Viral news today: ಇಂದು ಸಮಾಜದಲ್ಲಿ ದಿನದಿಂದ ದಿನಕ್ಕೆ ಮೌಲ್ಯಗಳು ಕ್ಷೀಣಿಸುತ್ತಿವೆ. ಅತಿಯಾದ ಆಸೆ ಮತ್ತು ದುರಾಸೆಗಳು ಮನುಷ್ಯನಿಗೆ ವಿವೇಚನೆ ಕಳೆದುಕೊಳ್ಳುವಂತೆ ಮಾಡುತ್ತಿವೆ. ಹಣ ಸಂಪಾದಿಸಬೇಕೆಂಬ ಆತುರ ಮತ್ತು ಐಶಾರಾಮಿ ಜೀವನ ನಡೆಸಬೇಕೆಂಬ ವ್ಯಾಮೋಹಕ್ಕೆ ಬಿದ್ದು ಅನೇಕರು ತಪ್ಪು ದಾರಿ ಹಿಡಿಯುತ್ತಿದ್ದಾರೆ. ಇದೀಗ ನಾವು ಹೇಳುತ್ತಿರುವ ಈ ಘಟನೆಯ ಬಗ್ಗೆ ತಿಳಿದ ನಂತರ ಒಬ್ಬ ಹೆಂಡತಿ ಯಾವ ರೀತಿ ತಪ್ಪುದಾರಿಗೆ ಹೆಜ್ಜೆ ಇಡುತ್ತಾಳೆ! ಅವಳು ಮಾಡಿದ ತಪ್ಪಿಗೆ ಆಕೆಗೆ ಏನು ಶಿಕ್ಷೆ ಸಿಗುತ್ತದೆ ಅನ್ನೋದು ಗೊತ್ತಾದ್ರೆ ನೀವು ಆಶ್ಚರ್ಯಪಡುತ್ತೀರಿ. ಇದು ಹಳೆಯ ಸ್ಟೋರಿ ಆದರೂ ತುಂಬಾ ಇಂಟರೆಸ್ಟಿಂಗ್ ಆಗಿದೆ.
ಛತ್ತೀಸ್‍ಘಡದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶಿಶುಪಾಲ್ ತನ್ನ ತಂದೆ-ತಾಯಿಗಳೊಂದಿಗೆ ಜ್ಯೋತಿ ಎಂಬಾಕೆಯನ್ನು ನೋಡಲು ಹೋಗಿದ್ದ. ಮೊದಲ ನೋಟದಲ್ಲೇ ಜ್ಯೋತಿ ಆತನಿಗೆ ಇಷ್ಟವಾಗಿದ್ದಳು. ಹೀಗಾಗಿ ಎರಡು ಕುಟುಂಬಗಳ ನಡುವೆ ಮಾತುಕತೆ ನಡೆಯಿತು. ಇದಾದ ಕೆಲವೇ ದಿನಗಳಲ್ಲಿ ಇವರಿಬ್ಬರ ವಿವಾಹವು ಅದ್ದೂರಿಯಾಗಿ ನಡೆಯಿತು. ಮದುವೆಯ ನಂತರ ಮೊದಲ ರಾತ್ರಿಯಲ್ಲಿ ಶಿಶುಪಾಲ್, ಜ್ಯೋತಿಗೆ ನಾವು ಮೂರ್ನಾಲ್ಕು ವರ್ಷಗಳವರೆಗೆ ಮಕ್ಕಳನ್ನು ಮಾಡಿಕೊಳ್ಳುವುದು ಬೇಡ. ಸ್ವಲ್ಪ ದಿನಗಳ ಕಾಲ ಸಂತೋಷವಾಗಿ ಜೀವನ ಅನುಭವಿಸೋಣ. ಆನಂತರ ಮಕ್ಕಳನ್ನು ಮಾಡಿಕೊಳ್ಳೋಣ ಎಂದು ಹೇಳಿದ್ದನಂತೆ.
ಮತ್ತೆ ಮೂರು ವರ್ಷ ಕಳೆದು ಎಂಟು ವರ್ಷವಾದರೂ ಮಕ್ಕಳಾಗದ ಕಾರಣ ವೈದ್ಯರನ್ನು ಸಂಪರ್ಕಿಸಲು ದಂಪತಿ ನಿರ್ಧರಿಸಿದರು. ಆದರೆ ಶಿಶುಪಾಲ್ ಭಯದಿಂದ ವೈದ್ಯರ ಬಳಿ ಹೋಗಲು ಹಿಂಜರಿದನು. ಈ ವಿಷಯದಿಂದ ಗಂಡ-ಹೆಂಡತಿ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಇಬ್ಬರ ನಡುವಿನ ಮನಸ್ತಾಪ, ಜಗಳ, ಗದ್ದಲ-ಗಲಾಟೆಯಿಂದ ಕೋಲಾಹಲವೇ ಆಗತ್ತಿತ್ತು. ಇದು ವಿಪರೀತವಾಗಿ ದೈಹಿಕ ಹಲ್ಲೆಯವರೆಗೂ ಹೋಗುತ್ತಿತ್ತು.
ಅದೇ ಸಮಯದಲ್ಲಿ ಭಾರತದಲ್ಲಿ ಟಿಕ್‌ಟಾಕ್ ಪ್ರಸಿದ್ಧಿಯಾಗಿತ್ತು. ಅನೇಕರು ಟಿಕ್‌ಟಾಕ್ ಮೂಲಕ ಪ್ರಸಿದ್ಧರಾಗುವುದನ್ನ ಗಮನಿಸಿದ ಜ್ಯೋತಿ ತಾನು ಸಹ ವಿಡಿಯೋಗಳನ್ನು ಮಾಡಿ ಹೆಸರು ಗಳಿಸಬೇಕೆಂದು ಯೋಚಿಸಿದಳು. ಗಂಡನಿಗೆ ತಿಳಿಯದಂತೆ ಡ್ಯಾನ್ಸ್ ವಿಡಿಯೋಗಳನ್ನು ಟಿಕ್‌ಟಾಕ್‌ನಲ್ಲಿ ಅಪ್ಲೋಡ್ ಮಾಡಲು ಪ್ರಾರಂಭಿಸಿದಳು. ಇದೇ ಸಮಯದಲ್ಲಿ ಜೈಸಿಂಗ್ ಎಂಬ ವ್ಯಕ್ತಿ ಟಿಕ್‌ಟಾಕ್‌ನಲ್ಲಿ ಜ್ಯೋತಿಯ ವಿಡಿಯೋಗಳನ್ನು ನೋಡಿ ಆಕರ್ಷಿತನಾಗಿದ್ದ. ಆಕೆಯೊಂದಿಗೆ ಟಿಕ್‌ಟಾಕ್ ವಿಡಿಯೋಗಳನ್ನು ಮಾಡಲು ಬಯಸಿದ. ಅಂದಿನಿಂದ ಅವರಿಬ್ಬರು ಒಟ್ಟಾಗಿ ವಿಡಿಯೋಗಳನ್ನು ಮಾಡಲು ಪ್ರಾರಂಭಿಸಿದ್ದರು.
ಶಿಶುಪಾಲ್ ಡ್ಯೂಟಿ ಮಾಡಲು ಬೆಳಗ್ಗೆ ಪೊಲೀಸ್ ಠಾಣೆಗೆ ಹೋದ ನಂತರ ಅತ್ತ ಜ್ಯೋತಿ, ಜೈಸಿಂಗ್ ಜೊತೆ ಫೋನ್ ಕರೆಗಳು ಮತ್ತು ಚಾಟ್‌ಗಳಲ್ಲಿ ಸಮಯ ಕಳೆಯುತ್ತಿದ್ದಳಂತೆ.
ಇದನ್ನೂ ಓದಿ: 67 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ : 764 ಅಪಾರ್ಟ್‌ಮೆಂಟ್‌ಗಳು, 3,820 ಜನ..
ದಿನಗಳು ಕಳೆದಂತೆ ಜ್ಯೋತಿಗೆ ಜೈಸಿಂಗ್‌ನನ್ನ ನೇರವಾಗಿ ಭೇಟಿಯಾಗಬೇಕೆಂಬ ಆಸೆ ಹೆಚ್ಚಾಯಿತು. ಆಗ ಶಿಶುಪಾಲ್ ಡ್ಯೂಟಿಗೆ ಹೋದ ನಂತರ ಜ್ಯೋತಿ, ಜೈಸಿಂಗ್‌ನ ಮನೆಗೆ ಕರೆಸಿಕೊಳ್ಳಲು ಪ್ಲಾನ್ ಮಾಡಿದಳು. ಆದರೆ ಅವರು ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರಿಂದ ಯಾರಾದರೂ ಗಮನಿಸಿದರೆ ಶಿಶುಪಾಲ್‌ಗೆ ತಿಳಿಯುತ್ತದೆಂದು ಭಯಪಟ್ಟಿದ್ದಳು. ಹೀಗಾಗಿ ಜ್ಯೋತಿ ಒಂದು ಯೋಜನೆ ರೂಪಿಸಿ ಜೈಸಿಂಗ್‌ಗೆ ಫೋನ್ ಮಾಡಿ ಡೆಲಿವರಿ ಬಾಯ್ ಡ್ರೆಸ್ ಹಾಕಿಕೊಂಡು ಫುಡ್ ಡೆಲಿವರಿ ಮಾಡುವ ರೀತಿ ಮನೆಗೆ ಬರಲು ಹೇಳಿದಳು. ಅದೇ ರೀತಿ ಜೈಸಿಂಗ್ ಮಾಡಿ ಜ್ಯೋತಿ ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದನು. ಜ್ಯೋತಿ ಫುಡ್ ಡೆಲಿವರಿ ತೆಗೆದುಕೊಳ್ಳುವಂತೆ ನಟಿಸಿ ಆತನಿಗೆ ನೀರು ಕೊಡುವ ನೆಪದಲ್ಲಿ ಒಳಗೆ ಕರೆಸಿಕೊಂಡು ಬಾಗಿಲು ಹಾಕಿಕೊಂಡುಬಿಡುತ್ತಿದ್ದಳು. ಹೀಗೆ ಅವರಿಬ್ಬರ ನಡುವೆ ಬಹಳ ದಿನಗಳಿಂದ ಇದ್ದ ಆಸೆಗಳು ತೀವ್ರಗೊಂಡು ತಕ್ಷಣ ಕೋಣೆಗೆ ಹೋಗಿ ತಮ್ಮ ಎಲ್ಲಾ ಆಟಗಳನ್ನು ಮುಗಿಸಿಕೊಂಡರು.
ಆ ಇಡೀರಾತ್ರಿ ಜೈಸಿಂಗ್‌ನೊಂದಿಗೆ ಕಳೆದ ಕ್ಷಣಗಳೇ ಜ್ಯೋತಿಗೆ ನೆನಪಾಗುತ್ತಿದ್ದವು. ಇದರಿಂದ ಆಕೆಗೆ ತನ್ನ ಗಂಡನ ಮೇಲೆ ಆಸಕ್ತಿಯೇ ಕಡಿಮೆಯಾಯಿತು. ಮರುದಿನದಿಂದ ಜೈಸಿಂಗ್ ಮತ್ತೆ ಡೆಲಿವರಿ ಬಾಯ್ ಆಗಿ ಜ್ಯೋತಿ ಮನೆಗೆ ಬಂದು ಹೋಗುತ್ತಿದ್ದ. ಹೀಗೆ ಕೆಲವು ದಿನಗಳು ಕಳೆದವು. ಜ್ಯೋತಿ ತನ್ನ ಗಂಡನ ಜೊತೆಗೆ ಮೊದಲಿನಂತೆ ಜಗಳವಾಡುವುದನ್ನು ನಿಲ್ಲಿಸಿದ್ದಳು. ಆದರೆ ಶಿಶುಪಾಲ ಇದ್ಯಾವುದನ್ನೂ ತಲೆಗೆ ಹಾಕಿಕೊಂಡಿರಲಿಲ್ಲ. ಒಂದು ದಿನ ಜ್ಯೋತಿಗೆ ಮುಟ್ಟು ನಿಂತ ಕಾರಣ ಅನುಮಾನ ಬಂದು ರಹಸ್ಯವಾಗಿ ಪ್ರೆಗ್ನೆನ್ಸಿ ಕಿಟ್‌ನಿಂದ ಪರೀಕ್ಷಿಸಿದ್ದಳು. ಆಗ ಅವಳಿಗೆ ಗರ್ಭಧಾರಣೆ ಖಚಿತವಾಗಿತ್ತು.
ಆಗ ಆಕೆಗೆ ಒಂದು ಕಡೆ ಸಂತೋಷ, ಇನ್ನೊಂದು ಕಡೆ ಭಯ ಉಂಟಾಯಿತು. ಈ ವಿಷಯವನ್ನು ಶಿಶುಪಾಲ್‌ಗೆ ಹೇಳಿದ್ರೆ ಆತ ಒಪ್ಪುತ್ತಾನೆಂದು ಯೋಚಿಸುತ್ತಿದ್ದಳು. ಅದೇ ದಿನ ಮನೆಗೆ ಬಂದ ಶಿಶುಪಾಲ್, ಜ್ಯೋತಿಗೆ ಒಂದು ವಿಷಯ ತಿಳಿಸುತ್ತಾನೆ. ʼತಾನು ವೈದ್ಯರನ್ನು ಸಂಪರ್ಕಿಸಿದ್ದು, ತನ್ನ ಸ್ಪರ್ಮ್ ಕೌಂಟ್ ಕಡಿಮೆ ಇರುವುದರಿಂದ ಮಕ್ಕಳಾಗುತ್ತಿಲ್ಲವಂತೆ. ಐವಿಎಫ್ ಮೂಲಕ ಪ್ರಯತ್ನಿಸಲು ವೈದ್ಯರು ಸಲಹೆ ನೀಡಿದ್ದಾರೆʼ ಅಂತಾ ಹೇಳುತ್ತಾನೆ. ಈ ವಿಷಯ ಕೇಳಿದ ಜ್ಯೋತಿಗೆ ಆಆಕಾಶವೇ ತಲೆ ಮೇಲೆ ಬಿದ್ದಂತಹ ಅನುಭವವಾಯಿತು. ಮುಂದೆ ಏನು ಮಾಡಬೇಕೆಂದು ತೋಚದೆ ಆಕೆ ಕಂಗಾಲಾದಳು. ಕೂಡಲೇ ಆಕೆ ಜೈಸಿಂಗ್‌ಗೆ ಫೋನ್ ಮಾಡಿ ವಿಷಯ ತಿಳಿಸಿದಳು. ನಾವಿಬ್ಬರೂ ಎಲ್ಲಾದರೂ ಓಡಿ ಹೋಗಿ ಮದುವೆಯಾಗೋಣ. ಮುಂದೆ ಹುಟ್ಟಲಿರುವ ಮಗುವನ್ನು ಚೆನ್ನಾಗಿ ಬೆಳೆಸೋಣ ಅಂತಾ ಹೇಳಿದಳು. ಈ ವಿಷಯ ಕೇಳಿ ಜೈಸಿಂಗ್‌ಗೆ ಶಾಕ್ ಉಂಟಾಯಿತು. ಆಗ ಆತ ನಾನು ನೇರವಾಗಿ ನಿನ್ನನ್ನು ಭೇಟಿಯಾಗಬೇಕು ಅಂತಾ ಜ್ಯೋತಿಗೆ ಹೇಳುತ್ತಾನೆ.
ಅದರಂತೆ ಒಂದು ದಿನ ಜೈಸಿಂಗ್‌ನನ್ನ ಭೇಟಿಯಾಗಲು ಜ್ಯೋತಿ ಆತ ಹೇಳಿದ ಸ್ಥಳಕ್ಕೆ ಹೋಗುತ್ತಾಳೆ. ಅಲ್ಲಿ ಆಕೆ ಜೈಸಿಂಗ್‌ಗೆ ಮುಂದೆ ಏನು ಮಾಡಬೇಕು ಅನ್ನೋದರ ಬಗ್ಗೆ ಹೇಳುತ್ತಾಳೆ. ಬಹಳ ದಿನಗಳ ನಂತರ ನನ್ನ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದ್ದು, ಇದರಿಂದ ನನಗೆ ತುಂಬಾ ಖುಷಿಯಾಗಿದೆ. ಈ ಮಗು ನನಗೆ ಬೇಕು. ಈ ಮಗುವಿಗಾಗಿ ನಾನು ನನ್ನ ಗಂಡನನ್ನು ಬಿಟ್ಟು ನಿನ್ನ ಜೊತೆಗೆ ಜೀವನ ಕಳೆಯಲು ನಿರ್ಧರಿಸಿದ್ದೇನೆ. ನಾವಿಬ್ಬರೂ ಎಲ್ಲಿಯಾದರೂ ದೂರ ಓಡಿಹೋಗೋಣ. ಈ ಮಗುವನ್ನು ಚೆನ್ನಾಗಿ ಬೆಳೆಸಿ ಸಾಕೋಣ. ಅದಕ್ಕಾಗಿ ನಾನು ಮನೆಯಿಂದ ಹಣ ಮತ್ತು ಚಿನ್ನಾಭರಣ ಎಲ್ಲವನ್ನೂ ತಂದಿದ್ದೇನೆ ಅಂತಾ ಹೇಳುತ್ತಾಳೆ. ಇದನ್ನು ಕೇಳಿದ ಜೈಸಿಂಗ್‌ಗೆ ಜ್ಯೋತಿ ಬಳಿ ಇರುವ ಹಣ ಮತ್ತು ಚಿನ್ನದ ಮೇಲೆ ಕಣ್ಣುಬಿದ್ದಿತು.
ಇದನ್ನೂ ಓದಿ: ಪತ್ನಿಯ ಚಿತಾಭಸ್ಮ ವಿಸರ್ಜನೆಗೆ ಬಂದಿದ್ದ ಪತಿಯೇ ಸುಟ್ಟು ಬೂದಿ!ಇಬ್ಬರು ಹೆಣ್ಣು ಮಕ್ಕಳನ್ನು ಅನಾಥವಾಗಿಸಿದ ವಿಮಾನ ದುರಂತ
ಆತ ನನಗೆ ಈಗಾಗಲೇ ಮದುವೆಯಾಗಿ ಮಕ್ಕಳು ಇವೆ. ನಾನು ನಿನ್ನ ಜೊತೆಗೆ ಮತ್ತೆ ಮದುವೆಯಾಗಲು ಸಾಧ್ಯವಿಲ್ಲ. ನಿನ್ನ ಜೊತೆಗೆ ಬೇಕಾದರೆ ಸಂಬಂಧ ಮುಂದುವರೆಸುತ್ತೇನೆ. ನೀನು ಅಬಾರ್ಷನ್ ಮಾಡಿಸಿಕೋ ಅಂತಾ ಹೇಳುತ್ತಾನೆ. ಆತನ ಮಾತಿಗೆ ಸಿಟ್ಟಾದ ಜ್ಯೋತಿ, ನಿನಗೆ ನನ್ನ ಸರ್ವಸ್ವವನ್ನೇ ಧಾರೆ ಎರೆದಿದ್ದೇನೆ. ಈಗ ನೋಡಿದ್ರೆ ನೀನು ನನಗೆ ಮೋಸ ಮಾಡುತ್ತೀಯಾ? ನಾನು ಹೇಳಿದ ಹಾಗೆ ಕೇಳು... ಇಲ್ಲದಿದ್ರೆ ನಿನ್ನ ಮೇಲೆ ಪೊಲೀಸ್ ಕಂಪ್ಲೇಟ್ ಕೊಡುತ್ತೇನೆ. ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ ಅಂತಾ ನನ್ನ ಗಂಡನಿಗೆ ಹೇಳುತ್ತೇನೆ ಹುಷಾರ್ ಅಂತಾ ಹೆದರಿಸುತ್ತಾಳೆ. ಈ ವೇಳೆ ಮಾತಿಗೆ ಮಾತು ಬೆಳೆದು ಜೈಸಿಂಗ್ ಕೋಪದಲ್ಲಿ ಜ್ಯೋತಿಯನ್ನ ಹಿಡಿದು ಗೋಡೆಗೆ ಡಿಕ್ಕಿ ಹೊಡೆಸುತ್ತಾನೆ. ನಂತರ ಆಕೆಗೆ ಚಾಕುವಿನಿಂದ ಇರಿದು ಕೊಂದು ಆಕೆಯ ಬಳಿ ಇದ್ದ ಹಣ ಚಿನ್ನಾಭರಣ ಕದ್ದು ಎಸ್ಕೇಪ್ ಆಗುತ್ತಾನೆ. ಅತಿಯಾಸೆ ಮತ್ತು ದುರಾಸೆಯಿಂದ ಜ್ಯೋತಿ ಹೀಗೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಾಳೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ