ಖ್ಯಾತ ಉರ್ದು ಶಾಯರಿ ಹಾಗೂ ಗಝಲ್ ಬರಹಗಾರ Rahat Indori ಕೊರೊನಾ ಪಾಸಿಟಿವ್

ಮಧ್ಯ ಪ್ರದೇಶದಲ್ಲಿ ಕರೋನಾ ಪ್ರಕರಣಗಳು ಸಂಖ್ಯೆ ವೇಗವಾಗಿ ಹೆಚ್ಚುತ್ತಿವೆ. ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 39 ಸಾವಿರ ಗಡಿ ದಾಟಿದೆ.

Last Updated : Aug 11, 2020, 10:44 AM IST
ಖ್ಯಾತ ಉರ್ದು ಶಾಯರಿ ಹಾಗೂ ಗಝಲ್ ಬರಹಗಾರ Rahat Indori ಕೊರೊನಾ ಪಾಸಿಟಿವ್  title=

ಇಂದೋರ್: ಖ್ಯಾತ ಶಾಯರ್ ಹಾಗೂ ಕವಿ ರಾಹತ್ ಇಂದೌರಿ (Rahat Indori) ಕೂಡ ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಇಂದೋರ್‌ನಲ್ಲಿ ತಡರಾತ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಖುದ್ದು ಅವರೇ  ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ. ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿರುವ ಅವರು, " ಕೋವಿಡ್‌ನ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡ ನಂತರ ನಿನ್ನೆ ನನ್ನನ್ನು ಕರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ನನ್ನ ವರದಿ ಸಕಾರಾತ್ಮಕ ಹೊರಬಂದಿದೆ. ಪ್ರಸ್ತುತ ನಾನು ಅರಬಿಂದೋ ಆಸ್ಪತ್ರೆಗೆ ದಾಖಲಾಗಿದ್ದು, ಆದಷ್ಟು ಬೇಗ ರೋಗನ್ನು ಸೋಲಿಸಲು ನನಗಾಗಿ ಪ್ರಾರ್ಥಿಸಿ" ಎಂದಿದ್ದಾರೆ.

ಇನ್ನೊಂದೆಡೆ ನನಗಾಗಲಿ ಅಥವಾ ನನ್ನ ಕುಟುಂಬ ಸದಸ್ಯರಿಗಾಗಲಿ ನನ್ನ ಕುರಿತು ಮಾಹಿತಿ ಕೇಳಿ ಫೋನ್ ಮಾಡಬೇಡಿ. ನನ್ನ ಆರೋಗ್ಯದ ಬಗ್ಗೆ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಮೂಲಕ ನಿಮಗೆ ಮಾಹಿತಿ ಸಿಗಲಿದೆ ಎಂದು ರಾಹತ್ ಇಂದೋರಿ ಮನವಿ ಮಾಡಿದ್ದಾರೆ.

ರಾಹತ್ ಇಂದೋರಿ ಖ್ಯಾತ ಉರ್ದು ಶಾಯರಿ ಬರಹಗಾರರಾಗಿದ್ದಾರೆ. ಬಾಲಿವುಡ್ ನ ಹಲವು ಚಿತ್ರಗಳ ಹಾಡುಗಳಿಗೆ ಅವರು ಸಾಹಿತ್ಯ ರಚಿಸಿದ್ದಾರೆ. ಕೊರೊನಾ ವರದಿ ಪಾಸಿಟಿವ್ ಬರುತ್ತಲೇ, ವೈದ್ಯರ ಸಲಹೆಯ ಮೇರೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ  ವೇಗವಾಗಿ ಹೆಚ್ಚುತ್ತಿದೆ. ರಾಜ್ಯದಲ್ಲಿ ಕರೋನಾ ರೋಗಿಗಳ ಸಂಖ್ಯೆ 39 ಸಾವಿರ ದಾಟಿದೆ. ಇದೇ ವೇಳೆ, ಸಾವಿನ ಸಂಖ್ಯೆ ಒಂದು ಸಾವಿರಕ್ಕೆ ತಲುಪಿದೆ. ರಾಜ್ಯದ ಒಟ್ಟು ರೋಗಿಗಳ ಸಂಖ್ಯೆ 39 ಸಾವಿರ 25ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 868 ಹೊಸ ರೋಗಿಗಳು ರಾಜ್ಯದಲ್ಲಿ ಪತ್ತೆಯಾಗಿದ್ದಾರೆ. ಇಂದೋರ್‌ನಲ್ಲಿ ಅತಿ ಹೆಚ್ಚು 173 ರೋಗಿಗಳಿದ್ದು, ಒಟ್ಟು ರೋಗಿಗಳ ಸಂಖ್ಯೆ 8516 ತಲುಪಿದೆ. ಭೋಪಾಲ್ ನಲ್ಲಿ ರೋಗಿಗಳ ಸಂಖ್ಯೆ 7681 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 142 ಹೊಸ ರೋಗಿಗಳು ಪತ್ತೆಯಾಗಿದ್ದಾರೆ. 

ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಮರಣ ಹೊಂದುತ್ತಿರುವ ರೋಗಿಗಳ ಸಂಖ್ಯೆಯಲ್ಲಿಯೂ ಕೂಡ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 19 ರೋಗಿಗಳು ಈ ಮಾರಕ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಮರಣ ಹೊಂದಿದವರ ಸಂಖ್ಯೆ 996ಕ್ಕೆ ತಲುಪಿದೆ. ಇಂದೋರ್ ನಲ್ಲಿ ಇದುವರೆಗೆ 333 ಹಾಗೂ ಭೋಪಾಲ್ ನಲ್ಲಿ 214 ರೋಗಿಗಳು ಮರಣಹೊಂದಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಸಕ್ರೀಯ ರೋಗಿಗಳ ಸಂಖ್ಯೆ 9009 ಇದೆ. ಇದುವರೆಗೆ 29020 ಸೊಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

Trending News