ವಿಜ್ಞಾನಿಗಳಿಗೆ ಸವಾಲಾಗಿದ್ದ ಯೋಗಿ ಪ್ರಹ್ಲಾದ್ ಜಾನಿ ನಿಧನ, 76 ವರ್ಷ ಅನ್ನ-ನೀರು ತ್ಯಜಿಸಿದ್ದರು ಈ ಯೋಗಿ

ಜಲವೇ ಜೀವನ ಮತ್ತು ನೀರಿಲ್ಲದೆ ಬದುಕುವುದು ಕಷ್ಟ ಮಾತ್ರವಲ್ಲ ಅಸಾಧ್ಯ ಎಂದು ಹೇಳಲಾಗುತ್ತದೆ. ಆದರೆ ಯೋಗಿ ಪ್ರಹ್ಲಾದ್ ಜಾನಿ ಉರ್ಫ್ ಚುನ್ರಿವಾಲಾ ಮಾತಾಜಿ 'ಜಲ್ ಹಿ ಜೀವನ್ ಹೈ' ಎಂಬ ಹಿಂದಿ ನಾಣ್ನುಡಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದರು,

Last Updated : May 26, 2020, 09:54 PM IST
ವಿಜ್ಞಾನಿಗಳಿಗೆ ಸವಾಲಾಗಿದ್ದ ಯೋಗಿ ಪ್ರಹ್ಲಾದ್ ಜಾನಿ ನಿಧನ, 76 ವರ್ಷ ಅನ್ನ-ನೀರು ತ್ಯಜಿಸಿದ್ದರು ಈ ಯೋಗಿ title=

ನವದೆಹಲಿ: ಜಲವೇ ಜೀವನ ಮತ್ತು ನೀರಿಲ್ಲದೆ ಬದುಕುವುದು ಕಷ್ಟ ಮಾತ್ರವಲ್ಲ ಅಸಾಧ್ಯ ಎಂದು ಹೇಳಲಾಗುತ್ತದೆ. ಆದರೆ ಯೋಗಿ ಪ್ರಹ್ಲಾದ್ ಜಾನಿ ಉರ್ಫ್ ಚುನ್ರಿವಾಲಾ ಮಾತಾಜಿ 'ಜಲ್ ಹಿ ಜೀವನ್ ಹೈ' ಎಂಬ ಹಿಂದಿ ನಾಣ್ನುಡಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದರು, ಎಪ್ಪತ್ತು ವರ್ಷಗಳಿಗಿಂತ ಹೆಚ್ಚು ಕಾಲ ಆಹಾರ ಮತ್ತು ನೀರು ಸೇವಿಸದೆ ಜೀವಂತವಾಗಿರುವುದಾಗಿ ಹೇಳಿಕೊಂಡಿದ್ದ ಯೋಗಿ ಪ್ರಹ್ಲಾದ್ ಜಾನಿ ಅಲಿಯಾಸ್ ಚುನ್ರಿವಾಲಾ ಮಾತಾಜಿ ಗುಜರಾತ್‌ನ ಗಾಂಧಿನಗರ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಅವರ ಶಿಷ್ಯರು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಜಾನಿ ತಮ್ಮ ಹುಟ್ಟೂರು ಗ್ರಾಮವಾದ ಚರದಾದಲ್ಲಿ ಕೊನೆಯುಸಿರೆಳೆದಿದ್ದಾರೆ. ಗುಜರಾತ್‌ನಲ್ಲಿ ಈ ಯೋಗಿಗೆ ಅಪಾರ ಸಂಖ್ಯೆಯ ಅನುಯಾಯಿಗಳಿದ್ದಾರೆ.

ಯಾವುದೇ ರೀತಿಯ ಆಹಾರ ಮತ್ತು ನೀರು ಸೇವಿಸದೆ ಇಷ್ಟು ಕಾಲ ಬದುಕಿರುವುದಾಗಿ ಹೇಳಿಕೆ ನೀಡಿದ್ದ ಪ್ರಹ್ಲಾದ್ ಜಾನಿ ಅವರ ಹೇಳಿಕೆಯನ್ನು 2003 ಹಾಗೂ 201೦ ರಲ್ಲಿ ವಿಜ್ಞಾನಿಗಳೂ ಕೂಡ ಪರಿಕ್ಷಿಸಿದ್ದಾರೆ. ಈ ಕುರಿತು ಹೇಳಿಕೆ ನೀಡದ ಜಾನಿ, ದೇವಿಯೇ ತನ್ನನ್ನು ಜೀವಂತವಾಗಿಟ್ಟಿರುವ ಕಾರಣ ಅನ್ನ-ಜಲ ಸೇವಿಸುವ ಅಗತ್ಯತೆ ಬೀಳುವುದಿಲ್ಲ ಎಂದು ಹೇಳಿದ್ದರು. ಏತನ್ಮಧ್ಯೆ ಜಾನಿ ಅವರ ಪಾರ್ಥಿವ ಶರೀರವನ್ನು ಬಾನಸ್ಕಾಂತಾ ಜಿಲ್ಲೆಯ ಅಂಬಾಜಿ ದೇವಸ್ಥಾನದ ಬಳಿ ಇರುವ ಆಶ್ರಮ ಕಡಿಮೆ ಮತ್ತು ಗುಹೆಯಲ್ಲಿ ಕೊಂಡೊಯ್ಯಲಾಗಿದೆ.

ಅವರ ನಿಧನದ ಕುರಿತು ಪ್ರಕಟಿಸಲಾಗಿರುವ ಹೇಳಿಕೆಯಲ್ಲಿ, "ಮಾತಾಜಿ ತನ್ನ ಮೂಲ ಸ್ಥಾನದಲ್ಲಿ ಸ್ವಲ್ಪ ಸಮಯ ಕಳೆಯುವ ಇಚ್ಛೆ ಪ್ರಕಟಿಸಿದ್ದರು. ಹೀಗಾಗಿ ಅವರನ್ನು ಚರಡಾ ಗ್ರಾಮಕ್ಕೆ ತರಲಾಗಿತ್ತು. ಇಂದು ಪ್ರಾತಃಕಾಲದಲ್ಲಿ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಅಲ್ಪಕಾಲದವರೆಗೆ ಅನುಯಾಯಿಗಳ ದರ್ಶನಕ್ಕಾಗಿ ಅವರ ಆಶ್ರಮದಲ್ಲಿಡಲಾಗುವುದು. ಬಳಿಕ ಬುಧವಾರ ಅವರ ಆಶ್ರಮದಲ್ಲಿಯೇ ಅವರ ಸಮಾಧಿ ನಿರ್ಮಿಸಲಾಗುವುದು" ಎಂದು ಹೇಳಲಾಗಿದೆ.

ದೇವಿ ಅಂಬಾಬಾಯಿಯಾ ಮೇಲೆ ಅಚಲ ಭಕ್ತಿ ಹೊಂದಿದ್ದ ಜಾನಿ, ಎಲ್ಲಾ ಸಮಯದಲ್ಲಿ ಚುನರಿ(ಚುನ್ನಿ) ಧರಿಸಿ ಮಹಿಳೆಯರಂತೆ ಬಧುಕುತ್ತಿದ್ದರು. ಇದಕ್ಕಾಗಿ ಅವರನ್ನು ಚುನರಿವಾಲಾ ಮಾತಾಜಿ ಎಂದೂ ಕೂಡ ಸಂಬೋಧಿಸಲಾಗುತ್ತಿತ್ತು. ಅವರು ತಮ್ಮ ಜೀವನದ 76 ವರ್ಷಗಳನ್ನು ಅನ್ನ-ನೀರಿಲ್ಲದೆ ಕಳೆದಿದ್ದರು ಎಂದು ಹೇಳಿಕೊಂಡಿದ್ದರು. ಆಧ್ಯಾತ್ಮಿಕ ಅನುಭೂತಿಯ ಹುಡುಕಾಟದಲ್ಲಿ ಅವರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಮನೆಯನ್ನು ತ್ಯಜಿಸಿದ್ದರು. ತನ್ನ ವಯಸ್ಸಿನ 14ನೇ ವಯಸ್ಸಿನಿಂದಲೇ ಜಾನಿ ಆಹಾರ ಮತ್ತು ನೀರು ಕೂಡ ತ್ಯಜಿಸಿದ್ದರು ಎಂದು ಅವರ ಅನುಯಾಯಿಗಳು ಹೇಳುತ್ತಾರೆ.

ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಜಾನಿ ಅಂಬಾಜಿ ದೇವಸ್ಥಾನದ ಬಳಿ ಇದ್ದ ಒಂದು ಚಿಕ್ಕ ಗುಹೆಯನ್ನು ತನ್ನ ಮನೆಯನ್ನಾಗಿ ಮಾಡಿಕೊಂಡಿದ್ದರು. ಬಳಿಕ ಅವರು 'ಗಾಳಿಯ ಮೇಲೆ ಬದುಕುವ' ಯೋಗಿ ಎಂದೇ ಅವರು ಖ್ಯಾತಿ ಪಡೆದುಕೊಂಡಿದ್ದರು. 2010 ರಲ್ಲಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಗೆ ಸೇರಿದ ಇನ್ಸ್ಟಿಟ್ಯೂಟ್ ಆಫ್ ಫಿಸಿಯಾಲಾಜಿ ಅಂಡ್ ಅಲೈಡ್ ಸೈನ್ಸಸ್ ವಿಜ್ಞಾನಿಗಳು ಹಾಗೂ ವೈದ್ಯರು, ಜಾನಿ ಆಹಾರ ಮತ್ತು ನೀರಿಲ್ಲದೆ ಹೇಗೆ ಬದುಕುತ್ತಾರೆ ಎಂಬುದನ್ನು ತಿಳಿದುಕೊಳ್ಳಲು 15 ದಿನಗಳ ಕಾಲ ಅವರ ನಿರೀಕ್ಷಣೆ ನಡೆಸಿದ್ದರು. ಬಳಿಕೆ ಹೇಳಿಕೆ ಪ್ರಕಟಿಸಿದ್ದ DIPAS, ಹಸಿವು ಮತ್ತು ನೀರಿನ ಸೇವನೆಯಿಂದ ಪಾರಾಗಲು ಕೆಲ ಪುನರುಕ್ತಿ ಹೊಂದಾಣಿಕೆ ಅನುಸರಿಸುತ್ತಾರೆ ಎಂದು ಹೇಳಿತ್ತು.

Trending News