ಈಗ ಅಯೋಧ್ಯೆ ಆಯ್ತು, ಮಥುರಾ, ಕಾಶಿ ಬಗ್ಗೆ ಆರೆಸೆಸ್ಸ್ ಹೇಳಿದ್ದೇನು?

ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕವಾಗಿರುವ ಆರೆಸೆಸ್ಸ್ ಶನಿವಾರದಂದು ವಾರಣಾಸಿ ಮತ್ತು ಮಥುರಾದಲ್ಲಿ ಮಸೀದಿಗಳ ಬದಲಿಗೆ ದೇವಾಲಯಗಳ ನಿರ್ಮಾಣದ ಕರೆಗೆ ಬೆಂಬಲವಿಲ್ಲ ಎಂದು ಹೇಳಿದೆ.

Last Updated : Nov 10, 2019, 11:55 AM IST
ಈಗ ಅಯೋಧ್ಯೆ ಆಯ್ತು, ಮಥುರಾ, ಕಾಶಿ ಬಗ್ಗೆ ಆರೆಸೆಸ್ಸ್ ಹೇಳಿದ್ದೇನು? title=
file photo

ನವದೆಹಲಿ: ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕವಾಗಿರುವ ಆರೆಸೆಸ್ಸ್ ಶನಿವಾರದಂದು ವಾರಣಾಸಿ ಮತ್ತು ಮಥುರಾದಲ್ಲಿ ಮಸೀದಿಗಳ ಬದಲಿಗೆ ದೇವಾಲಯಗಳ ನಿರ್ಮಾಣದ ಕರೆಗೆ ಬೆಂಬಲವಿಲ್ಲ ಎಂದು ಹೇಳಿದೆ.

ಅಯೋಧ್ಯೆಯ 2.77ಎಕರೆ ವಿವಾದಿತ ಸ್ಥಳ ರಾಮ್ ಲಲ್ಲಾಗೆ ಸೇರಿದ್ದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಈ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಕೇಳಿದಾಗ ಇದಕ್ಕೆ ಅವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.'ಸಂಘವು ಚಳುವಳಿಗಳಲ್ಲಿ ಭಾಗಿಯಾಗಿಲ್ಲ..ಅದರ ಕೆಲಸ ಚಾರಿತ್ರ್ಯವನ್ನು ನಿರ್ಮಿಸುವುದಾಗಿದೆ' ಎಂದು ಭಾಗವತ್ ಹೇಳಿದರು.

1992 ರಲ್ಲಿ ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದ ನಂತರ, ಬಲಪಂಥೀಯ ಗುಂಪುಗಳ ಮುಂದಿನ ಕಾರ್ಯಸೂಚಿಯ ತಾಣವಾಗಿ ವಾರಣಾಸಿ ಮತ್ತು ಮಥುರಾ ಆಗಿರಬಹುದು ಎಂದು ಹೇಳಲಾಗುತ್ತಿದೆ. "ಯೆ ಸಿರ್ಫ್ ಜಾಂಕಿ ಹೈ, ಕಾಶಿ, ಮಥುರಾ ಬಾಕಿ ಹೈ (ಇದು ಕೇವಲ ಟ್ರೈಲರ್, ಕಾಶಿ, ಮಥುರಾ ಇನ್ನೂ ಬಾಕಿ ಇದೆ) ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸದ ನಂತರ ಬಲಪಂಥೀಯ ಕಾರ್ಯಕರ್ತರು ಘೋಷಣೆ ಕೂಗಿದ್ದರು.

ವಾರಣಾಸಿಯ ವಿಶ್ವನಾಥ ದೇವಾಲಯವು ಜ್ಞಾನವಪಿ ಮಸೀದಿಯೊಂದಿಗೆ ಗಡಿ ಗೋಡೆಯನ್ನು ಹಂಚಿಕೊಂಡಿದೆ. ಮಥುರಾದಲ್ಲಿ, ಕೃಷ್ಣ ಜನ್ಮಭೂಮಿ ದೇವಾಲಯ ಸಂಕೀರ್ಣದ ಪಕ್ಕದಲ್ಲಿ ಶಾಹಿ ಇದ್ಗಾ ಇದೆ.

Trending News