'ಅರವಿಂದ ಕೇಜ್ರಿವಾಲ್ ಭಯೋತ್ಪಾದಕರಾಗಿದ್ದು, ಈ ಕುರಿತು ಹಲವು ಸಾಕ್ಷ್ಯಾಧಾರಾಗಳಿವೆ'

ಕೆಜ್ರಿವಾಲ್ ಬೆನ್ನಿಗೆ ನಿಂತ ದೆಹಲಿ ಜನರು ಇದೀಗ ಅವರ ವಿರೋಧದಲ್ಲಿ ನಿಂತುಕೊಂಡಿದ್ದಾರೆ ಎಂದು ಪ್ರಕಾಶ್ ಜಾವಡೆಕರ್ ಹೇಳಿದ್ದಾರೆ.

Last Updated : Feb 3, 2020, 04:23 PM IST
'ಅರವಿಂದ ಕೇಜ್ರಿವಾಲ್ ಭಯೋತ್ಪಾದಕರಾಗಿದ್ದು, ಈ ಕುರಿತು ಹಲವು ಸಾಕ್ಷ್ಯಾಧಾರಾಗಳಿವೆ' title=

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ಓರ್ವ ಭಯೋತ್ಪಾದಕರಾಗಿದ್ದು, ಈ ಕುರಿತು ಹಲವು ಸಾಕ್ಷ್ಯಾಧಾರಾಗಳಿವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಹೇಳಿದ್ದಾರೆ. ಅಷ್ಟೇ ಅಲ್ಲ ಕೆಜ್ರಿವಾಲ್ ಬೆನ್ನಿಗೆ ನಿಂತ ದೆಹಲಿ ಜನರು ಇದೀಗ ಅವರ ವಿರೋಧದಲ್ಲಿ ನಿಂತುಕೊಂಡಿದ್ದಾರೆ ಎಂದಿದ್ದಾರೆ.

"ಒಂದು ಕಾಲದಲ್ಲಿ ಅವರಿಗೆ ಬೆಂಬಲ ನೀಡಿರುವ ದೆಹಲಿ ಜನರು ಇದೀಗ ಅವರನ್ನು ವಿರೋಧಿಸುತ್ತಿರುವ ಕಾರಣ 'ನಾನು ಭಯೋತ್ಪಾದಕನಾಗಿದ್ದೇನೆಯೇ?' ಎಂದು ಕೇಜ್ರಿವಾಲ್  ಮುಗ್ಧ ಮುಖವಾಡ ಧರಿಸಿ ಜನರನ್ನು ಪ್ರಶ್ನಿಸುತ್ತಿದ್ದಾರೆ. ಆದರೆ, ನೀವು ಭಯೋತ್ಪಾದಕರಾಗಿದ್ದೀರಿ ಹಾಗೂ ಇದರ ಹಲವು ಸಾಕ್ಷ್ಯಾಧಾರಗಳಿವೆ. ನೀವೇ ಒಂದು ಬಾರಿ ನಾನು ಅರಾಜಕವಾದಿಯಾಗಿದ್ದೇನೆ ಎಂದಿದ್ದೀರಿ. ಅರಾಜಕವಾದಿ ಹಾಗೂ ಉಗ್ರವಾದಿಗಳಲ್ಲಿ ಹೆಚ್ಚಿನ ಅಂತರ ಇರುವುದಿಲ್ಲ." ಎಂದು ಜಾವಡೆಕರ್ ಹೇಳಿದ್ದಾರೆ.

ಪ್ರಕಾಶ್ ಜಾವಡೆಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಆಪ್ ಸಂಸದ ಸಂಜಯ್ ಸಿಂಗ್, " ರಾಷ್ಟ್ರರಾಜಧಾನಿಯಲ್ಲಿ ಇದೆಲ್ಲಾ ನಡೆಯುತ್ತಿದ್ದು, ಅಲ್ಲಿಯೇ ಕೇಂದ್ರದ ಸರ್ಕಾರ ಕೂಡ ಇದೆ ಹಾಗೂ ಚುನಾವಣಾ ಆಯೋಗ ಕೂಡ ಇದೆ. ಓರ್ವ ಕೇಂದ್ರ ಸಚಿವರಾಗಿ ಅವರು ಈ ರೀತಿಯ ಭಾಷೆ ಹೇಗೆ ಪ್ರಯೋಗಿಸಲು ಸಾಧ್ಯ. ಒಂದು ವೇಳೆ ಕೆಜ್ರಿವಾಲ್ ಉಗ್ರವಾದಿಯಾಗಿದ್ದರೆ, ಅವರನ್ನು ಬಂಧಿಸಿ ಎಂದು ನಾನು ಬಿಜೆಪಿಗೆ ಸವಾಲು ಎಸಗುವೆ" ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಕೇಜ್ರಿವಾಲ್ "ನನ್ನನ್ನು ದೆಹಲಿಯ ಜನರು ಸಹೋದರನಂತೆ ಭಾವಿಸುತ್ತಾರೆಯೇ ಅಥವಾ ಮಗನೆಂದು ಭಾವಿಸುತ್ತಾರೆಯೇ ಅಥವಾ ಉಗ್ರವಾದಿ ಎಂದು ಭಾವಿಸುತ್ತಾರೆ ಎಂಬುದನ್ನು ನಾನು ಜನರ ನಿರ್ಧಾರಕ್ಕೆ ಬಿಡುವೆ" ಎಂದಿದ್ದರು.

ಈ ವೇಳೆ ಮಾತನಾಡಿದ್ದ ಕೆಜ್ರಿವಾಲ್, "ನಿನ್ನೆ ಬಿಜೆಪಿಯ ಕೆಲ ಮುಖಂಡರು ಕೇಜ್ರಿವಾಲ್ ಓರ್ವ ಭಯೋತ್ಪಾದಕನಾಗಿದ್ದಾನೆ ಎಂದು ಹೇಳಿದ್ದರು. ನಾನು ಇಲ್ಲಿಯವರೆಗೆ ದೇಶಕ್ಕಾಗಿ ತನು, ಮನ, ಧನ ಅರ್ಪಿಸಿ ಸೇವೆ ಸಲ್ಲಿಸಿದ್ದೇನೆ. ಕಳೆದ ಐದು ವರ್ಷಗಳಿಂದ ದೆಹಲಿಯ ಪ್ರತಿಯೊಂದು ಮಗುವನ್ನು ನಾನು ನನ್ನ ಮಗ ಎಂದು ಭಾವಿಸಿ ಅವರಿಗಾಗಿ ಒಳ್ಳೆಯ ಶಿಕ್ಷಣದ ವ್ಯವಸ್ಥೆ ಮಾಡಿದ್ದೇನೆ. ಇದರಿಂದ ನಾನು ಭಯೋತ್ಪಾದಕನಾದೇನೆ?. ದೆಹಲಿಯ ಯಾವುದೇ ಒಂದು ಮನೆಯಲ್ಲಿ ಓರ್ವ ವ್ಯಕ್ತಿ ಅನಾರೋಗ್ಯಕ್ಕೀಡಾದರೆ ಅವರಿಗಾಗಿ ಔಷಧಿ, ಟೆಸ್ಟ್ ಹಾಗೂ ಆಪರೇಷನ್ ವ್ಯವಸ್ಥೆ ಮಾಡಿದ್ದೇನೆ. ಯಾವೊಬ್ಬ ಉಗ್ರವಾದಿ ಇದನ್ನು ಮಾಡಿದ್ದಾನೆಯೇ?" ಎಂದು ಪ್ರಶ್ನಿಸಿದ್ದರು.

Trending News