ಪುಣೆ ಜೈಲಿನಲ್ಲಿ ಕೈದಿ ಆತ್ಮಹತ್ಯೆ; ತನಿಖೆ ಆರಂಭ

ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದ ಹಿನ್ನೆಲೆಯಲ್ಲಿ ಯೆರ್ವಾಡಾ ಕೇಂದ್ರ ಕಾರಾಗೃಹದಲ್ಲಿ ಕೈದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

Updated: Oct 10, 2019 , 02:51 PM IST
ಪುಣೆ ಜೈಲಿನಲ್ಲಿ ಕೈದಿ ಆತ್ಮಹತ್ಯೆ; ತನಿಖೆ ಆರಂಭ

ಪುಣೆ: ಇಲ್ಲಿನ ಇಂದಾಪುರದಲ್ಲಿನ ಯೆರ್ವಾಡಾ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದ ಹಿನ್ನೆಲೆಯಲ್ಲಿ ಯೆರ್ವಾಡಾ ಕೇಂದ್ರ ಕಾರಾಗೃಹದಲ್ಲಿ ಕೈದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುಣೆ ಪೊಲೀಸರ ಪ್ರಕಾರ, ಅಕ್ಟೋಬರ್ 9 ರಂದು ಕೈದಿ ಸಿದ್ಧಾರ್ಥ್ ಕಾಂಬ್ಳೆ ತನ್ನ ಒಳ ಉಡುಪಿನ ಬಟ್ಟೆಯನ್ನು ಬಳಸಿ ನೇಣು ಹಾಕಿಕೊಂದಿದ್ದಾನೆ ಎನ್ನಲಾಗಿದೆ.

ಮೃತ ಕ್ಯಾಂಬ್ಳೆ ಕೊಲೆ ಯತ್ನದ ಆರೋಪಿಯಾಗಿದ್ದು, ಇತ್ತೀಚೆಗೆ ಸೆಷನ್ ನ್ಯಾಯಾಲಯ ಆತನಿಗೆ ಜಾಮೀನು ನಿರಾಕರಿಸಿತ್ತು. ಇದಕ್ಕೂ ಮೊದಲು ಅಕ್ಟೋಬರ್ 8 ರಂದು ಅರ್ಜುನ್ ಮಹಾದೇವ್ ನಿಸರೇಡೆ ಎಂಬ ಮತ್ತೋರ್ವ ಆರೋಪಿ ಆಕಸ್ಮಿಕವಾಗಿ ನೀರಿ ಟ್ಯಾಂಕ್‌ಗೆ ಬಿದ್ದು ಸಾವನ್ನಪ್ಪಿದ್ದ. ಈ ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ಯೆರ್ವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.