ಸಂಸತ್ತಿಗೆ ಹಾಜರಾಗಲು ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಸಲಹೆ

ಸಂಸತ್ತಿಗೆ ನಿಯಮಿತವಾಗಿ ಹಾಜರಾಗುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.ಆಕಾಶ್ ವಿಜಯವರ್ಗಿಯಾ, ಪ್ರಜ್ಞಾ ಠಾಕೂರ್ ಮತ್ತು ಸನ್ನಿ ಡಿಯೋಲ್ ಅವರಂತಹ ನಾಯಕರು ಒಳಗೊಂಡ ವಿವಾದಗಳ ಹಿನ್ನೆಲೆಯಲ್ಲಿ ಈ ಸಲಹೆ ಬಂದಿದೆ

Last Updated : Jul 4, 2019, 06:53 PM IST
 ಸಂಸತ್ತಿಗೆ ಹಾಜರಾಗಲು ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಸಲಹೆ   title=
file photo

ನವದೆಹಲಿ: ಸಂಸತ್ತಿಗೆ ನಿಯಮಿತವಾಗಿ ಹಾಜರಾಗುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.ಆಕಾಶ್ ವಿಜಯವರ್ಗಿಯಾ, ಪ್ರಜ್ಞಾ ಠಾಕೂರ್ ಮತ್ತು ಸನ್ನಿ ಡಿಯೋಲ್ ಅವರಂತಹ ನಾಯಕರು ಒಳಗೊಂಡ ವಿವಾದಗಳ ಹಿನ್ನೆಲೆಯಲ್ಲಿ ಈ ಸಲಹೆ ಬಂದಿದೆ

ಸಂಸದರೊಂದಿಗೆ ಹಲವು ಸರಣಿ ಸಭೆಗಳನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸಂಸದರಿಗೆ ನಿಯಮಿತವಾಗಿ ಸಂಸತ್ತಿಗೆ ಹಾಜರಾಗಬೇಕು ಮತ್ತು ಅವರ ಕ್ಷೇತ್ರಗಳತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದರು ಎಂದು ತಿಳಿದು ಬಂದಿದೆ. 

ಬುಧವಾರದಂದು ಪ್ರಧಾನಿ ಮೋದಿ ತಮ್ಮ ಮನೆಯಲ್ಲಿ ಬಿಜೆಪಿ ಸಂಸದರನ್ನು ಭೇಟಿ ಮಾಡಿ ಜನರ ಕೆಲಸ ಮಾಡಿ, ನಿಯಮಿತವಾಗಿ ಸಂಸತ್ತಿಗೆ ಹಾಜರಾಗಿ ಮತ್ತು  ಕ್ಷೇತ್ರಗಳಿಗೆ ಸಾಕಷ್ಟು ಸಮಯವನ್ನು ನೀಡಿ ಎಂದು ಸಲಹೆ ನೀಡಿದ್ದಾರೆ. ಪ್ರಧಾನಿ ಮೋದಿ ಪರಿಶಿಷ್ಟ ಜಾತಿಗೆ ಸೇರಿದ ಸಂಸದರ ಮತ್ತೊಂದು ಗುಂಪಿನೊಂದಿಗೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

ಇತ್ತೀಚಿಗೆ ಕೇಂದ್ರ ಮಂತ್ರಿ ಥವಾರ್ ಚಂದ್ ಗೆಹ್ಲೋಟ್  ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ನಿರ್ಧಾರವನ್ನು ಬಹಿರಂಗವಾಗಿ ಪ್ರಶ್ನಿಸಿದ್ದರು. ಯೋಗಿ ಸರ್ಕಾರ 17 ಹಿಂದುಳಿದ ವರ್ಗಗಳಿಗೆ ಎಸ್ಸಿ ಪಟ್ಟಿಯಲ್ಲಿ ಸೇರಿಸಿತ್ತು. ಈ ನಿರ್ಧಾರಕ್ಕೆ ಥವಾರ್ ಅವರು ಆಕ್ರೋಶ ವ್ಯಕ್ತಪಡಿಸಿ ಅಸಂವಿಧಾನಿಕ ಎಂದು ಹೇಳಿದ್ದರು.

Trending News