ಜಿಯೋ ಗ್ರಾಹಕರಿಗೊಂದು ಕಹಿ ಸುದ್ದಿ

ರಿಲಯನ್ಸ್ ಜಿಯೋ ಪ್ರಸ್ತುತ ದಿನವೊಂದಕ್ಕೆ 1.5 ಜಿಬಿ ಹೈಸ್ಪೀಡ್ ಇಂಟರ್ನೆಟ್ ಡೇಟಾದ ನೀಡುವ  ನಾಲ್ಕು ವಿಭಿನ್ನ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ.

Updated: Dec 8, 2019 , 03:53 PM IST
ಜಿಯೋ ಗ್ರಾಹಕರಿಗೊಂದು ಕಹಿ ಸುದ್ದಿ

ಮುಂಬೈ:ಹೆಸರಿನಡಿ ಟೆಲಿಕಾಂ ಸೇವೆ ಅಂದಿಸುವ ರಿಲಯನ್ಸ್ ಜಿಯೋ ಇನ್ಫೋಕಾಮ್ ತನ್ನ ಶುಕ್ರವಾರ ತನ್ನ ಟ್ಯಾರಿಫ್  ದರಗಳಲ್ಲಿ ಭಾರಿ ಬದಲಾವಣೆ ತಂದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸ್ಥೆ, ತನ್ನ ಹೊಸ ಟ್ಯಾರಿಫ್ ಗಳು ಹಳೆ ಟ್ಯಾರಿಫ್ ಗಿಂತ ಶೇ.40ರಷ್ಟು ದುಬಾರಿಯಾಗಿವೆ, ಆದರೆ ಶೇ.300 ರಷ್ಟು ಹೆಚ್ಚು ಲಾಭದಾಯಕವಾಗಿವೆ ಎಂದು ಹೇಳಿಕೊಂಡಿದೆ. ದಿನವೊಂದಕ್ಕೆ 1.5 GB ಹೈ ಸ್ಪೀಡ್ ಇಂಟರ್ನೆಟ್ ಡೇಟಾ ನೀಡುವ ಪ್ಲ್ಯಾನ್ ಇನ್ಮುಂದೆ ರೂ.199ಕ್ಕೆ ಸಿಗಲಿದ್ದು, 28 ದಿನಗಳ ಸಿಂಧುತ್ವ ಹೊಂದಿರಲಿದೆ. ವೊಡಾಫೋನ್, ಐಡಿಯಾ ಹಾಗೂ ಭಾರತಿ ಏರ್ಟೆಲ್ ಸಂಸ್ಥೆಗಳು ತಮ್ಮ ಟ್ಯಾರಿಫ್ ದರಗಳನ್ನು ಹೆಚ್ಚಿಸಿದ ಒಂದು ದಿನದ ಬಳಿಕ ರಿಲಯನ್ಸ್ ಸಂಸ್ಥೆ ಕೂಡ ತನ್ನ ಟ್ಯಾರಿಫ್ ಪ್ಲ್ಯಾನ್ ಗಳಲ್ಲಿ ಬದಲಾವಣೆ ತಂದಿದೆ. ರಿಲಯನ್ಸ್ ಜಿಯೋನ ಇತರೆ ಪ್ಲ್ಯಾನ್ ಗಳ ವಿವರ ಕೆಳಗಿನಂತಿದೆ.

ರೂ.199 ರಿಚಾರ್ಜ್ ಪ್ಲ್ಯಾನ್
ರಿಲಯನ್ಸ್ ಜಿಯೋನ 199 ರೂ. ರೀಚಾರ್ಜ್ ಯೋಜನೆಯಡಿಯಲ್ಲಿ, ಜಿಯೋ ಚಂದಾದಾರರು ದಿನಕ್ಕೆ 1.5 ಜಿಬಿ ಡೇಟಾವನ್ನು 28 ದಿನಗಳ ಅವಧಿಗೆ ಬಳಸಬಹುದಾಗಿದೆ. ಈ ಪ್ಯಾಕ್ ಅನಿಯಮಿತ ಜಿಯೋ ಟು ಜಿಯೋ ವಾಯ್ಸ್ ಕರೆಗಳು, 1,000 ನಿಮಿಷಗಳ ಜಿಯೋದಿಂದ ಜಿಯೋ ಅಲ್ಲದ ಧ್ವನಿ ಕರೆಗಳು, ಅನಿಯಮಿತ ಎಸ್‌ಎಂಎಸ್‌ಗಳು (ದಿನಕ್ಕೆ 100) ಮತ್ತು ಜಿಯೋ ಮೊಬೈಲ್ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯನ್ನು ಸಹ ನೀಡುತ್ತದೆ.

ರೂ. 399 ರಿಚಾರ್ಜ್ ಪ್ಲ್ಯಾನ್
ರಿಲಯನ್ಸ್ ಜಿಯೋನ 399 ರೂ. ರೀಚಾರ್ಜ್ ಯೋಜನೆಯಡಿ, ಜಿಯೋ ಚಂದಾದಾರರು 56 ದಿನಗಳ ಅವಧಿಗೆ ದಿನಕ್ಕೆ 1.5 ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಈ ಪ್ಯಾಕ್ ಅನಿಯಮಿತ ಜಿಯೋ ಟು ಜಿಯೋ ವಾಯ್ಸ್ ಕರೆಗಳು, 2,000 ನಿಮಿಷಗಳ ಜಿಯೋ ಟು ಜಿಯೋ ಅಲ್ಲದ ಧ್ವನಿ ಕರೆಗಳು, ಅನಿಯಮಿತ ಎಸ್‌ಎಂಎಸ್ (ದಿನಕ್ಕೆ 100) ಮತ್ತು ಜಿಯೋ ಮೊಬೈಲ್ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯನ್ನು ಸಹ ನೀಡುತ್ತದೆ.

ರೂ. 599 ರಿಚಾರ್ಜ್ ಪ್ಲ್ಯಾನ್
ರಿಲಯನ್ಸ್ ಜಿಯೋನ 555 ರೂ. ರೀಚಾರ್ಜ್ ಯೋಜನೆಯಡಿ, ಜಿಯೋ ಚಂದಾದಾರರು 84 ದಿನಗಳ ಅವಧಿಗೆ ದಿನಕ್ಕೆ 1.5 ಜಿಬಿ ಡೇಟಾವನ್ನು ಪಡೆಯುತ್ತಾರೆ. ಪ್ಯಾಕ್ ಅನಿಯಮಿತ ಜಿಯೋ ಟು ಜಿಯೋ ವಾಯ್ಸ್ ಕರೆಗಳು, 3,000 ನಿಮಿಷಗಳ ಜಿಯೋದಿಂದ ಜಿಯೋ ಅಲ್ಲದ ಧ್ವನಿ ಕರೆಗಳು, ಅನಿಯಮಿತ ಎಸ್‌ಎಂಎಸ್ (ದಿನಕ್ಕೆ 100) ಮತ್ತು ಜಿಯೋ ಮೊಬೈಲ್ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯನ್ನು ಸಹ ನೀಡುತ್ತದೆ.

ರೂ. 2,199 ರಿಚಾರ್ಜ್ ಪ್ಲ್ಯಾನ್ 
ರಿಲಯನ್ಸ್ ಜಿಯೋನ 2,199 ರೂ. ರೀಚಾರ್ಜ್ ಯೋಜನೆಯಡಿಯಲ್ಲಿ, ಜಿಯೋ ಚಂದಾದಾರರು ದಿನಕ್ಕೆ 1.5 ಜಿಬಿ ಇಂಟರ್ನೆಟ್ ಡೇಟಾವನ್ನು 365 ದಿನಗಳ ಅವಧಿಗೆ ಪಡೆಯುತ್ತಾರೆ. ಪ್ಯಾಕ್ ಅನಿಯಮಿತ ಜಿಯೋ ಟು ಜಿಯೋ ವಾಯ್ಸ್ ಕರೆಗಳು, ಜಿಯೋ ಟು ಜಿಯೋ ಅಲ್ಲದ ವಾಯ್ಸ್ ಕರೆಗಳು, ಅನಿಯಮಿತ ಎಸ್‌ಎಂಎಸ್ (ದಿನಕ್ಕೆ 100) ಮತ್ತು ಜಿಯೋ ಮೊಬೈಲ್ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯನ್ನು ಸಹ ನೀಡುತ್ತದೆ.