ರಫೇಲ್ ವಿವಾದ:ಫ್ರಾನ್ಸ್ ಮಾಜಿ ಅಧ್ಯಕ್ಷರ ಹೇಳಿಕೆ ಸಂಪೂರ್ಣ ಆಧಾರ ರಹಿತ-ರಾಜನಾಥ್ ಸಿಂಗ್

ಗೃಹ ಸಚಿವ ರಾಜನಾಥ್  ಸಿಂಗ್ ಶನಿವಾರದಂದು ಭಾರತ-ಫ್ರಾನ್ಸ್ ರಫೆಲ್ ಜೆಟ್ ವಿಮಾನದ ಒಪ್ಪಂದದ ಸುತ್ತಲಿನ ವಿವಾದದ ಕುರಿತು ಮಾತನಾಡುತ್ತಾ ಫ್ರೆಂಚ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಅವರ ಹೇಳಿಕೆಯನ್ನು ಆಧಾರರಹಿತ ಎಂದರು 

Updated: Sep 22, 2018 , 05:34 PM IST
ರಫೇಲ್ ವಿವಾದ:ಫ್ರಾನ್ಸ್ ಮಾಜಿ ಅಧ್ಯಕ್ಷರ ಹೇಳಿಕೆ ಸಂಪೂರ್ಣ ಆಧಾರ ರಹಿತ-ರಾಜನಾಥ್ ಸಿಂಗ್

ನವದೆಹಲಿ: ಗೃಹ ಸಚಿವ ರಾಜನಾಥ್  ಸಿಂಗ್ ಶನಿವಾರದಂದು ಭಾರತ-ಫ್ರಾನ್ಸ್ ರಫೆಲ್ ಜೆಟ್ ವಿಮಾನದ ಒಪ್ಪಂದದ ಸುತ್ತಲಿನ ವಿವಾದದ ಕುರಿತು ಮಾತನಾಡುತ್ತಾ ಫ್ರೆಂಚ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಅವರ ಹೇಳಿಕೆಯನ್ನು ಆಧಾರರಹಿತ ಎಂದರು 

ರಾಜನಾಥ್ ಸಿಂಗ್ ಡಾಸಾಲ್ಟ್ ಮತ್ತು ರಿಲಯನ್ಸ್ ನಡುವಿನ ಒಪ್ಪಂದವು ಎರಡು ಖಾಸಗಿ ಪಕ್ಷಗಳ ನಡುವಿನ ವಾಣಿಜ್ಯ ಒಪ್ಪಂದವಾಗಿತ್ತು ಆದ್ದರಿಂದ  ಇದರಲ್ಲಿ ಸರ್ಕಾರದ ಯಾವುದೇ ಎಂದು ತಿಳಿಸಿದರು. 

ಹೊಲಾಂಡ್ ಅವರ ಹೇಳಿಕೆ ವಿಚಾರವಾಗಿ  ಗೃಹ ಸಚಿವ ಸಿಂಗ್ ಅವರು ಎಎನ್ಐಗೆ ಪ್ರತಿಕ್ರಿಯಿಸಿದ ಸಿಂಗ್,"ರಫೇಲ್ ವಿವಾದವನ್ನು ಸೃಷ್ಟಿಸುವುದರಲ್ಲಿ ಯಾವುದೇ ಅರ್ಥವಿಲ್ಲ, ಫ್ರಾನ್ಸ್ ನ ಮಾಜಿ ಅಧ್ಯಕ್ಷರ ಹೇಳಿಕೆಯ ವಿಚಾರವಾಗಿ ರಕ್ಷಣಾ ಸಚಿವಾಲಯವು ಈಗಾಗಲೇ ಹೇಳಿಕೆ ನೀಡಿದ್ದು, ಅವರು ಅದನ್ನು ಪರಿಶೀಲಿಸುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ.ಆದ್ದರಿಂದ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಮತ್ತು ಅವು ಯಾವಾಗಲೂ ಆಧಾರರಹಿತವಾಗಿಯೇ ಉಳಿಯುತ್ತವೆ ಎಂದು ಅವರು ತಿಳಿಸಿದ್ದಾರೆ.

ಶುಕ್ರವಾರದಂದು  ಫ್ರೆಂಚ್ ಜರ್ನಲ್ ಮೀಡಿಯಾಪಾರ್ಟ್ ಪ್ರಕಟಿಸಿದ ಒಂದು ಲೇಖನದಲ್ಲಿ  ಹೊಲಾಂಡ್ ರಫೇಲ್ ಹಗರಣದ ಬಗ್ಗೆ ಪ್ರಸ್ತಾಪಿಸುತ್ತಾ ಸರ್ಕಾರವೇ ರಿಲಯನ್ಸ್  ಕಂಪನಿಯನ್ನು ಒಪ್ಪಂದದ  ಪಾಲುದಾರನನ್ನಾಗಿ ಮಾಡಿತ್ತು, ಈ ಹಿನ್ನಲೆಯಲ್ಲಿ ಬೇರೆ ಕಂಪನಿಗಳನ್ನು ಪರಿಗಣಿಸಲು ಯಾವುದೇ ಆಯ್ಕೆ ಉಳಿದಿರಲಿಲ್ಲ ಎಂದು ಹೇಳಿದ್ದರು.