ಬ್ರಿಟಿಷರು ನಿರ್ಮಿಸಿದ ಕಟ್ಟಡಗಳನ್ನು ಪುನರ್ ನಿರ್ಮಿಸಲು ಹೊರಟರೇ ಮೋದಿ !

1911-27ರ ಅವಧಿಯ ಕಟ್ಟಡಗಳನ್ನು ಪುನರ್ನಿಮಿಸುವುದು ಪ್ರಧಾನಿ ಮೋದಿ ಕನಸಾಗಿದೆ ಎಂದು ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಹೇಳಿರುವ ಹೇಳಿಕೆ ಈಗ ಇದಕ್ಕೆ ಪುಷ್ಟಿಕೊಡುತ್ತದೆ.

Last Updated : Sep 14, 2019, 02:33 PM IST
 ಬ್ರಿಟಿಷರು ನಿರ್ಮಿಸಿದ ಕಟ್ಟಡಗಳನ್ನು ಪುನರ್ ನಿರ್ಮಿಸಲು ಹೊರಟರೇ ಮೋದಿ !   title=
ಸಾಂದರ್ಭಿಕ ಚಿತ್ರ

ನವದೆಹಲಿ: 1911-27ರ ಅವಧಿಯ ಕಟ್ಟಡಗಳನ್ನು ಪುನರ್ನಿಮಿಸುವುದು ಪ್ರಧಾನಿ ಮೋದಿ ಕನಸಾಗಿದೆ ಎಂದು ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಹೇಳಿರುವ ಹೇಳಿಕೆ ಈಗ ಇದಕ್ಕೆ ಪುಷ್ಟಿಕೊಡುತ್ತದೆ.

ಶುಕ್ರವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ 'ನಾವು 2024 ರಲ್ಲಿ ಸೇರುವ ಹೊತ್ತಿಗೆ ಮುಂದಿನ ಚುನಾವಣೆಯ ಸಮಯದಲ್ಲಿ ನಾವು ನೂತನ ಸಂಸತ್ತಿನ ಕಟ್ಟಡದಲ್ಲಿ ಇರುತ್ತೇವೆ ಎಂಬುದು ನಮ್ಮ ನಿರೀಕ್ಷೆಯಾಗಿದೆ' ಎಂದು ಶುಕ್ರವಾರ ಹೇಳಿದರು. ಈಗ ಸಚಿವಾಲಯವು ಸಂಸತ್ತಿನ ಕಟ್ಟಡ, ಸಾಮಾನ್ಯ ಕೇಂದ್ರ ಸಚಿವಾಲಯ ಮತ್ತು ಕೇಂದ್ರ ವಿಸ್ಟಾದ ಅಭಿವೃದ್ಧಿ / ಪುನರಾಭಿವೃದ್ಧಿ ಅಥವಾ ಲುಟಿಯೆನ್ಸ್ ದೆಹಲಿಯ ಪುನರುಜ್ಜೀವನ ಕಾರ್ಯವನ್ನು ಘೋಷಿಸಿದ ಒಂದು ದಿನದ ನಂತರ ಈ ಹೇಳಿಕೆ ಬಂದಿದೆ. 

ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪುರಿ '1911 ಮತ್ತು 1927 ರ ನಡುವೆ ನಾರ್ತ್ ಬ್ಲಾಕ್, ಸೌತ್ ಬ್ಲಾಕ್, ರಾಷ್ಟ್ರಪತಿ ಭವನ ಮತ್ತು ಸಂಸತ್ತಿನ ಕಟ್ಟಡದಂತಹ ಕಟ್ಟಡಗಳನ್ನು ಪುನರ್ನಿರ್ಮಿಸುವುದು ಪ್ರಧಾನ ಮಂತ್ರಿಯ ಕನಸಿನ ಯೋಜನೆಗಳಲ್ಲಿ ಒಂದಾಗಿದೆ. ಅಕ್ಟೋಬರ್ ಮಧ್ಯದ ವೇಳೆಗೆ ನಾವು ವಿನ್ಯಾಸಕ್ಕಾಗಿ ಟೆಂಡರ್ ಕರೆಯುವ ನಿರೀಕ್ಷೆಯಿದೆ ಮತ್ತು ಮುಂದಿನ ವರ್ಷದ ವೇಳೆಗೆ ನಿರ್ಮಾಣ ಕಾರ್ಯ ಪ್ರಾರಂಭವಾಗಬಹುದು' ಎಂದರು 

ಕೇಂದ್ರ ಲೋಕೋಪಯೋಗಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ನೋಟಿಸ್‌ನ ಪ್ರಕಾರ, 'ನವ ಭಾರತದ ಮೌಲ್ಯಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿನಿಧಿಸುವ ಸಂಪೂರ್ಣ ಕೇಂದ್ರ ವಿಸ್ಟಾ ಪ್ರದೇಶಕ್ಕೆ ಹೊಸ ಮಾಸ್ಟರ್ ಪ್ಲ್ಯಾನ್ ರಚಿಸಲಾಗುವುದು - ಉತ್ತಮ ಆಡಳಿತ , ದಕ್ಷತೆ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಮೌಲ್ಯ ಮತ್ತು ಇದು ಭಾರತೀಯ ಸಂಸ್ಕೃತಿ ಮತ್ತು ಸಾಮಾಜಿಕ ಪರಿಸರದಲ್ಲಿ ಬೇರೂರಿದೆ 'ಎನ್ನಲಾಗಿದೆ.

1911 ಮತ್ತು 1931 ರ ನಡುವೆ ಇಂಗ್ಲಿಷ್ ವಾಸ್ತುಶಿಲ್ಪಿಗಳಾದ ಎಡ್ವಿನ್ ಲುಟಿಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ಅವರು ಸಂಸತ್ತು, ರಾಷ್ಟ್ರಪತಿ ಭವನ, ಉತ್ತರ ಮತ್ತು ದಕ್ಷಿಣ ಬ್ಲಾಕ್ ಮತ್ತು ರಾಜ್‌ಪಥ್ ಗಳನ್ನು ನಿರ್ಮಿಸಿದರು. ಆಧುನಿಕ ಕಟ್ಟಡಗಳಾದ ನಿರ್ಮಾನ್ ಭವನ, ಶಾಸ್ತ್ರಿ ಭವನ, ಉದ್ಯೋಗ್ ಭವನ, ಕೃಷಿ ಭವನ, ರೈಲು ಭವನ ಮತ್ತು ಸಂಚಾರ್ ಭವನ ಇವು ನಂತರ ದಶಕದಲ್ಲಿ ಬಂದವು.

ಬೃಹತ್ ಪುನರಾಭಿವೃದ್ಧಿ ಯೋಜನೆಯು ಲುಟಿಯೆನ್ಸ್ ದೆಹಲಿಯನ್ನು ಮೆಗಾ ನಿರ್ಮಾಣ ತಾಣವನ್ನಾಗಿ ಪರಿವರ್ತಿಸುತ್ತದೆ, ಭವನಗಳು ನಾಶಕ್ಕೆ  ಒಳಗಾಗಬಹುದು ಎಂದು ನಿರೀಕ್ಷಿಸಲಾಗಿದೆ. ಸಚಿವಾಲಯದ ಮೂಲವೊಂದು ಹೇಳುವಂತೆ  'ನಾವು ಕೆಲಸವನ್ನು ವಿಭಾಗವಾರು ಮಾಡಿದರೆ, ಇಡೀ ಯೋಜನೆಯು 15 ವರ್ಷಗಳನ್ನು ತೆಗೆದುಕೊಳ್ಳುತ್ತದೆ…ಕೆಲಸ ಏಕಕಾಲದಲ್ಲಿ ನಡೆಯಲಿದೆ. ಸಂಚಾರ ನಿರ್ವಹಣಾ ಯೋಜನೆಗಳನ್ನು ಮಾಡಲಾಗುವುದು ಮತ್ತು ಪರ್ಯಾಯ ವಸತಿಗಳನ್ನು ನಿರ್ಮಿಸಲಾಗುವುದು. ಈ ಯೋಜನೆಯು ನಗರದ ಮುಖವನ್ನು ಬದಲಾಯಿಸುತ್ತದೆ ಎಂದು ನಮಗೆ ವಿಶ್ವಾಸವಿದೆ' ಎಂದು ತಿಳಿಸಿವೆ.

ಲುಟಿಯೆನ್ಸ್ ದೆಹಲಿಯ ಪ್ರಸಿದ್ಧ ಹಸಿರು ಹೊದಿಕೆಯನ್ನು ಹಾಗೇ ಇಡಲಾಗುವುದು ಎಂದು ಮೂಲಗಳು ತಿಳಿಸಿವೆ, ಇದಕ್ಕಾಗಿ ಯಾವುದೇ ಮರಗಳನ್ನು ಕತ್ತರಿಸಲಾಗುವುದಿಲ್ಲ 'ಎಂದು ಸಚಿವಾಲಯ ಖಚಿತಪಡಿಸಿದೆ. 'ಹೊಸ ನಿರ್ಮಾಣವು ಹಸಿರು ಕಟ್ಟಡದ ಮಾನದಂಡಗಳಿಗೆ ಬದ್ಧವಾಗಿರುತ್ತದೆ.ನವೀಕರಿಸಬಹುದಾದ ಶಕ್ತಿಯನ್ನು ನಾವು ಗಮನದಲ್ಲಿಟ್ಟುಕೊಂಡಿರುತ್ತೇವೆ, ಇ-ವಾಹನಗಳು, ಚಾರ್ಜಿಂಗ್ ಕೇಂದ್ರಗಳು ಮತ್ತು ಸೌರ ವಿದ್ಯುತ್ ವ್ಯವಸ್ಥೆಗಳು ಸಹ ಈ ನೂತನ ಯೋಜನೆಯ ಪ್ರಸ್ತಾವನೆಯಲ್ಲಿವೆ' ಎಂದು ಮೂಲಗಳು ಹೇಳಿವೆ.

 

Trending News