Rajanikanth : ರಾಜಕೀಯದಿಂದ ದೂರ ಸರಿದ ಥಲೈವಾ ಅಭಿಮಾನಿಗಳಿಗೆ ಹೇಳಿದ್ದೇನು..?

ರಜನಿ ಮಕ್ಕಲ್ ಮಂದಾರಂ (RMM) ತನ್ನ ಸದಸ್ಯರಿಗೆ ಆರ್‌ಎಂಎಂ ತೊರೆದು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಬಹುದು ಎಂದು ಅನುಮತಿ ನೀಡಿದೆ. ಆರ್‌ಎಂಎಂ ಮುಖಂಡ ವಿ.ಎಂ.ಸುಧಾಕರ್ ಸೋಮವಾರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. 

Written by - Ranjitha R K | Last Updated : Jan 18, 2021, 07:35 PM IST
  • ಬೇರೆ ಪಕ್ಷ ಸೇರಲು ಸ್ವತಂತ್ರರು ಎಂದು ತಮ್ಮಸದಸ್ಯರಿಗೆ ಹೇಳಿದ ಆರ್ ಎಂಎಂ
  • ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಜನಿ ಮಕ್ಕಲ್ ಮಂದಾರಂ
  • ಭಾನುವಾರ ಡಿಎಂಕೆ ಸೇರಿದ್ದ ಆರ್ ಎಂಎಂಸದಸ್ಯರು
Rajanikanth : ರಾಜಕೀಯದಿಂದ ದೂರ ಸರಿದ ಥಲೈವಾ ಅಭಿಮಾನಿಗಳಿಗೆ ಹೇಳಿದ್ದೇನು..? title=
ಬೇರೆ ಪಕ್ಷ ಸೇರಲು ಸ್ವತಂತ್ರರು ಎಂದು ತಮ್ಮಸದಸ್ಯರಿಗೆ ಹೇಳಿದ ಆರ್ ಎಂಎಂ(file photo)

ನವದೆಹಲಿ :  ಚುನಾವಣಾ ರಾಜಕೀಯದಿಂದ ದೂರವಿರಲು ರಜನಿಕಾಂತ್ (Rajanikanth) ಈಗಾಗಲೇ ನಿರ್ಧರಿಸಿದ್ದಾರೆ.  ಇದೀಗ,  ಅವರ ಸಂಘಟನೆ ರಜನಿ ಮಕ್ಕಲ್ ಮಂದಾರಂ (RMM) ತನ್ನ ಸದಸ್ಯರಿಗೆ ಆರ್‌ಎಂಎಂ ತೊರೆದು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಬಹುದು ಎಂದು ಅನುಮತಿ ನೀಡಿದೆ. ಆರ್‌ಎಂಎಂ ಮುಖಂಡ ವಿ.ಎಂ.ಸುಧಾಕರ್ ಸೋಮವಾರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಆರ್‌ಎಂಎಂಗೆ ರಾಜೀನಾಮೆ ನೀಡಿ ಬೇರೆ ಪಕ್ಷ ಸೇರುವವರು ಯಾವುದೇ ಕಾರಣಕ್ಕೂ  ತಾವು ರಜನಿಕಾಂತ್  ಅಭಿಮಾನಿಗಳು ಎಂಬುದನ್ನು ಮರೆಯಬಾರದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.  ಭಾನುವಾರ  ರಾಜೀನಾಮೆ ನೀಡಿದ ಆರ್ ಎಂಎಂ ಜಿಲ್ಲಾ ನಾಯಕರು ಡಿಎಂಕೆ ಸೇರಿದ್ದರು.

 ಒತ್ತಡ ಸೃಷ್ಟಿಸದಂತೆ ಅಭಿಮಾನಿಗಳಲ್ಲಿ ರಜನಿಕಾಂತ್  ಮನವಿ :
ಮತ್ತೆ ರಾಜಕೀಯ ಪ್ರವೇಶಿಸುವಂತೆ  ತಮ್ಮನ್ನು ಒತ್ತಾಯಿಸಬಾರದು ಎಂದು ರಜನಿಕಾಂತ್(Rajanikanth) ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ತಮಿಳು (Tamil) ಭಾಷೆಯಲ್ಲಿ ಬಿಡುಗಡೆಯಾದ ತನ್ನ ಹೇಳಿಕೆಯಲ್ಲಿ, "ನಾನು ರಾಜಕೀಯಕ್ಕೆ (Politics) ಯಾಕೆ ಬರುತ್ತಿಲ್ಲ ಎಂದು ನಾನು ಈಗಾಗಲೇ ವಿವರಿಸಿದ್ದೇನೆ. ದಯವಿಟ್ಟು ನನ್ನನ್ನು ಮತ್ತೆ ಮತ್ತೆ ರಾಜಕೀಯಕ್ಕೆ ಬರುವಂತೆ ಒತ್ತಡ ಹೇರಬೇಡಿ ಎಂದು ಮನವಿ ಮಾಡಿದ್ದಾರೆ. 

ಇದನ್ನೂ  ಓದಿ : ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಣಕ್ಕೆ ಇಳಿಯಲಿರುವ ಶಿವಸೇನೆ..!

ಚುನಾವಣಾ  ರಾಜಕೀಯದಿಂದ ದೂರವಿರುವುದಾಗಿ ಘೋಷಿಸಿದ್ದ ರಜನಿಕಾಂತ್:
ಅನಾರೋಗ್ಯದ ಕಾರಣದಿಂದ  ಚುನಾವಣಾ (Election) ರಾಜಕೀಯದಿಂದ ದೂರವಿರುವುದಾಗಿ ರಜನೀಕಾಂತ್ ಡಿಸೆಂಬರ್ 29 ರಂದು ಘೋಷಿಸಿದ್ದರು. ಚುನಾವಣೆಗೆ ಸ್ಪರ್ಧಿಸದೆಯೇ ಜನರ ಸೇವೆ ಮಾಡುವುದಾಗಿ ಹೇಳಿ,   ಪತ್ರವನ್ನು (Letter) ಬಿಡುಗಡೆ ಮಾಡಿದ್ದರು.  ಅನಾರೋಗ್ಯವಿದ್ದರೂ  ರಾಜಕೀಯ ಪ್ರವೇಶಿಸುವ ಬಗ್ಗೆ  ಘೋಷಿಸುವುದಿಲ್ಲ ಎಂದಿದ್ದರು. ತಮ್ಮ ನಿರ್ಧಾರದಿಂದ ಅಭಿಮಾನಿಗಳು ನಿರಾಶರಾಗುತ್ತಾರೆ, ಆದರೆ ನನ್ನನ್ನು ಕ್ಷಮಿಸಿ" ಎಂದು ಅಭಿಮಾನಿಗಳಲ್ಲಿ  ಮನವಿ ಮಾಡಿಕೊಂಡಿದ್ದರು.

ಇದನ್ನೂ  ಓದಿ : Ram Mandir Trust: ರಾಮಮಂದಿರ ನಿರ್ಮಾಣಕ್ಕೆ ಮೂರೇ ದಿನದಲ್ಲಿ ₹ 100 ಕೋಟಿ ದೇಣಿಗೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News