ಹೊಸ ಪೋಲಿಯೋ ವೈರಸ್ ಪತ್ತೆ...ಮಕ್ಕಳಿಗೆ ಹೈಅಲರ್ಟ್..!
10 ವರ್ಷಗಳ ನಂತರ ಕೋಲ್ಕತ್ತಾದಲ್ಲಿ ಮತ್ತೆ ಪೋಲಿಯೊ ವೈರಸ್ ಪತ್ತೆಯಾಗಿರುವುದು ಈಗ ಆತಂಕಕ್ಕೆ ಕಾರಣವಾಗಿದೆ.
ನವದೆಹಲಿ: 10 ವರ್ಷಗಳ ನಂತರ ಕೋಲ್ಕತ್ತಾದಲ್ಲಿ ಮತ್ತೆ ಪೋಲಿಯೊ ವೈರಸ್ ಪತ್ತೆಯಾಗಿರುವುದು ಈಗ ಆತಂಕಕ್ಕೆ ಕಾರಣವಾಗಿದೆ.
2011ರಲ್ಲಿ ಹೌರಾದಲ್ಲಿ ಕೊನೆಯ ಬಾರಿಗೆ ಮಗುವಿನ ದೇಹದಲ್ಲಿ ಪೋಲಿಯೊ ಪತ್ತೆಯಾಗಿತ್ತು. ಇದಾದ ಬಳಿಕ 2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೊ ಮುಕ್ತ ದೇಶ ಎಂದು ಘೋಷಿಸಿತ್ತು.
ಆರೋಗ್ಯ ಇಲಾಖೆ ಮೂಲಗಳ ಪ್ರಕಾರ, ಮೆಟಿಯಾಬುರುಜ್ ಪ್ರದೇಶದಲ್ಲಿ ಕೊಳಚೆ ನೀರಿನಲ್ಲಿ ಪೋಲಿಯೊ ರೋಗಾಣುಗಳು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮೆಟಿಯಾಬುರುಜ್ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಿದೆ.ಅಷ್ಟೇ ಅಲ್ಲದೆ ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: Early Marriage Tips: ವಿವಾಹ ಯೋಗ ಕೂಡಿ ಬರುತ್ತಿಲ್ಲವೇ? ಇಂದೇ ಈ ಉಪಾಯ ಅನುಸರಿಸಿ
10 ವರ್ಷಗಳ ನಂತರ, ಕೋಲ್ಕತ್ತಾದಲ್ಲಿ ಪೋಲಿಯೊ ವೈರಸ್ ಪತ್ತೆಯಾಗಿರುವುದು ಈಗ ಕಳವಳಕ್ಕೆ ಕಾರಣವಾಗಿದೆ.ಯುನಿಸೆಫ್ ಜೊತೆಗಿನ ಜಂಟಿ ಸಹಭಾಗಿತ್ವದ ಮೆಟಿಯಾಬುರುಜ್ ಪ್ರದೇಶದಲ್ಲಿ ಪೋಲಿಯೊ ವೈರಸ್ ಪತ್ತೆಯಾಗಿದೆ. ಇಂತಹ ಸಮೀಕ್ಷೆಗಳನ್ನು ಕೋಲ್ಕತ್ತಾದ ವಿವಿಧ ಕೊಳೆಗೇರಿ ಪ್ರದೇಶಗಳಲ್ಲಿ ಸಾಂದರ್ಭಿಕವಾಗಿ ನಡೆಸಲಾಗುತ್ತದೆ.
ಇದನ್ನೂ ಓದಿ: ಈ ಆಟಗಾರನ ವೇಗದ ಬೌಲಿಂಗ್ ನೋಡಿ ಫಿದಾ ಆದ ದಿಲೀಪ್ ವೆಂಗಸರ್ಕಾರ್..!
ಪೋಲಿಯೋ ವೈರಸ್ ಪತ್ತೆಯಾದ ನಂತರ ಮೆಟಾಬುರುಜ್ ಪ್ರದೇಶದಲ್ಲಿ ಎಲ್ಲಿಯೂ ಸಾರ್ವಜನಿಕ ಮಲವಿಸರ್ಜನೆ ಮಾಡಬಾರದು, ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳ ಮೇಲೆ ವಿಶೇಷ ನಿಗಾ ಇರಿಸುವಂತೆ ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ನಿರ್ದೇಶನ ನೀಡಲಾಗಿದೆ. ಜೊತೆಗೆ ಅಂತಹ ಮಕ್ಕಳ ಮಲ ಮಾದರಿಗಳನ್ನು ಪರೀಕ್ಷಿಸಲು ಸಹ ಸೂಚಿಸಲಾಗಿದೆ, ಮತ್ತು ಲಸಿಕೆಯನ್ನು ನೀಡಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ.
2011ರಲ್ಲಿ ಹೌರಾದ 12 ವರ್ಷದ ಬಾಲಕಿಗೆ ಪೋಲಿಯೊ ಇರುವುದು ಪತ್ತೆಯಾಗಿತ್ತು. ಮಾರ್ಚ್ 27, 2014 ರಂದು ಭಾರತವನ್ನು ಪೋಲಿಯೊ ಮುಕ್ತ ದೇಶವೆಂದು ಗುರುತಿಸಲಾಯಿತು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.