ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಪುಣೆ, ಅಹಮದಾಬಾದ್ ಮತ್ತು ಹೈದರಾಬಾದ್‌ಗೆ ಭೇಟಿ ನೀಡಿ ಅಲ್ಲಿ ಅಭಿವೃದ್ಧಿಪಡಿಸುತ್ತಿರುವ ಕೋವಿಡ್ -19 ಲಸಿಕೆಗೆ ಸಂಬಂಧಿಸಿದ ಕಾರ್ಯಗಳನ್ನು ಪರಿಶೀಲಿಸಲಿದ್ದಾರೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಕರೋನಾ ಲಸಿಕೆಗಳ ಅಭಿವೃದ್ಧಿ ಮತ್ತು ಉತ್ಪಾದನಾ ಪ್ರಕ್ರಿಯೆಯನ್ನು ವೈಯಕ್ತಿಕವಾಗಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಮೂರು ನಗರಗಳಿಗೆ ಭೇಟಿ ನೀಡಲಿದ್ದಾರೆ ಎಂದು ಪಿಎಂಒ ಟ್ವೀಟ್ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ನ ಜೈಡಸ್ ಕ್ಯಾಡಿಲಾ ಪಾರ್ಕ್, ಹೈದರಾಬಾದ್‌ನ ಭಾರತ್ ಬಯೋಟೆಕ್ ಮತ್ತು ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಭೇಟಿ ನೀಡಲಿದ್ದಾರೆ.


ಈ ದೇಶಕ್ಕೆ Corona Vaccine ಅಗತ್ಯವೇ ಇಲ್ಲವಂತೆ


ಅಹಮದಾಬಾದ್‌ನ 'ಜೈಡಸ್ ಕ್ಯಾಡಿಲಾ' :
ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್ ಬಳಿಯ ಪ್ರಮುಖ ಔಷಧ ಕಂಪನಿ 'ಜೈಡಸ್ ಕ್ಯಾಡಿಲಾ' ಸ್ಥಾವರಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಕೋವಿಡ್ -19 ಲಸಿಕೆ (Covid-19 Vaccine)ಅಭಿವೃದ್ಧಿಪಡಿಸಲಾಗುತ್ತಿದೆ. ಕೋವಿಡ್ -19 (Covid -19) ಗೆ ಸಂಭಾವ್ಯ ಲಸಿಕೆಯ ಮೊದಲ ಹಂತವು ಪೂರ್ಣಗೊಂಡಿದೆ ಎಂದು ಔಷಧಿ ತಯಾರಕರು ಈ ಹಿಂದೆ ಘೋಷಿಸಿದ್ದರು ಮತ್ತು ಎರಡನೇ ಹಂತದ ಪ್ರಯೋಗವು ಆಗಸ್ಟ್‌ನಲ್ಲಿ ಪ್ರಾರಂಭವಾಯಿತು ಎಂದು ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ತಿಳಿಸಿದ್ದಾರೆ. ಜೈಡಸ್ ಕ್ಯಾಡಿಲಾ ಸ್ಥಾವರವು ಅಹಮದಾಬಾದ್ ನಗರದ ಸಮೀಪ ಚಂಗೋಡರ್ ಕೈಗಾರಿಕಾ ಪ್ರದೇಶದಲ್ಲಿದೆ. ಬೆಳಿಗ್ಗೆ 9.30 ರ ಸುಮಾರಿಗೆ ಪ್ರಧಾನಿ ಸ್ಥಾವರವನ್ನು ತಲುಪಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ:
ಇದರ ನಂತರ ಮಧ್ಯಾಹ್ನ 12: 30 ರ ಸುಮಾರಿಗೆ ಪ್ರಧಾನಿ ಪುಣೆ ತಲುಪಲಿದ್ದಾರೆ . ಪಿಎಂ ನರೇಂದ್ರ ಮೋದಿ ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಗೆ ಭೇಟಿ ನೀಡಲಿದ್ದಾರೆ. ಕೋವಿಡ್ -19 ಲಸಿಕೆಯನ್ನು ಅಭಿವೃದ್ಧಿಪಡಿಸಲು ಈ ಪ್ರಸಿದ್ಧ ಔಷಧ ಕಂಪನಿ 'ಅಸ್ಟ್ರಾಜೆನೆಕಾ' ಮತ್ತು'ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ' ನೊಂದಿಗೆ ಪಾಲುದಾರಿಕೆ ಹೊಂದಿದೆ. 


ಬಿಕ್ಕಟ್ಟಿನ ಮಧ್ಯೆ ಪರಿಹಾರದ ಸುದ್ದಿ: ಕರೋನಾ ಲಸಿಕೆಯ ಸಂಪೂರ್ಣ ವೆಚ್ಚ ಭರಿಸಲಿದೆಯಂತೆ ಮೋದಿ ಸರ್ಕಾರ!


ಹೈದರಾಬಾದ್‌ನ ಭಾರತ್ ಬಯೋಟೆಕ್:
ಇದರ ನಂತರ ಪಿಎಂ ನರೇಂದ್ರ ಮೋದಿ ಅವರು ಹೈದರಾಬಾದ್‌ಗೆ ತೆರಳಿ ಅಲ್ಲಿ ಕೋವಿಡ್ -19 ಲಸಿಕೆ ಅಭಿವೃದ್ಧಿಪಡಿಸುವ ಭಾರತ್ ಬಯೋಟೆಕ್ (Bharat Biotech) ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಕೇಂದ್ರದಲ್ಲಿ ಒಂದು ಗಂಟೆ ತಜ್ಞರೊಂದಿಗೆ ಮಾತುಕತೆ ನಡೆಸಲಿರುವ ಪ್ರಧಾನಿ ಮೋದಿ ನಂತರ ದೆಹಲಿಗೆ ತೆರಳಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಮನಾರ್ಹವಾಗಿ   'ಭಾರತ್ ಬಯೋಟೆಕ್' ಅಭಿವೃದ್ಧಿಪಡಿಸುತ್ತಿರುವ ಕೋವಿಡ್ -19 ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ.