'ಮಹಾ' ಮಧ್ಯಸ್ಥಿಕೆಗೆ ಸಿದ್ಧ, ಆದರೆ ಶಿವಸೇನಾ 50:50 ಸೂತ್ರ ಅಸಾಧ್ಯ- ನಿತಿನ್ ಗಡ್ಕರಿ

ಸರ್ಕಾರ ರಚನೆಗೆ ಶಿವಸೇನಾ-ಬಿಜೆಪಿ ಮಧ್ಯ ಬಿಕ್ಕಟ್ಟು ಹೆಚ್ಚುತ್ತಿರುವ ಬೆನ್ನಲ್ಲೇ ಈಗ ನಿತಿನ್ ಗಡ್ಕರಿ ಶಿವಸೇನಾದೊಂದಿಗೆ 50:50 ಸೂತ್ರದ ಚರ್ಚೆಯಾಗಿಲ್ಲ ಎಂದು ಹೇಳಿದ್ದಾರೆ.

Updated: Nov 8, 2019 , 03:35 PM IST
'ಮಹಾ' ಮಧ್ಯಸ್ಥಿಕೆಗೆ ಸಿದ್ಧ, ಆದರೆ ಶಿವಸೇನಾ 50:50 ಸೂತ್ರ ಅಸಾಧ್ಯ- ನಿತಿನ್ ಗಡ್ಕರಿ

ನವದೆಹಲಿ: ಸರ್ಕಾರ ರಚನೆಗೆ ಶಿವಸೇನಾ-ಬಿಜೆಪಿ ಮಧ್ಯ ಬಿಕ್ಕಟ್ಟು ಹೆಚ್ಚುತ್ತಿರುವ ಬೆನ್ನಲ್ಲೇ ಈಗ ನಿತಿನ್ ಗಡ್ಕರಿ ಶಿವಸೇನಾದೊಂದಿಗೆ 50:50 ಸೂತ್ರದ ಬಗ್ಗೆ ಚರ್ಚೆಯಾಗಿಲ್ಲ ಎಂದು ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗಡ್ಕರಿ, ಎರಡು ಪಕ್ಷಗಳ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ, ಆದರೆ ಸರ್ಕಾರವು ದೇವೇಂದ್ರ ಫಡ್ನನ್ವಿಸ್ ಅವರೊಂದಿಗೆ ಸಿಎಂ ಹುದ್ದೆ ಬಿಜೆಪಿ ಬಳಿ ಇರಲಿದೆ ಎಂದು ಹೇಳಿದರು. 'ನನಗೆ ತಿಳಿದ ಮಟ್ಟಿಗೆ, 50:50 ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಶಿವಸೇನೆಯೊಂದಿಗೆ ಯಾವುದೇ ಪೂರ್ವ ಚರ್ಚೆ ನಡೆದಿಲ್ಲ. ಗರಿಷ್ಠ ಶಾಸಕರನ್ನು ಹೊಂದಿರುವ ಪಕ್ಷದಲ್ಲಿ ಸಿಎಂ ಇರಬೇಕು ಎಂದು ಬಾಳ್ ಠಾಕ್ರೆ ಕೂಡ ಹೇಳಿದ್ದರು.

ಬಿಜೆಪಿ ಮತ್ತು ಶಿವಸೇನೆ ನಡುವೆ ರಚಿಸಲಾದ ಸಮ್ಮಿಶ್ರ ಸರ್ಕಾರದಲ್ಲಿ ಫಡ್ನವೀಸ್ ಮಹಾರಾಷ್ಟ್ರವನ್ನು ಮುನ್ನಡೆಸಲಿದ್ದಾರೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಆದರೆ, ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಸೇನಾ, 50:50 ಸೂತ್ರದಡಿ ಬಿಜೆಪಿ ಅಧಿಕಾರವನ್ನು ಹಂಚಿಕೊಳ್ಳಬೇಕೆಂದು ಬಯಸಿದೆ. ಆದರೆ ಇದನ್ನು ಬಿಜೆಪಿ ಸಾರಾಸಗಟಾಗಿ ತಳ್ಳಿ ಹಾಕಿದೆ. ಇದ್ದರಿಂದಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಲ್ಲಿ ವಿಳಂಬವಾಗಿದೆ.

288 ಸದಸ್ಯರ ಮಹಾರಾಷ್ಟ್ರವಿಧಾನಸಭೆ  ಚುನಾವಣೆಯಲ್ಲಿ 105 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಶಿವಸೇನೆ 56 ಸ್ಥಾನಗಳನ್ನು ಗಳಿಸಿದೆ.