ಸರ್ಕಾರಿ ಗ್ಯಾರಂಟಿ ಇರುವ ಈ ಖಾತೆ ಯಲ್ಲಿ ಕೇವಲ ರೂ.500 ಉಳಿತಾಯ ಮಾಡಿ ಲಕ್ಷಾಂತರ ಗಳಿಕೆ ಮಾಡಿ

ಒಂದು ವರ್ಷದಲ್ಲಿ ಈ ಖಾತೆಯಲ್ಲಿ ಗರಿಷ್ಠ 1.5 ಲಕ್ಷ ರೂಪಾಯಿಗಳನ್ನು ಜಮಾ ಮಾಡಬಹುದು. ಪ್ರಸ್ತುತ, ಇದು ಶೇಕಡಾ 7.1 ರಷ್ಟು ಬಡ್ಡಿಯನ್ನು ನೀಡುತ್ತಿದ್ದು, ಇದು ಬ್ಯಾಂಕ್ ಸ್ಥಿರ ಠೇವಣಿಗಿಂತ ಹೆಚ್ಚಾಗಿದೆ.

Last Updated : Sep 2, 2020, 01:12 PM IST
ಸರ್ಕಾರಿ ಗ್ಯಾರಂಟಿ ಇರುವ ಈ ಖಾತೆ ಯಲ್ಲಿ ಕೇವಲ ರೂ.500 ಉಳಿತಾಯ ಮಾಡಿ ಲಕ್ಷಾಂತರ ಗಳಿಕೆ ಮಾಡಿ title=

ನವದೆಹಲಿ: ನೀವು ಹಣ ಹೂಡಿಕೆಗಾಗಿ ಯಾವುದಾದರೊಂದು ಯೋಜನೆಯ ಹುಡುಕಾಟದಲ್ಲಿದ್ದಾರೆ ಸಾರ್ವಜನಿಕ ಭವಿಷ್ಯ ನಿಧಿ (PPF) ಒಂದು ಉತ್ತಮ ಆಯ್ಕೆಯಾಗಿದೆ. ಪಿಪಿಎಫ್ ಖಾತೆಯನ್ನು ಕೇವಲ 500 ರೂಪಾಯಿಗಳೊಂದಿಗೆ ತೆರೆಯಬಹುದು. ಆರ್ಥಿಕ ವರ್ಷವೊಂದರಲ್ಲಿ ಈ ಖಾತೆಯಲ್ಲಿ ಕನಿಷ್ಠ 500 ರೂಪಾಯಿ ಠೇವಣಿ ಇಡಬೇಕಾಗುತ್ತದೆ. ಒಂದು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂಪಾಯಿಗಳನ್ನು ಜಮಾ ಮಾಡಬಹುದು. ಪ್ರಸ್ತುತ, ಇದು ಶೇಕಡಾ 7.1 ರಷ್ಟು ಬಡ್ಡಿಯನ್ನು ನೀಡುತ್ತಿದ್ದು, ಇದು ಬ್ಯಾಂಕ್ ಸ್ಥಿರ ಠೇವಣಿಗಿಂತ ಹೆಚ್ಚಾಗಿದೆ.

ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಮೂಲಕ ನೀವು ಈ ಖಾತೆಯನ್ನು ತೆರೆಯಬಹುದು
ಯಾವುದೇ ಓರ್ವ ವ್ಯಕ್ತಿ ಪಿಪಿಎಫ್ ಖಾತೆಯನ್ನು ಯಾವುದೇ ಅಂಚೆ ಕಚೇರಿ ಅಥವಾ ಬ್ಯಾಂಕಿನಲ್ಲಿ ತೆರೆಯಬಹುದು. ಪೋಷಕರು ತಮ್ಮ ಅಪ್ರಾಪ್ತ ಮಕ್ಕಳ ಹೆಸರಲಿನಲ್ಲಿಯೂ ಕೂಡ ಈ ಖಾತೆಯನ್ನು ತೆರೆಯಬಹುದು. ಆದರೆ, ನಿಯಮಗಳ ಪ್ರಕಾರ, ಹಿಂದೂ ಅವಿಭಜಿತ ಕುಟುಂಬ (HUF) ಹೆಸರಿನಲ್ಲಿ ನೀವು PPF ಖಾತೆಯನ್ನು ತೆರೆಯಲು ಸಾಧ್ಯವಿಲ್ಲ.

ಕೇವಲ ನೀವು ರೂ.500 ನೀಡಿ ಈ ಖಾತೆಯನ್ನು ತೆರೆಯಬಹುದು
ಪಿಪಿಎಫ್ ಖಾತೆ ತೆರೆಯಲು ಕನಿಷ್ಠ ಮೊತ್ತ 500 ರೂಪಾಯಿಗಳು. ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ ಠೇವಣಿ 500 ರೂ. ಆಗಿದ್ದರೆ, ಗರಿಷ್ಠ ಹೂಡಿಕೆಯ ಮಿತಿ ವರ್ಷಕ್ಕೆ 1.5 ಲಕ್ಷ ರೂ. ನಿಗದಿಪಡಿಸಲಾಗಿದೆ.  ಹೊಸ ನಿಯಮದಲ್ಲಿ, 12 ಬಾರಿ ಠೇವಣಿ ಇಡುವ ಮಿತಿಯನ್ನು ರದ್ದುಪದಿಸಲಾಗಿದ್ದು, ನೀವು ಒಂದು ತಿಂಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ಪಿಪಿಎಫ್‌ನಲ್ಲಿ ಹಣವನ್ನು ಠೇವಣಿ ಮಾಡಬಹುದು.

ಮ್ಯಾಚ್ಯೂರಿಟಿ ಬಳಿಕ 5-5 ವರ್ಷಗಳ ಎಕ್ಸಟೆನ್ಶನ್
ಪಿಪಿಎಫ್ ಖಾತೆ 15 ವರ್ಷಗಳಿಗೆ ಮ್ಯಾಚ್ಯೂರ್ ಆಗುತ್ತದೆ. ಆದರೆ, ಖಾತೆ ಮ್ಯಾಚ್ಯೂರ ಆಗುವ ಒಂದು ವರ್ಷ ಮೊದಲು ನೀವು 5-5 ವರ್ಷಗಳ ಎಕ್ಸಟೆನ್ಶನ್ ಪಡೆಯಬಹುದಾಗಿದೆ. ಇದಕ್ಕಾಗಿ ನೀವು ಖಾತೆ ಮ್ಯಾಚ್ಯೂರ್ ಆಗುವ ಒಂದು ವರ್ಷ ಮೊದಲು ಅರ್ಜಿ ಸಲ್ಲಿಸಬೇಕು.

5 ವರ್ಷಗಳ ಒಳಗೆ ನೀವು ಹಣ ಹಿಂಪಡೆಯಲು ಸಾಧ್ಯವಿಲ್ಲ
ಒಮ್ಮೆ ನೀವು ಪಿಪಿಎಫ್ ಖಾತೆ ತೆರೆದ ಬಳಿಕ 5 ವರ್ಷಗಳ ಕಾಲ ನೀವು ಈ ಖಾತೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಈ ಅವಧಿ ಪೂರ್ಣಗೊಂಡ ನಂತರ, ಫಾರ್ಮ್ 2 ಅನ್ನು ಭರ್ತಿ ಮಾಡುವ ಮೂಲಕ ಹಣವನ್ನು ಹಿಂಪಡೆಯಬಹುದು. ಆದರೆ, 5 ವರ್ಷಗಳ ಬಳಿಕ ಕೂಡ ಪಿಪಿಎಫ್ ಖಾತೆಯಲ್ಲಿ ಠೇವಣಿ ಇಟ್ಟಿರುವ ಹಣದ  ಶೇಕಡಾ 50 ಕ್ಕಿಂತ ಹೆಚ್ಚಿನ ಹಣವನ್ನು ನೀವು ಹಿಂಪಡೆಯಲು ಸಾಧ್ಯವಿಲ್ಲ.

ಜಂಟಿ ಖಾತೆ ತೆರೆಯಲು ಸಾಧ್ಯವಿಲ್ಲ
ಪಿಪಿಎಫ್‌ ಸ್ಕೀಮ್ ನಲ್ಲಿ ನೀವು ಜಂಟಿ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ. ಯಾವುದೇ ವ್ಯಕ್ತಿ ಫಾರ್ಮ್ -1 ಭರ್ತಿ ಮಾಡಿ ಅರ್ಜಿ ಸಲ್ಲಿಸಿ ಖಾತೆ ತೆರೆಯಬಹುದು. ಅಪ್ರಾಪ್ತ ಅಥವಾ ಮಾನಸಿಕ ವಿಕಲಚೇತನರ ಹೆಸರಿನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಈ ಸಂದರ್ಭದಲ್ಲಿ, ವ್ಯಕ್ತಿಯ ಹೆಸರಿನಲ್ಲಿ ಕೇವಲ ಒಂದು ಖಾತೆಯನ್ನು ತೆರೆಯಬಹುದಾಗಿದೆ.

ಈ ಖಾತೆಯನ್ನು ನೀವು ವರ್ಗಾಯಿಸಬಹುದು
ಖಾತೆದಾರರ ಕೋರಿಕೆಯ ಮೇರೆಗೆ, ಪಿಪಿಎಫ್ ಖಾತೆಯನ್ನು ಒಂದು ಅಂಚೆ ಕಚೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ಅಥವಾ ಅಂಚೆ ಕಚೇರಿಯಿಂದ ಬ್ಯಾಂಕ್‌ಗೆ ಅಥವಾ ಯಾವುದೇ ಬ್ಯಾಂಕನ್ನು ಮತ್ತೊಂದು ಬ್ಯಾಂಕ್‌ಗೆ ವರ್ಗಾಯಿಸಬಹುದು. ಈ ಸೇವೆಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.

ಅಗ್ಗದ ಬಡ್ಡಿದರದಲ್ಲಿ ಸಾಲ ಪಡೆಯಬಹುದು
ಪಿಪಿಎಫ್ ಖಾತೆಯಲ್ಲಿನ ಠೇವಣಿಯ ಮೇಲೆ ನೀವು ಸಾಲವನ್ನು ಸಹ ಪಡೆದುಕೊಳ್ಳಬಹುದು. ಖಾತೆ ತೆರೆದ  ಒಂದು ವರ್ಷದನಂತರ ಹಾಗೂ  ಐದು ವರ್ಷಗಳ ಕಾಲ ಪಿಪಿಎಫ್‌ ಹೂಡಿಕೆಯ ಮೇಲೆ ನೀವು ಸಾಲ ತೆಗೆದುಕೊಳ್ಳಬಹುದು. ನೀವು ಜನವರಿ 2020 ರಲ್ಲಿ ಪಿಪಿಎಫ್ ಖಾತೆಯನ್ನು ತೆರೆದಿದ್ದರೆ, ನೀವು 1 ಏಪ್ರಿಲ್ 2021 ರಿಂದ 31 ಮಾರ್ಚ್ 2025 ರವರೆಗೆ ಸಾಲ ತೆಗೆದುಕೊಳ್ಳಬಹುದು. ನಿಮ್ಮ ಒಟ್ಟು ಠೇವಣಿಯ  ಗರಿಷ್ಠ 25 ಪ್ರತಿಶತದಷ್ಟು ಸಾಲವನ್ನು ಪಡೆದುಕೊಳ್ಳಬಹುದು.

ಸಿಗುತ್ತದೆ ತೆರಿಗೆ ವಿನಾಯ್ತಿಯ ಲಾಭ
ಪಿಪಿಎಫ್ ಯೋಜನೆಯಲ್ಲಿ ಮಾಡಿದ ಸಂಪೂರ್ಣ ಹೂಡಿಕೆಯ ಮೇಲೆ ನೀವು ತೆರಿಗೆ ವಿನಾಯ್ತಿಯ ಲಾಭವನ್ನು ಪಡೆಯಬಹುದು. ಯೋಜನೆಯಡಿಯಲ್ಲಿನ ಸಂಪೂರ್ಣ ಹೂಡಿಕೆ ಹಾಗೂ ಅದರಿಂದ ಸಿಗುವ ಬಡ್ಡಿಯ ಮೇಲೆ  ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಪಿಪಿಎಫ್ ಹೂಡಿಕೆಯ ಮೇಲಿನ ಬಡ್ಡಿಯನ್ನು ತ್ರೈಮಾಸಿಕ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ.

Trending News