ಗುರುಗ್ರಾಮ್: ಪ್ರೀತಿಗೆ ಕಣ್ಣಿಲ್ಲ ಅದಕ್ಕೆ ವಯಸ್ಸಿನ ಮೀತಿಯೂ ಇಲ್ಲ ಆದ್ದರಿಂದ ಇಲ್ಲೊಬ್ಬ 66 ವಯಸ್ಸಿನ ನಿವೃತ್ತ ಬ್ಯಾಂಕ್ ಅಧಿಕಾರಿ ಹೀಗೆ ಲವ್ವಲ್ಲಿ ಬಿದ್ದು ಅವನಿಗೆ ಫೇಸ್ ಬುಕ್ ಪ್ರಿಯತಮೆಯೋಬ್ಬಳು 35 ಲಕ್ಷ ರೂಪಾಯಿ ಯಾಮಾರಿಸಿದ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಆ ನಿವೃತ್ತ ಬ್ಯಾಂಕ್ ಉದ್ಯೋಗಿ ಇನ್ನು ಅವಿವಾಹಿತನಾಗಿದ್ದು  ಮೇ 19ರಂದು  ಜೆನ್ನಿ ಆಂಡರ್ಸನ್ ಎನ್ನುವ ಮಹಿಳೆ ಫೇಸ್ ಬುಕ್ ಮೂಲಕ ಕೋರಿಕೆಯನ್ನು ಕಳಿಸಿದ್ದಾಳೆ. ಕಾಲಾಂತರದಲ್ಲಿ ಇಬ್ಬರು ವಾಟ್ಸ್ ಅಪ್ ನಂಬರಗಳನ್ನು ವಿನಿಮಯ ಮಾಡಿಕೊಂಡು  ತಮ್ಮ ಚಾಟ್ ನ್ನು ಮುಂದುವರೆಸಿದ್ದಾರೆ.


ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವಂತೆ ಈ ನಿವೃತ್ತ ಬ್ಯಾಂಕ್ ಅಧಿಕಾರಿ ಡಿಎಲ್ಎಫ್ ಅಧಿಕಾರಿ ಗುರುಗ್ರಾಮ್ ದಲ್ಲಿ ವಾಸಿಸುತ್ತಿದ್ದು, ತನ್ನ ಫೇಸ್ ಬುಕ್ ಪ್ರಿಯತಮೆಗೆ ಸುಮಾರು 13 ಲಕ್ಷ ರೂಪಾಯಿಗಳ ಬ್ಯಾಂಕ್ ಸೇವಿಂಗ್ಸ್ ನೀಡಿದ್ದಲ್ಲದೆ 22 ಲಕ್ಷ ರೂಪಾಯಿಗಳ ಸಾಲವನ್ನು ತನ್ನ ಈ ಫೇಸ್ ಬುಕ್ ಸಖಿಗೆ ನೀಡಿದ್ದಾನೆ ಎನ್ನಲಾಗಿದೆ.ಈ ಪ್ರೇಯಸಿ ಈತನನ್ನು ಭೇಟಿಯಾಗಲು ಲಂಡನ್ ನಿಂದ ಭಾರತಕ್ಕೆ ಪ್ರಯಾಣ ಬೆಳೆಸುತ್ತಿದ್ದಳು ಎಂದು ಹೇಳಲಾಗಿದ್ದು ಆದರೆ ಸೂಕ್ತ ದಾಖಲೆ ಇಲ್ಲದೆ ಕಾರಣ ಅವಳನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.


ನಂತರ ಭಾರತಕ್ಕೆ ಆಗಮಿಸಿದ ಜೆನ್ನಿಯು ತನ್ನ ಕಡೆ ಇರುವ ಸುಮಾರು 68 ಲಕ್ಷ ಮೌಲ್ಯದ ಹಣಕ್ಕೆ ಯಾವುದೇ ಸೂಕ್ತ ದಾಖಲೆ ಇಲ್ಲದೆ ಮುಂಬೈ ನಿಂದ ದೆಹಲಿಗೆ ಪ್ರಯಾನಿಸುತ್ತಿದ್ದಳು ಎಂದು ತಿಳಿದುಬಂದಿದೆ. ಆದರೆ ಇದಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳು ತಡೆಯೊಡ್ಡಿದ್ದಾರೆ.ಆಗ ತನ್ನ ಸ್ಥಿತಿಯನ್ನು ತನ್ನ ಲವರ್ ನಿವೃತ್ತ ಬ್ಯಾಂಕ್ ಅಧಿಕಾರಿ ಬಳಿ ಇದನ್ನು ತೋಡಿಕೊಂಡಿದ್ದಾಳೆ. ಆಗ ಅವನು ಸುಮಾರು  ಜೂನ್ 1 ರಿಂದ  ಜೂನ್ 15 ರವರೆಗೆ ಸುಮಾರು 35 ಲಕ್ಷ ರೂಗಳನ್ನು ಜಮಾಗೊಳಿಸಿದ್ದಾನೆ. ಆದರೆ  ಈಗ ಅವಳು ಅವನ್ನನ್ನು  ಭೇಟಿ ಆಗಲೇ ಇಲ್ಲ ಎಂದು ಆ  ನಿವೃತ್ತ ಬ್ಯಾಂಕ್ ಅಧಿಕಾರಿ   ಪೊಲೀಸರಿಗೆ ದೂರು ನೀಡಿದ್ದಾನೆ.