VIDEO: ಕಾಂಗ್ರೆಸ್ ರ್ಯಾಲಿಯಲ್ಲಿ ಪ್ರತಿಧ್ವನಿಸಿದ 1 ಘೋಷಣೆಯಿಂದಾಗಿ ಮುಜುಗರ!

ಈ ಕಾಂಗ್ರೆಸ್ ಸಭೆ ಸಾಮಾನ್ಯ ರಾಜಕೀಯ ಸಭೆಯ ರೂಪದಲ್ಲಿಯೇ ಪ್ರಾರಂಭವಾಯಿತು. ಆದರೆ ಈ ಸಂದರ್ಭದಲ್ಲಿ ಪ್ರತಿಧ್ವನಿಸಿದ  ಒಂದು ಘೋಷಣೆಯಿಂದಾಗಿ ಪಕ್ಷವು ಮುಜುಗರವನ್ನು ಎದುರಿಸಬೇಕಾಯಿತು.

Last Updated : Dec 2, 2019, 10:04 AM IST
VIDEO: ಕಾಂಗ್ರೆಸ್ ರ್ಯಾಲಿಯಲ್ಲಿ ಪ್ರತಿಧ್ವನಿಸಿದ 1 ಘೋಷಣೆಯಿಂದಾಗಿ ಮುಜುಗರ! title=
Photo courtesy: ANI

ನವದೆಹಲಿ: ದೆಹಲಿಯಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಯಲ್ಲಿ ಪಕ್ಷ ಮುಜಗರ ಎದುರಿಸಬೇಕಾದ ಸ್ಥಿತಿಯೊಂದು ಎದುರಾಯಿತು. ಈ ಕಾಂಗ್ರೆಸ್ ಸಭೆ ಸಾಮಾನ್ಯ ರಾಜಕೀಯ ಸಭೆಯ ರೂಪದಲ್ಲಿಯೇ ಪ್ರಾರಂಭವಾಯಿತು. ಆದರೆ ಈ ಸಂದರ್ಭದಲ್ಲಿ ಪ್ರತಿಧ್ವನಿಸಿದ  ಒಂದು ಘೋಷಣೆಯಿಂದಾಗಿ ಪಕ್ಷವು ಮುಜುಗರವನ್ನು ಎದುರಿಸಬೇಕಾಯಿತು.

ವಾಸ್ತವವಾಗಿ, ಕಾಂಗ್ರೆಸ್ ಮುಖಂಡ ಸುರೇಂದ್ರ ಕುಮಾರ್ ಈ ರ್ಯಾಲಿಯಲ್ಲಿ ಘೋಷಣೆಗಳನ್ನು ಕೂಗುತ್ತಿದ್ದರು. ಈ ಮೂರು ಘೋಷಣೆಗಳಿಗೆ ಸೋನಿಯಾ ಗಾಂಧಿ ಜಿಂದಾಬಾದ್, ಕಾಂಗ್ರೆಸ್ ಪಕ್ಷ ಜಿಂದಾಬಾದ್, ರಾಹುಲ್ ಗಾಂಧಿ ಜಿಂದಾಬಾದ್ ಎಂದು ಕೂಗುತ್ತಿದ್ದ ಅವರು, ಪ್ರಿಯಾಂಕಾ ಚೋಪ್ರಾ (Priyanka Chopra) ಜಿಂದಾಬಾದ್ ಎಂಬ ಘೋಷಣೆಯನ್ನು ಕೂಗಿದಾಗ ಮುಜುಗರ ಉಂಟಾಯಿತು. ತಕ್ಷಣ ಅದನ್ನು ಸರಿಪಡಿಸಿಕೊಂಡ ಸುರೇಂದ್ರ ಕುಮಾರ್, ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi Vadra) ಜಿಂದಾಬಾದ್ ಎಂದು ಕೂಗಿದರು.

ವೇದಿಕೆಯ ಮೇಲೆ ನಿಂತಿದ್ದ ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸುಭಾಷ್ ಚೋಪ್ರಾ ಇದನ್ನು ಕೇಳಿ ಆಶ್ಚರ್ಯಚಕಿತರಾದರು. ವಿಶೇಷವೆಂದರೆ, ಸುರೇಂದ್ರ ಕುಮಾರ್ ಅವರು ಪ್ರಿಯಾಂಕಾ ಚೋಪ್ರಾ ಜಿಂದಾಬಾದ್ ಎಂಬ ಘೋಷಣೆಯನ್ನು ಎತ್ತಿದಾಗ, ಕೆಲವು ಕಾರ್ಯಕರ್ತರು ಸಹ ಈ ಘೋಷಣೆ ಕೂಗುತ್ತಿದ್ದರು.

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರು ಇದನ್ನು ಸಾಕಷ್ಟು ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಕಾಮಿಡಿ ಕಾಮೆಂಟ್ ಮಾಡುತ್ತಿದ್ದಾರೆ. ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಹಗ್ಗ-ಜಗ್ಗಾಟ ತೀವ್ರಗೊಂಡಿದೆ ಮತ್ತು ಎಲ್ಲಾ ಪಕ್ಷಗಳು ವಿಧಾನಸಭಾ ಚುನಾವಣೆಗೆ ಸಾಕಷ್ಟು ತಯಾರಿ ನಡೆಸುತ್ತಿವೆ.
 

Trending News