ಮಹಾ ಬಿಕ್ಕಟ್ಟಿಗೆ ಆರೆಸೆಸ್ಸ್ ನೀಡಿದ ಆ ಎಚ್ಚರಿಕೆ ಸಂದೇಶ ಯಾವುದು...!

ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕವಾಗಿರುವ ಆರ್‌ಎಸ್‌ಎಸ್ ಮಹಾರಾಷ್ಟ್ರದಲ್ಲಿನ ಸರ್ಕಾರ ರಚನೆ ವಿಚಾರವಾಗಿ ಕೊನೆಗೂ ಬಾಯಿಬಿಟ್ಟಿದೆ.

Updated: Nov 19, 2019 , 05:03 PM IST
ಮಹಾ ಬಿಕ್ಕಟ್ಟಿಗೆ ಆರೆಸೆಸ್ಸ್ ನೀಡಿದ ಆ ಎಚ್ಚರಿಕೆ ಸಂದೇಶ ಯಾವುದು...!
file photo

ನವದೆಹಲಿ: ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕವಾಗಿರುವ ಆರ್‌ಎಸ್‌ಎಸ್ ಮಹಾರಾಷ್ಟ್ರದಲ್ಲಿನ ಸರ್ಕಾರ ರಚನೆ ವಿಚಾರವಾಗಿ ಕೊನೆಗೂ ಬಾಯಿಬಿಟ್ಟಿದೆ.

ಈ ಕುರಿತಾಗಿ ಮಾತನಾಡಿದ ಆರೆಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್ 'ಸ್ವಾರ್ಥವು ಕೆಟ್ಟ ವಿಷಯ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಕೆಲವೇ ಜನರು ತಮ್ಮ ಸ್ವಾರ್ಥವನ್ನು ತ್ಯಜಿಸುತ್ತಾರೆ. ದೇಶದ ಅಥವಾ ದೇಶದ ಜನರ ಉದಾಹರಣೆಯನ್ನು ತೆಗೆದುಕೊಳ್ಳಿ ಎಂದು ಭಾಗವತ್ ಮಂಗಳವಾರದಂದು ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಇದೆ ವೇಳೆ ಅವರು ಪರೋಕ್ಷವಾಗಿ ಶಿವಸೇನೆಗೆ ಎಚ್ಚರಿಕೆ ಸಂದೇಶ ರವಾನಿಸಿ' ಈ ವಿಚಾರದ ಮೇಲೆ ಅವರು ಹೋರಾಟ ನಡೆಸಲು ಮುಂದಾದಲ್ಲಿ ಇಬ್ಬರೂ ನಷ್ಟವನ್ನು ಅನುಭವಿಸುತ್ತಾರೆ ಎಂದು ಎಲ್ಲರಿಗೂ ತಿಳಿದಿದೆ' ಎಂದು ಅವರು ಹೇಳಿದರು.

ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷಗಳು ಬಹುಮತ ಸಾಬೀತುಪಡಿಸಲು ವಿಫಲವಾದ ಹಿನ್ನಲೆಯಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿ ಮಾಡಲಾಯಿತು. 288 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 105, ಶಿವಸೇನೆ 56, ಎನ್‌ಸಿಪಿ, ಕಾಂಗ್ರೆಸ್ ಮತ್ತು ಇತರರು 102 ಸ್ಥಾನಗಳನ್ನು ಗೆದ್ದಿದ್ದಾರೆ.