಶ ಮಾಜಿ ಸಿಎಂ ಹಾಗೂ ಬಹುಜನ ಸಮಾಜಪಕ್ಷದ ಮುಖ್ಯಸ್ಥೆ ಮಾಯಾವತಿ, ಪ್ರಧಾನಿ ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ಪೂರ್ಣ ಅಧಿಕಾರವಧಿಯಲ್ಲಿ ರಾಜ್ಯದಲ್ಲಿ ಬರೀ ಹಿಂಸಾಚಾರ ನಡೆದಿತ್ತು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ಅವಧಿ ಬಗ್ಗೆ ಸುದ್ದಿ ಸಂಸ್ಥೆ ಎಎನ್ಐಗೆ ಹೇಳಿಕೆ ನೀಡಿರುವ ಮಾಯಾವತಿ, ಬಿಜೆಪಿ ಮತ್ತು ಕೋಮುವಾದಕ್ಕೆ ಕಪ್ಪು ಕಲೆ ಇದ್ದಂತೆ ಹೊರತು ಮತ್ತೇನೂ ಅಲ್ಲ ಎಂದಿದ್ದಾರೆ. ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಂತೆಯೇ ನಾನೂ ಸಹ ಉತ್ತರಪ್ರದೇಶದಲ್ಲಿ ನಾಲ್ಕು ಅವಧಿಗೆ ಮುಖ್ಯಮಂತ್ರಿ ಆಗಿದ್ದೆ. ಮೋದಿ ಅವಧಿಯಲ್ಲಿ ಗುಜರಾತ್ ನಲ್ಲಿ ಬರೀ ಕೋಮುಗಲಭೆಗಳೇ' ನಡೆದಿವೆ. ಆದರೆ ನಮ್ಮ ಸರ್ಕಾರದಲ್ಲಿ ಉತ್ತರ ಪ್ರದೇಶವು ಗಲಭೆಗಳು ಮತ್ತು ಅರಾಜಕತೆಯಿಂದ ಮುಕ್ತವಾಗಿತ್ತು ಎಂದು ಮಾಯಾವತಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ "ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಿಗೆ ಬಂದಾಗ ನಮ್ಮ ಸರ್ಕಾರ 'ಅರ್ಹ' ಸರ್ಕಾರ ಎನಿಸಿಕೊಳ್ಳುತ್ತದೆ. ಆದರೆ ಬಿಜೆಪಿ 'ಆಡಳಿತ ನಡೆಸಲು ಅನರ್ಹ' ಎಂಬುದನ್ನು ಸಾಬೀತುಪಡಿಸಿದೆ. ಮೋದಿ ಪ್ರಧಾನಿಯಾಗಿ ಮತ್ತು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅವಧಿ ಸಂಪೂರ್ಣವಾಗಿ ಹಿಂಸಾಚಾರದಿಂದ ಕೂಡಿವೆ. ಅವರು ಸಾರ್ವಜನಿಕ ಆಡಳಿತ ನಡೆಸಲು ಅಸಮರ್ಥರಾಗಿದ್ದಾರೆ ಎಂದು ಬಿಎಸ್ಪಿ ಮುಖಸ್ಥೆ ಮಾಯಾವತಿ ಟೀಕಿಸಿದ್ದಾರೆ.
 

Trending News