Coronavirus ಹಾವಳಿ: ಬೆಂಗಳೂರಿನಲ್ಲಿ ನಡೆಯಬೇಕಿದ್ದ RSS ವಾರ್ಷಿಕ ಸಭೆ ರದ್ದು

ಮೂರು ದಿನಗಳ ಎಬಿಪಿಎಸ್ ಸಭೆ ಮಾರ್ಚ್ 15 ರಿಂದ ಬೆಂಗಳೂರಿನ ಚನ್ನನಹಳ್ಳಿಯ ಜನಸೇವ ವಿದ್ಯಾ ಕೇಂದ್ರದಲ್ಲಿ ನಡೆಯಬೇಕಿತ್ತು.

Last Updated : Mar 14, 2020, 01:15 PM IST
Coronavirus ಹಾವಳಿ: ಬೆಂಗಳೂರಿನಲ್ಲಿ ನಡೆಯಬೇಕಿದ್ದ RSS ವಾರ್ಷಿಕ ಸಭೆ ರದ್ದು title=

ಬೆಂಗಳೂರು: ಸಾಂಕ್ರಾಮಿಕ ಕೊರೊನಾವೈರಸ್ನ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಸರ್ಕಾರ ಹೊರಡಿಸಿದ ಸೂಚನೆಗಳು ಮತ್ತು ಸಲಹೆಗಳ ಹಿನ್ನಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಶನಿವಾರ (ಮಾರ್ಚ್ 14) ಅಖಿಲ ಭಾರತೀಯ ಪ್ರತಿಧಿ ಸಭೆಯ (ಎಬಿಪಿಎಸ್) ವಾರ್ಷಿಕ ಸಭೆಯನ್ನು ರದ್ದುಗೊಳಿಸಿದೆ.  ಸಭೆಯಲ್ಲಿ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಭೈಯಾಜಿ ಜೋಶಿ ಇಂದು ಈ ಘೋಷಣೆ ಮಾಡಿದ್ದಾರೆ.

ಮೂರು ದಿನಗಳ ಎಬಿಪಿಎಸ್ ಸಭೆ ಮಾರ್ಚ್ 15 ರಿಂದ ಬೆಂಗಳೂರಿನ ಚನ್ನನಹಳ್ಳಿಯ ಜನಸೇವ ವಿದ್ಯಾ ಕೇಂದ್ರದಲ್ಲಿ ನಡೆಯಲು ನಿರ್ಧರಿಸಲಾಗಿತ್ತು. ಈ ಸಂಗಮದಲ್ಲಿ ಆರ್‌ಎಸ್‌ಎಸ್ ಮತ್ತು ಸಂಬಂಧಿತ ಸಂಸ್ಥೆಗಳ ಸುಮಾರು 1,500 ಚುನಾಯಿತ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿತ್ತು. ಒಂದೊಮ್ಮೆ ಈ ಸಭೆ ರದ್ದಾಗದಿದ್ದರೆ ಇದು ಕರ್ನಾಟಕದಲ್ಲಿ ನಡೆಯುತ್ತಿದ್ದ ಏಳನೇ ಎಬಿಪಿಎಸ್ ಸಭೆ ಇದಾಗಿತ್ತು.

ಸಭೆಯನ್ನು ಸರಸಂಘಚಾಲಕ ಮೋಹನ್ ಭಾಗವತ್ ಅವರ ಸಮ್ಮುಖದಲ್ಲಿ  ರಾಷ್ಟ್ರೀಯ ಸ್ವಯಂಸೇವಕ ಸಂಘದ  ಸುರೇಶ್ ಜೋಶಿ ನಡೆಸಬೇಕಿತ್ತು. ಅಲ್ಲದೆ, ಈ ಕಾರ್ಯಕ್ರಮದಲ್ಲಿ  ವಿಎಚ್‌ಪಿ (ನ್ಯಾಯಮೂರ್ತಿ ವಿಷ್ಣು ಸದಾಶಿವ ಕೊಕ್ಜೆ ಮತ್ತು ಅಲೋಕ್ ಕುಮಾರ್), ಎಬಿವಿಪಿ (ಪ್ರೊ. ಸುಬ್ಬಯ್ಯ ಷಣ್ಮುಗಂ), ಭಾರತೀಯ ಮಜ್ದೂರ್ ಸಂಘ (ಸಾಜಿ ನಾರಾಯಣನ್), ವಿದ್ಯಾ ಭಾರತಿ (ರಾಮಕೃಷ್ಣ ರಾವಿ) ವನವಾಸಿ ಕಲ್ಯಾಣ್ ಅಶ್ರಂ(ಜಗದೇವ್ ರಾವ್ ಒರಾನ್), ಬಿಜೆಪಿ (ಜೆಪಿ ನಡ್ಡಾ) ಮತ್ತು ಸಾಕ್ಷಾಮಾ (ದಯಾಲ್ ಸಿಂಗ್ ಪವಾರ್) ಭಾಗವಹಿಸಬೇಕಿತ್ತು.

ಆರ್‌ಎಸ್‌ಎಸ್‌ನಲ್ಲಿ 'ಕ್ಷೇತ್ರಗಳು' ಎಂಬ 11 ವಲಯಗಳಿವೆ, ಅದರ ಅಡಿಯಲ್ಲಿ 'ಪ್ರಾಂಟ್' ಎಂಬ 44 ಕೆಲಸದ ಘಟಕಗಳು ಸುಲಭವಾಗಿ ಕೆಲಸ ಮಾಡಲು ಇವೆ, ಮತ್ತು ಅದರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುತ್ತಿದ್ದರು.

Trending News