ಎರಡು ದಿನಗಳ ಭೇಟಿಗಾಗಿ ಕೇರಳಕ್ಕೆ ಆಗಮಿಸಿದ ರಾಹುಲ್ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರದಿಂದ ಎರಡು ದಿನಗಳ ಭೇಟಿಗೆ ಕೇರಳಕ್ಕೆ ಆಗಮಿಸಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ಅವರು ವಯನಾಡಿನಿಂದ 4.31 ಲಕ್ಷ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು.

Last Updated : Jun 7, 2019, 06:16 PM IST
ಎರಡು ದಿನಗಳ ಭೇಟಿಗಾಗಿ ಕೇರಳಕ್ಕೆ ಆಗಮಿಸಿದ ರಾಹುಲ್ ಗಾಂಧಿ  title=

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರದಿಂದ ಎರಡು ದಿನಗಳ ಭೇಟಿಗೆ ಕೇರಳಕ್ಕೆ ಆಗಮಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅವರು ವಯನಾಡಿನಿಂದ 4.31 ಲಕ್ಷ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು.

ರಾಹುಲ್ ಗಾಂಧಿಯವರ ಚುನಾವಣಾ ಸಮಿತಿಯ ಸಂಚಾಲಕ ಮತ್ತು ಸಾಮಾನ್ಯ ಸಂಚಾಲಕರಾದ ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಾಲಿ ರಾಮಚಂದ್ರನ್ ಮತ್ತು ಸದ್ದಾಕ್ಲಿ ಶಿಹಾಬ್ ಥಾಂಗಲ್ ಅವರು ರಾಹುಲ್ ಗಾಂಧಿಯವರ ಭೇಟಿಗಾಗಿ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.ಕ್ಯಾಲಿಕಟ್ ನ ಕರಿಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರು ವಿಶೇಷ ವಿಮಾನದಲ್ಲಿ 1.30 ಗಂಟೆಗೆ ಆಗಮಿಸಿದ್ದಾರೆ. 

ಕೇರಳದಲ್ಲಿ ಎಡವಣ್ಣ, ಅರೀಕೋಡ್, ಕಾಳಿಕಾವು ಮತ್ತು ನಿಲಂಬೂರ್ನಲ್ಲಿ ಮತದಾರರನ್ನು ಭೇಟಿಯಾಗಲಿದ್ದಾರೆ. ರಸ್ತೆಯ ಮೂಲಕ ಕಲ್ಪೆಟ್ಟಾಗೆ ಪ್ರಯಾಣ ಬೆಳಸಿ ಪಿಡಬ್ಲ್ಯೂಡಿ ವಿಶ್ರಾಂತಿ ಗೃಹಕ್ಕೆ ತೆರಳಿದ್ದಾರೆ. ಶನಿವಾರದಂದು ಅವರು ವಯನಾಡ್ ಸುಲಭೀಕರಣ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಇದೆ ವೇಳೆ ಕಲ್ಪೆಟ್ಟಾ ಪಟ್ಟಣ, ಕಂಬಳಕ್ಕಾಡ್, ಪಣರಾಮಂ, ಮನಾಂತವಡಿ, ಪುಲ್ಪಲ್ಲಿ ಮತ್ತು ಸುಲ್ತಾನ್ ಬಥೆರಿಗಳಲ್ಲಿ ಜನರ ಸ್ವಾಗತವನ್ನು ಸ್ವೀಕರಿಸಲಿದ್ದಾರೆ. ಭಾನುವಾರ ಬೆಳಿಗ್ಗೆ ಕಲ್ಪೆಟ್ಟಾದಿಂದ ಹೊರಟು ವಿಶೇಷ ವಿಮಾನದಲ್ಲಿ ಕಪಿಪುರದಿಂದ ದೆಹಲಿಗೆ ಹಿಂದಿರುಗಲಿದ್ದಾರೆ ಎಂದು ತಿಳಿದುಬಂದಿದೆ.

Trending News