Red Fort bomb blast: ದೆಹಲಿಯ ಕೆಂಪುಕೋಟೆ ಪ್ರದೇಶದಲ್ಲಿ ಸಂಭವಿಸಿದ ಭಯಾನಕ ಸ್ಫೋಟದಿಂದ ದೇಶದೆಲ್ಲೆಡೆ ಆತಂಕ ವಾತಾವರಣ ನಿರ್ಮಾಣವಾಗಿದೆ. ಈ ಸ್ಫೋಟದಲ್ಲಿ 9 ಮಂದಿ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆ ನಂತರ ದೇಶಾದ್ಯಂತ ಎಚ್ಚರಿಕೆ ಘೋಷಿಸಲಾಯಿತು. ಆದರೆ ಈಗ ತನಿಖೆಯಿಂದ ಹೊರಬಂದಿರುವ ಮಾಹಿತಿಯು ಎಲ್ಲರನ್ನು ನಿಬ್ಬೆರಗಾಗಿಸಿದೆ — ದೆಹಲಿ ಭಯೋತ್ಪಾದಕರ ನಿಜವಾದ ಗುರಿಯೇ ಅಲ್ಲವಂತೆ!
ತನಿಖಾ ಏಜೆನ್ಸಿಗಳ ಪ್ರಕಾರ, ಭಯೋತ್ಪಾದಕರು ಮೊದಲು ಅಯೋಧ್ಯೆ ಮತ್ತು ವಾರಣಾಸಿಯ ರಾಮ ಮಂದಿರ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದ್ದರು. ಆದರೆ ಯೋಜನೆ ಬಹಿರಂಗವಾಗುವ ಭೀತಿಯಿಂದ ತುರ್ತು ಕ್ರಮವಾಗಿ ದೆಹಲಿಯಲ್ಲೇ ಸ್ಫೋಟ ನಡೆಸಿದರೆಂದು ತಿಳಿದುಬಂದಿದೆ. ಸ್ಫೋಟಕ್ಕಾಗಿ ಬಳಸಿದ ವಸ್ತುಗಳನ್ನು ಬಾಂಗ್ಲಾದೇಶ ಮತ್ತು ನೇಪಾಳದ ಮೂಲಕ ಭಾರತಕ್ಕೆ ತರಲಾಗಿತ್ತು. ಈ ಪಿತೂರಿಯ ಹಿಂದಿರುವ ಉಮರ್ ಎಂಬ ಭಯೋತ್ಪಾದಕನ ಹೆಸರನ್ನೂ ತನಿಖೆ ಹೊರಹಾಕಿದೆ.
ಇದನ್ನೂ ಓದಿ: ದೆಹಲಿ ಸ್ಫೋಟದ ಗಾಯಾಳುಗಳನ್ನು ನೋಡಿ ಮೋದಿ ಭಾವುಕ..! ಮತ್ತದೇ ಶಪಥಗೈದ ಪ್ರಧಾನಿ
ಬಂಧಿತ ಶಾಹೀನ್ ಸೇರಿದಂತೆ ಹಲವಾರು ಭಯೋತ್ಪಾದಕರ ವಿಚಾರಣೆಯಲ್ಲಿ ಅಚ್ಚರಿಯ ಸಂಗತಿಗಳು ಬಯಲಾಗಿದೆ. ಅಯೋಧ್ಯೆಯಲ್ಲಿ ಸ್ಲೀಪರ್ ಮಾಡ್ಯೂಲ್ ಸಕ್ರಿಯಗೊಳಿಸಿ ದಾಳಿ ನಡೆಸುವ ಯೋಜನೆ ಸಿದ್ಧವಾಗಿತ್ತು. ಆದರೆ ಭದ್ರತಾ ಪಡೆಗಳು ಮುಂಚಿತವಾಗಿ ಎಚ್ಚರಗೊಂಡು, ದೊಡ್ಡ ದುರಂತವನ್ನು ತಪ್ಪಿಸಿದವು. ಭಯೋತ್ಪಾದಕರಿಂದ ಸ್ಫೋಟಕಗಳು ಹಾಗೂ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ತನಿಖೆಯಿಂದ ತಿಳಿದುಬಂದಂತೆ, ಸ್ಫೋಟಕಗಳಿಗೆ ಸಮಯ ಮಿತಿ ಇರಲಿಲ್ಲ ಮತ್ತು ಇದು ತರಾತುರಿಯಲ್ಲಿ ನಡೆದ ದಾಳಿ ಎಂದು ದೃಢಪಟ್ಟಿದೆ. ಗರಿಷ್ಠ ಜನಸಂದಣಿ ಇರುವ ಪ್ರದೇಶದಲ್ಲಿ ಸ್ಫೋಟ ನಡೆಸಲು ಅವರ
ಉದ್ದೇಶವಿತ್ತು ಎಂದು ಆರೋಪಿಗಳು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಇನ್ನು ಉಳಿದ 300 ಕೆಜಿ ಅಮೋನಿಯಂ ನೈಟ್ರೇಟ್ ವಶಪಡಿಸಿಕೊಳ್ಳುವುದು ಇದೀಗ ಭದ್ರತಾ ಸಂಸ್ಥೆಗಳ ಪ್ರಮುಖ ಗುರಿಯಾಗಿದೆ.
ಇದನ್ನೂ ಓದಿ: ಈರುಳ್ಳಿ, ಬೆಳ್ಳುಳ್ಳಿ ಬ್ಯಾನ್ ಮಾಡಿರುವ ಭಾರತದ ಏಕೈಕ ನಗರವಿದು..! ಇಲ್ಲಿನ ಜನರ ಆಹಾರ ಪದ್ದತಿಯೇ ವಿಚಿತ್ರ
ಇದುವರೆಗೆ ಏಜೆನ್ಸಿಗಳು 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದು, ದೆಹಲಿಯ ಕೆಂಪುಕೋಟೆ ಬಳಿ ಪಾರ್ಕಿಂಗ್‌ನಲ್ಲಿ ಸುಮಾರು ಮೂರು ಗಂಟೆಗಳ ಕಾಲ ನಿಲ್ಲಿಸಲಾಗಿದ್ದ ಐ-20 ಕಾರು ಕುರಿತು ತನಿಖೆ ಮುಂದುವರಿದಿದೆ. ಈ ಕಾರಿನಲ್ಲಿ ಸ್ಫೋಟಕಗಳನ್ನು ಎಲ್ಲಿಂದ ತುಂಬಲಾಯಿತು ಎಂಬುದರ ತನಿಖೆಯೂ ನಡೆಯುತ್ತಿದೆ. ಈ ಸ್ಫೋಟದ ಹಿಂದಿರುವ ಪಿತೂರಿ ದೇಶದ ಭದ್ರತೆಗೆ ಎಚ್ಚರಿಕೆಯ ಗಂಟೆ ಮೊಳಗಿಸಿದೆ.









