'ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ತೊಡಕಾಗಿದೆ': ಪ್ರಧಾನಿ ನರೇಂದ್ರ ಮೋದಿ

ಅಯೋಧ್ಯೆಯ ವಿಷಯದಲ್ಲಿ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಮಧ್ಯಪ್ರವೇಶಿಸುತ್ತಿದೆ ಎಂದು ಮೋದಿ ಹೇಳಿದರು.

Last Updated : Nov 25, 2018, 03:02 PM IST
'ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ತೊಡಕಾಗಿದೆ': ಪ್ರಧಾನಿ ನರೇಂದ್ರ ಮೋದಿ title=
Pic: ANI

ನವದೆಹಲಿ: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜಸ್ಥಾನದ ಅಲ್ವಾರ್ನಲ್ಲಿ ನಡೆಯುತ್ತಿರುವ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದು, ರಾಮ ಮಂದಿರವನ್ನು ನಿರ್ಮಿಸುವ ಮಾರ್ಗದಲ್ಲಿ ಕಾಂಗ್ರೆಸ್ ತೊಡಕಾಗಿದೆ ಎಂದಿದ್ದಾರೆ. ಅಯೋಧ್ಯೆಯ ವಿಷಯದಲ್ಲಿ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಮಧ್ಯಪ್ರವೇಶಿಸುತ್ತಿದೆ. ಅಯೋಧ್ಯೆಯ ಪ್ರಕರಣದ ಕಾಂಗ್ರೆಸ್ ವಕೀಲರು ನ್ಯಾಯಾಲಯದಲ್ಲಿ ವಿಚಾರಣೆ ತಪ್ಪಿಸಲು ಮನವಿ ಮಾಡಿದ್ದರು. ಕಾಂಗ್ರೆಸ್ ಬಹಳ ದೊಡ್ಡ ಆಟವಾಡುತ್ತಿದೆ ಎಂದಿದ್ದಾರೆ.

'ಕಾಂಗ್ರೆಸ್ ಸುಪ್ರೀಂಕೋರ್ಟಿನ ದೊಡ್ಡ ದೊಡ್ಡ ವಕೀಲರನ್ನು ರಾಜ್ಯಸಭೆಗೆ ಕಳುಹಿಸಲು ಪ್ರಾರಂಭಿಸಿದೆ. ರಾಜ್ಯಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿಲ್ಲ. ಆದರೆ, ರಾಜ್ಯಸಭೆಯಲ್ಲಿ, ಕಾಂಗ್ರೆಸ್ ಕೊಳಕು ಆಟ ಆಡುತ್ತಿದೆ. ಅವರು 2019 ರವರೆಗೆ ರಾಮ ದೇವಾಲಯದ ವಿಷಯದ ಬಗ್ಗೆ ನಿರ್ಧರಿಸಬಾರದೆಂದು ಒತ್ತಡ ಹಾಕುತ್ತಿದ್ದಾರೆ. ಈ ರೀತಿಯಾಗಿ ಒತ್ತಡದ ರಾಜಕೀಯ ನಡೆಯುತ್ತಿದೆ' ಎಂದು ಪ್ರಧಾನಿ ಮೋದಿ ಹೇಳಿದರು.

'ಇಂದು ರಾಜ್ಯ ಸಭೆಯ ಸದಸ್ಯರು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರನ್ನು ಮಹಾಭಿಯೋಗದ ಮೂಲಕ ಹೆದರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಪ್ರಧಾನಿ ಮೋದಿ, ಸೂಕ್ಷ್ಮ ಸಮಸ್ಯೆಗಳನ್ನು ಕೇಳುವ ಮನಸ್ಸು ಇಲ್ಲದಂತಾಗಿದೆ. ಈ ಜನರು ದೇಶದ ನ್ಯಾಯಾಂಗ ಬಂಧನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ದೇಶವು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಆದರೆ ನಾವು ನ್ಯಾಯಾಂಗ ಸ್ವಾಯತ್ತತೆಗಾಗಿ ಕೆಲಸ ಮಾಡುತ್ತೇವೆ. ಪ್ರಜಾಪ್ರಭುತ್ವದ ದೇವಸ್ಥಾನದಲ್ಲಿ ಅವರ ಕಪ್ಪು ಮನಸ್ಸಿನ ಇಚ್ಚೆ ಪೂರ್ಣಗೊಳ್ಳಲು ನಾವು ಎಂದಿಗೂ ಬಿಡುವುದಿಲ್ಲ' ಎಂದು ತಿಳಿಸಿದರು.
 

Trending News