'ನರೇಂದ್ರ ಮೋದಿ ಅವರ ಭಾರತವನ್ನು ಯಾರೂ ಗುರಾಯಿಸಲು ಸಾಧ್ಯವಿಲ್ಲ'

LAC ಬಳಿ ಚೀನಾದ ವರ್ತನೆಗಳ ಬಗ್ಗೆ ಭಾರತ ಸರ್ಕಾರ ಯಾವ ಪ್ರತಿಕ್ರಿಯೆ ನೀಡಲಿದೆ ಎಂಬುದರ ಕಡೆಗೆ ದೇಶ ಮಾತ್ರವಲ್ಲಿ ಇಡಿ ಜಗತ್ತೇ ಗಮನಿಸುತ್ತಿದೆ. ಇಂತಹ ಸದರ್ಭದಲ್ಲಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಹೀದಿರುವ ಈ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ.

Last Updated : May 27, 2020, 05:03 PM IST
'ನರೇಂದ್ರ ಮೋದಿ ಅವರ ಭಾರತವನ್ನು ಯಾರೂ ಗುರಾಯಿಸಲು ಸಾಧ್ಯವಿಲ್ಲ' title=

ನವದೆಹಲಿ: ಭಾರತ ಮತ್ತು ಚೀನಾ ನಡುವೆ ಲಡಾಖ್ ಗಡಿ ಬಳಿ ಉಲ್ಭಣಿಸಿರುವ ಉದ್ವಿಗ್ನತೆ ಕುರಿತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಗಂಭೀರ ಹೇಳಿಕೆ ನೀಡಿದ್ದಾರೆ. ಬುಧವಾರ, ಈ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರ ನೀಡಿರುವ ಅವರು, "ನರೇಂದ್ರ ಮೋದಿಯವರ ಭಾರತವನ್ನು ಯಾರೂ ಗುರಾಯಿಸಲು ಸಾಧ್ಯವಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ" ಎಂದಿದ್ದಾರೆ. ಆದರೆ, ಇದೆ ಸಂದರ್ಭದಲ್ಲಿ ಅವರು ಚೀನಾ ಜೊತೆಗೆ ನಡೆಯುತ್ತಿರುವ ಉದ್ವಿಘ್ನತೆ ಕುರಿತು ಹೆಚ್ಚಿಗೆ ಏನನ್ನು ಹೇಳಲು ಅವರು ನಿರಾಕರಿಸಿದ್ದಾರೆ ಹಾಗೂ ಪತ್ರಿಕಾಗೋಷ್ಠಿಯ ವಿಷಯವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೇಲೆ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ನೀದುವದಕ್ಕೆ ಮಾತ್ರ ಸೀಮಿತಗೊಳಿಸಿದ್ದಾರೆ.

LAC ಬಳಿ ಚೀನಾದ ವರ್ತನೆಗಳ ಬಗ್ಗೆ ಭಾರತ ಸರ್ಕಾರ ಯಾವ ಪ್ರತಿಕ್ರಿಯೆ ನೀಡಲಿದೆ ಎಂಬುದರ ಕಡೆಗೆ ದೇಶ ಮಾತ್ರವಲ್ಲಿ ಇಡಿ ಜಗತ್ತೇ ಗಮನಿಸುತ್ತಿದೆ. ಇಂತಹ ಸದರ್ಭದಲ್ಲಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಹೀದಿರುವ ಈ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ. ಪ್ರಸಾದ್ ನೀಡಿರುವ ಈ ಹೇಳಿಕೆ ಚೀನಾ ಪ್ರತಿ ಭಾರತದ ಗಟ್ಟಿ ನಿರ್ಧಾರಗಳನ್ನು ಸಿದ್ಧಪಡಿಸಿದ್ದು, ಭಾರತ ಚೀನಾದ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿವೆ.

ಚೀನಾದ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸರ್ಕಾರವು ಇಡೀ ದೇಶಕ್ಕೆ ಪಾರದರ್ಶಕ ರೀತಿಯಲ್ಲಿ ತಿಳಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದರು. ನೇಪಾಳದಲ್ಲಿ ಏನಾಯಿತು, ಅದು ಹೇಗೆ ಸಂಭವಿಸಿತು, ಲಡಾಕ್‌ನಲ್ಲಿ ಏನಾಯಿತು ಎಂಬುದರ ಕುರಿತು ಸರ್ಕಾರ ಸವಿಸ್ತಾರವಾಗಿ ಮಾಹಿತಿ ನೀಡಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದರು. ಆದರೆ, ನಂತರ ರಾಹುಲ್ ಗಾಂಧಿ ಚೀನಾ ವಿಷಯದ ಬಗ್ಗೆ ಹೆಚ್ಚೇನೂ ಮಾತನಾಡದೆ, ಈ ವಿಷಯವನ್ನು ನಾನು ಸರ್ಕಾರದ ದೂರದೃಷ್ಟಿಯ ಮೇಲೆ ಬಿಡಲು ಬಯಸುವೆ ಎಂದು ಹೇಳಿದ್ದರು.

Trending News