ಮೀನುಗಾರರೊಂದಿಗೆ ಸಮುದ್ರಕ್ಕೆ ಧುಮುಕಿದ Rahul Gandhi : ವಿಡಿಯೋ ವೈರಲ್

ಕೆಲವು ಮೀನುಗಾರರು ಮೀನು ಹಿಡಿಯಲು ಬಲೆ ಬೀಸಿದ ನಂತರ ಸಮುದ್ರಕ್ಕೆ ಜಿಗಿಯುತ್ತಿರುವುದನ್ನು ನೋಡಿದ ರಾಹುಲ್ ಗಾಂಧಿ ಕೂಡ ಇದ್ದಕ್ಕಿದ್ತೆ, ಸಮುದ್ರಕ್ಕೆ ಧುಮುಕಿದ್ದಾರೆ. ರಾಹುಲ್ ದೋಣಿಯಲ್ಲಿ ಬ್ರೆಡ್ ಮತ್ತು ಮೀನು ಕರಿಯ ರುಚಿಯನ್ನು ಕೂಡಾ ಸವೆದಿದ್ದಾರೆ. 

Written by - Ranjitha R K | Last Updated : Feb 25, 2021, 05:17 PM IST
  • ಮೀನುಗಾರರೊಂದಿಗೆ ಸಮುದ್ರಕ್ಕೆ ಧುಮುಕಿದ ರಾಹುಲ್ ಗಾಂಧಿ
  • 10 ನಿಮಿಷಗಳವರೆಗೆ ಸಮುದ್ರದಲ್ಲಿ ಈಜಿದ ರಾಹುಲ್
  • ದೋಣಿಯಲ್ಲಿ ಬ್ರೆಡ್ ಮತ್ತು ಮೀನು ಕರಿ ಸವಿದ ರಾಹುಲ್
ಮೀನುಗಾರರೊಂದಿಗೆ ಸಮುದ್ರಕ್ಕೆ ಧುಮುಕಿದ Rahul Gandhi : ವಿಡಿಯೋ ವೈರಲ್ title=
ಮೀನುಗಾರರೊಂದಿಗೆ ಸಮುದ್ರಕ್ಕೆ ಧುಮುಕಿದ ರಾಹುಲ್ ಗಾಂಧಿ (photo twitter)

ಕೊಲ್ಲಂ : ಮೀನುಗಾರರ ಜೀವನವನ್ನು ಬಹಳ ಹತ್ತಿರದಿಂದ ತಿಳಿಯುವ  ಸಲುವಾಗಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಮೀನುಗಾರರೊಂದಿಗೆ ದೋಣಿಯಲ್ಲಿ ಸವಾರಿ ಮಾಡಿದ್ದಾರೆ.  ಈ ವೇಳೆ ಮೀನುಗಾರರು (Fishermen) ಮೀನು ಹಿಡಿಯುವ ಸಲುವಾಗಿ ಬಲೆ ಬೀಸಿ, ನಂತರ ಸಮುದ್ರಕ್ಕೆ ಧುಮುಕಿದ್ದಾರೆ. ಇದನ್ನು ಗಮನಿಸಿದ ರಾಹುಲ್ ಗಾಂಧಿ, ಮೀನುಗಾರರೊಂದಿಗೆ ತಾನು ಕೂಡಾ ಸಮುದ್ರಕ್ಕೆ ಧುಮುಕಿದ್ದಾರೆ. ಸುಮಾರು 10 ನಿಮಿಷಗಳವರೆಗೆ ರಾಹುಲ್ ಗಾಂಧಿ ಸಮುದ್ರಕ್ಕೆ ಈಜಿದ್ದಾರೆ. 

ಮೀನುಗಾರರೊಂದಿಗೆ ಸಮುದ್ರಕ್ಕೆ ಧುಮುಕಿದ ರಾಹುಲ್ ಗಾಂಧಿ :
ಸಮುದ್ರದಲ್ಲಿ ದೋಣಿ ಸವಾರಿ ಮಾಡುತ್ತಿದ್ದ ವೇಳೆ,  ಮೀನುಗಾರರು ಮೀನು ಹಿಡಿಯಲು ಬಲೆ ಬೀಸಿದ ನಂತರ, ಸಮುದ್ರಕ್ಕೆ ಹಾರುವುದನ್ನು ಗಮನಿಸಿದ್ದಾರೆ. ಮೀನುಗಾರರು ಸಮುದ್ರಕ್ಕೆ ಧುಮುಕುವುದನ್ನು ನೊಡಿದ್ದೇ ತಡ, ರಾಹುಲ್ ಗಾಂಧಿ (Rahul Gandhi) ಕೂಡಾ ಇದ್ದಕ್ಕಿದ್ದಂತೆ, ಸಮುದ್ರಕ್ಕೆ ಹಾರಿದ್ದಾರೆ.  ಸುಮಾರು 10 ನಿಮಿಷಗಳ ಕಾಲ ರಾಹುಲ್, ಸಮುದ್ರದಲ್ಲಿ ಈಜಿದ್ದಾರೆ. ರಾಹುಲ್ ಸಮುದ್ರಕ್ಕೆ ಧುಮುಕಿದ ವೇಳೆ ದೋಣಿಯಲ್ಲಿ (Boat) ರಾಹುಲ್ ಜೊತೆ ಇನ್ನು ಕೆಲವು ಕಾಂಗ್ರೆಸ್ (Congress) ನಾಯಕರಿದ್ದರು.  

 

 

ಇದನ್ನೂ ಓದಿ  : ಗಡಿರೇಖೆ ಬಳಿಯ ಗುಂಡಿನ ದಾಳಿ ನಿಲ್ಲಿಸಲು ಮುಂದಾದ ಭಾರತ-ಪಾಕ್

'ರಾಹುಲ್ ಗಾಂಧಿ  ನಮಗ್ಯಾರಿಗೂ  ಹೇಳದೆ ನೀರಿಗೆ ಧುಮುಕಿದ್ದಾರೆ. ಇದನ್ನು ನೋಡಿ ನಾವೆಲ್ಲರೂ ಆಶ್ಚರ್ಯಚಕಿತರಾದೆವು ಎಂದು ದೋಣಿಯಲ್ಲಿದ್ದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಸಮುದ್ರದಲ್ಲಿ ರಾಹುಲ್ ಗಾಂಧಿ ಆರಾಮವಾಗಿ 10 ನಿಮಿಷಗಳ ಕಾಲ ಈಜಾಡಿದ್ದಾರೆ (Swimming). ರಾಹುಲ್ ಗಾಂಧಿ ಉತ್ತಮ ಈಜುಗಾರ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ನೀಲಿ ಟೀ ಶರ್ಟ್ ಮತ್ತು ಖಾಕಿ ಪ್ಯಾಂಟ್ ಧರಿಸಿದ್ದರು.  

 

ದೋಣಿಯಲ್ಲಿ ಬ್ರೆಡ್ ಮತ್ತು ಮೀನು ಕರಿಯನ್ನು ಸವಿದ ರಾಹುಲ್ ಗಾಂಧಿ : 
ರಾಹುಲ್ ಜೊತೆ ದೋಣಿಯಲ್ಲಿ 23 ಮೀನುಗಾರರು ಇದ್ದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (KC Venugopal), ಟಿ.ಎನ್.ಪ್ರತಾಪನ್ (TN Prathapan) ಸೇರಿದಂತೆ ಪಕ್ಷದ ನಾಲ್ವರು ಮುಖಂಡರು ಇದ್ದರು. ಮೀನುಗಾರರು ರಾಹುಲ್ ಗಾಂಧಿಗೆ ಬ್ರೆಡ್ (Bread) ಮತ್ತು ಮೀನು ಕರಿಯನ್ನು (Fish Curry) ದೋಣಿಯಲ್ಲಿಯೇ ನೀಡಿದ್ದಾರೆ. ಮೂಲಗಳ ಪ್ರಕಾರ, ರಾಹುಲ್ ಸುಮಾರು ಎರಡೂವರೆ ಗಂಟೆಗಳ ಕಾಲ ಸಮುದ್ರದಲ್ಲಿದ್ದರು.

ಇದನ್ನೂ ಓದಿ  : ಉತ್ತರ ಪ್ರದೇಶದ ಸಿಎಂ ಆಗುತ್ತಾರೆಯೇ ಪ್ರಿಯಾಂಕಾ ಗಾಂಧಿ?

ರಾಹುಲ್ ತಮ್ಮ ಭೇಟಿಯ ಸಮಯದಲ್ಲಿ ಮೀನುಗಾರರ ಸಮುದಾಯದ ಸಮಸ್ಯೆಗಳನ್ನೂ ಕೇಳಿದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News