ರಫೇಲ್ ಶಸ್ತ್ರ ಪೂಜೆಗೆ ಟೀಕೆ; 'ಭಾರತೀಯ ಸಂಸ್ಕೃತಿಯನ್ನು ಅನುಸರಿಸುವುದು ಅಪರಾಧವೇ' ಎಂದ ರಾಜನಾಥ್ ಸಿಂಗ್

ಪ್ರತಿಪಕ್ಷಗಳು ವಿನಾಕಾರಣ ಇದರ ಬಗ್ಗೆ ವಿವಾದ ಸೃಷ್ಟಿಸಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

Last Updated : Oct 13, 2019, 02:03 PM IST
ರಫೇಲ್ ಶಸ್ತ್ರ ಪೂಜೆಗೆ ಟೀಕೆ; 'ಭಾರತೀಯ ಸಂಸ್ಕೃತಿಯನ್ನು ಅನುಸರಿಸುವುದು ಅಪರಾಧವೇ' ಎಂದ ರಾಜನಾಥ್ ಸಿಂಗ್ title=
Photo Courtesy: ANI

ಕರ್ನಾಲ್: ರಫೇಲ್ ಯುದ್ಧ ವಿಮಾನ ಶಸ್ತ್ರ ಪೂಜೆಯ ಬಗ್ಗೆ ಟೀಕಾಪ್ರಹಾರ ನಡೆಸಿದ್ದವರಿಗೆ ತಿರುಗೇಟು ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, 'ಭಾರತೀಯ ಸಂಸ್ಕೃತಿಯನ್ನು ಅನುಸರಿಸುವುದು ಅಪರಾಧವೇ' ಎಂದು ಪ್ರಶ್ನಿಸಿದ್ದಾರೆ.

ಹರಿಯಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕರ್ನಾಲ್ ಪ್ರವಾಸದಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ ನಲ್ಲಿ ನಾನು ಮಾಡಿದ ಪೂಜೆ ಕುರಿತಂತೆ ವ್ಯಾಪಕ ಟೀಕೆ ಹರಿದಾಡುತ್ತಿದೆ. ಆದರೆ ಅದು ನಮ್ಮ ಸಂಸ್ಕೃತಿ, ನಾವು ಸಣ್ಣ ವಯಸ್ಸಿನಿಂದಲೂ ಇದನ್ನು ನಂಬಿದ್ದೇವೆ. ಆದರೆ  ವಿಪಕ್ಷಗಳು ರಫೆಲ್ ಶಸ್ತ್ರ ಪೂಜೆಗೆ ವಿನಾಕಾರಣ ಇದರ ಬಗ್ಗೆ ವಿವಾದ ಸೃಷ್ಟಿಸಿವೆ ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಶ್ಲಾಘಿಸಿದ ಸಚಿವರು, “ಹರಿಯಾಣದ ಹಳೆಯ ಮುಖ್ಯಮಂತ್ರಿಗಳು ಕಾಂಗ್ರೆಸ್ ಅಥವಾ ಐಎನ್ಎಲ್ಡಿಯಿಂದ ಇರಲಿ, ದೆಹಲಿಯಿಂದ ಸರ್ಕಾರವನ್ನು ನಡೆಸುತ್ತಿದ್ದರು. ಸಿಎಂ ಮನೋಹರ್ ಲಾಲ್ ಖಟ್ಟರ್ ಹರಿಯಾಣದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದರು.

36 ರಫೇಲ್ ವಿಮಾನಗಳಲ್ಲಿ ಮೊದಲನೆಯದನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ (ಅಕ್ಟೋಬರ್ 8) ದಸರಾ ಸಂದರ್ಭದಲ್ಲಿ ಔಪಚಾರಿಕವಾಗಿ ಸ್ವೀಕರಿಸಿದರು. ವಿಜಯದಶಮಿಯ ವೇಳೆ ರಫೇಲ್ ಯುದ್ಧ ಸ್ವೀಕರಿಸಿದ ನಂತರ, ರಕ್ಷಣಾ ಸಚಿವರು ತಮ್ಮ ಯುದ್ಧ ವಿಮಾನಕ್ಕೆ ಶಾಸ್ತ್ರೋಪ್ತವಾಗಿ ಶಸ್ತ್ರ ಪೂಜೆ ನೆರವೇರಿಸಿದ್ದರು. 

Trending News