ನವದೆಹಲಿ: ಆರೆಸೆಸ್ಸ್ ಎಂದಿಗೂ ಕೂಡ ತನ್ನ ಸಿದ್ಧಾಂತವನ್ನುಯಾರ ಮೇಲೆಯೂ ಹೇರುವುದಿಲ್ಲ ಮತ್ತು ಅದು ಮಾಡುತ್ತಿರುವ ಕೆಲಸವನ್ನು ಹೊಲಿಸಲಸಾದ್ಯ ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗವತ್  ಸೋಮವಾರದಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ನವದೆಹಲಿಯಲ್ಲಿ 'ಭವಿಷ್ಯ ಕಾ ಭಾರತ್' ಕುರಿತಾದ ಆರೆಸ್ಸೆಸ್ಸ್ ಮೂರು ದಿನಗಳ ಸಮಾವೇಶದಲ್ಲಿ ದೇಶದ ಎಲ್ಲ ವಲಯಗಳ ಜನರನ್ನು ಉದ್ದೇಶಿಸಿ ಮೋಹನ್ ಭಾಗವತ್ ಮಾತನಾಡುತ್ತಾ ಆರೆಸ್ಸೆಸ್ ಸಂಸ್ಥಾಪಕರಾದ ಡಾ. ಕೆ.ಬಿ.ಹೆಡ್ಗೇವಾರ್ ರವರ ಕೊಡುಗೆ ಮತ್ತು ಜೀವನ ಅಲ್ಲದೆ ಸಾಮಾಜಿಕ ಕಲ್ಯಾಣಕ್ಕಾಗಿ ಸಂಘ ಕಾರ್ಯಕರ್ತರನ್ನು ಹೊಗಳಿದರು. ಅಲ್ಲದೆ ಈ ಎಲ್ಲಾ ವರ್ಷಗಳಿಂದ ಆರ್ಎಸ್ಎಸ್ ತಪ್ಪಾಗಿ ಗ್ರಹಿಸಲ್ಪಟ್ಟಿದೆ ಎಂದು ಭಾಗವತ್ ತಿಳಿಸಿದರು.



ಆರೆಸ್ಸೆಸ್ ಒಂದು ಶಕ್ತಿಯಾಗಿ ಹೊರಹೊಮ್ಮಿದೆ ಅದು ಎಂದಿಗೂ ಕೂಡ ಪ್ರಚಾರವನ್ನು ಬಯಸುವುದಿಲ್ಲ ಮತ್ತು ದೇಶದಲ್ಲಿನ ಯಾವುದೇ ಸಂಘಟನೆಯೂ ಸಹಿತ ಇದರ ಗುಣಮಟ್ಟಕ್ಕೆ ಸರಿಸಮಾನವಾಗಲಾರದು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಕಾಂಗ್ರೆಸ್ ನ ಕೊಡುಗೆಯ ಕುರಿತಾಗಿ ಮಾತನಾಡುತ್ತಾ ಪಕ್ಷವು ದೇಶಕ್ಕೆ ಹಲವು ಶ್ರೇಷ್ಠ ವ್ಯಕ್ತಿಗಳಿಗೆ ನೀಡಿದೆ ಎಂದರು.


ಆರೆಸ್ಸೆಸ್ ನ ಈ ಕಾರ್ಯಕರ್ಮದಲ್ಲಿ ನವಾಝುದ್ದೀನ್ ಸಿದ್ದಿಕಿ, ಮನಿಷಾ ಕೊಯಿರಾಲಾ, ಅನು ಮಲಿಕ್, ರವಿ ಕಿಸೆನ್, ಭಾಗ್ಯಶ್ರೀ ಮತ್ತು ಅನ್ನು ಕಪೂರ್ ಸೇರಿದಂತೆ ಬಾಲಿವುಡ್ ನ ಪ್ರಮುಖ ವ್ಯಕ್ತಿಗಳು ಹಾಜರಿದ್ದರು.