Rupee Symbol History: ಭಾರತೀಯ ರೂಪಾಯಿ ಚಿಹ್ನೆ ಹುಟ್ಟಿದ್ದು ಹೇಗೆ..? ಇದರ ಹುಟ್ಟಿನ ಹಿಂದಿದೆ ತಮಿಳುನಾಡಿನ ನಂಟು..!

ಈಗ ರೂಪಾಯಿ ಚಿಹ್ನೆಯ ವಿಚಾರ ತಾರಕ್ಕೇರಿರುವ ಬೆನ್ನಲ್ಲೇ ರೂಪಾಯಿ ಚಿಹ್ನೆ ಹುಟ್ಟಿದ್ದು ಹೇಗೆ ಅದನ್ನು ಕಂಡು ಹಿಡಿದವರು ಯಾರು ಎನ್ನುವ ವಿಚಾರವನ್ನು ತಿಳಿಯೋಣ ಬನ್ನಿ.

Written by - Manjunath Naragund | Last Updated : Mar 13, 2025, 06:00 PM IST
  • ಡಿಎಂಕೆ ಸರ್ಕಾರ ಈ ಬದಲಾವಣೆಯನ್ನು ಭಾಷಾ ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಅಸ್ಮಿತೆಯ ಸಂಕೇತ ಎಂದು ಹೇಳಿದೆ.
  • ತಮಿಳುನಾಡಿನಲ್ಲಿ ಸ್ಥಳೀಯ ಭಾಷೆಯನ್ನು ಉತ್ತೇಜಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
  • ಇತರ ಹಲವು ರಾಜ್ಯಗಳಲ್ಲಿಯೂ ಸಹ, ಬಜೆಟ್ ದಾಖಲೆಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಚಿಹ್ನೆಗಳನ್ನು ಬಳಸಲಾಗುತ್ತದೆ
 Rupee Symbol History: ಭಾರತೀಯ ರೂಪಾಯಿ ಚಿಹ್ನೆ ಹುಟ್ಟಿದ್ದು ಹೇಗೆ..? ಇದರ ಹುಟ್ಟಿನ ಹಿಂದಿದೆ ತಮಿಳುನಾಡಿನ ನಂಟು..!

Rupee Symbol History: ತಮಿಳುನಾಡು ಸರ್ಕಾರವು 2025-26 ರ ಬಜೆಟ್ ದಾಖಲೆಯಿಂದ ಭಾರತೀಯ ರೂಪಾಯಿ ಚಿಹ್ನೆ '₹' ಅನ್ನು ತೆಗೆದುಹಾಕಿ, ಅದರ ಬದಲಿಗೆ ತಮಿಳು ಲಿಪಿಯಲ್ಲಿ ಬರೆದ 'ರೂ' (Ru) ಅನ್ನು ಬಳಸಿದೆ.ಈ ಬದಲಾವಣೆ ಈಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.

Add Zee News as a Preferred Source

ವಿರೋಧ ಪಕ್ಷಗಳು ತಮಿಳುನಾಡಿನ ಡಿಎಂಕೆ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿ ಈ ವಿಚಾರದಲ್ಲಿ ಸ್ಟಾಲಿನ್ ನೇತೃತ್ವದ ಸರ್ಕಾರ ಭಾಷಾ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿವೆ.ಈ ನಿರ್ಧಾರದ ನಂತರ, ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಮತ್ತು ಇತರ ನಾಯಕರು ಅಲ್ಲಿನ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈಗ ರೂಪಾಯಿ ಚಿಹ್ನೆಯ ವಿವಾದ ತಾರಕ್ಕೇರಿರುವ ಬೆನ್ನಲ್ಲೇ ಭಾರತೀಯ ರೂಪಾಯಿ ಚಿಹ್ನೆ ಹುಟ್ಟಿದ್ದು ಹೇಗೆ ಅದನ್ನು ಕಂಡು ಹಿಡಿದವರು ಯಾರು? ಎನ್ನುವ ವಿಚಾರವನ್ನು ತಿಳಿಯೋಣ ಬನ್ನಿ.

ರೂಪಾಯಿ ಚಿಹ್ನೆಯನ್ನು ವಿನ್ಯಾಸಗೊಳಿಸಿದವರು ತಮಿಳುನಾಡಿನ ಉದಯಕುಮಾರ್..!

ಭಾರತೀಯ ರೂಪಾಯಿಯ ಚಿಹ್ನೆ '₹' ಅನ್ನು ಅಧಿಕೃತವಾಗಿ 2010 ರಲ್ಲಿ ಅಳವಡಿಸಿಕೊಳ್ಳಲಾಯಿತು. ಇದನ್ನು ವಿನ್ಯಾಸಗೊಳಿಸಿದವರು ತಮಿಳುನಾಡಿನ ನಿವಾಸಿಯಾಗಿರುವ ಉದಯಕುಮಾರ್ ಧರ್ಮಲಿಂಗಂ. ಅವರು 10 ಅಕ್ಟೋಬರ್ 1978 ರಂದು ಕಲ್ಲಕುರಿಚಿಯಲ್ಲಿ ಜನಿಸಿದ ಅವರು ಮೂಲತಃ ಚೆನ್ನೈನವರಾಗಿದ್ದು, ಪ್ರಸ್ತುತ ಐಐಟಿ ಗುವಾಹಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಉದಯಕುಮಾರ್ ಅವರ ತಂದೆ ಎನ್. ಧರ್ಮಲಿಂಗಂ ಡಿಎಂಕೆ ಶಾಸಕರಾಗಿದ್ದಾರೆ. ಅವರ ಮಗ ರೂಪಾಯಿ ಚಿಹ್ನೆಯನ್ನು ವಿನ್ಯಾಸಗೊಳಿಸುವ ಸ್ಪರ್ಧೆಯಲ್ಲಿ ಗೆದ್ದಾಗ, ಅವರು ತಮಿಳುನಾಡಿಗೆ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದರು.

ರೂಪಾಯಿಯ ಚಿಹ್ನೆಯನ್ನು ಆಯ್ಕೆ ಮಾಡಿದ್ದು ಹೇಗೆ? 

2010 ರಲ್ಲಿ ಭಾರತೀಯ ರೂಪಾಯಿಗಾಗಿ ರಾಷ್ಟ್ರೀಯ ವಿನ್ಯಾಸ ಸ್ಪರ್ಧೆಯನ್ನು ನಡೆಸಲಾಯಿತು. ಒಟ್ಟು 3,331 ವಿನ್ಯಾಸ ನಮೂದುಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ ಉದಯಕುಮಾರ್ ಅವರ ವಿನ್ಯಾಸವನ್ನು ವಿಜೇತರಾಗಿ ಆಯ್ಕೆ ಮಾಡಲಾಯಿತು. ಅವರ ವಿನ್ಯಾಸದಲ್ಲಿ, ದೇವನಾಗರಿಯ 'र' ಮತ್ತು ರೋಮನ್ ಲಿಪಿಯ 'R' ಅನ್ನು ಒಟ್ಟಿಗೆ ಸೇರಿಸಲಾಗಿದೆ. ಅಲ್ಲದೆ ಅದಕ್ಕೆ ಎರಡು ಸಮಾನಾಂತರ ರೇಖೆಗಳನ್ನು ಸೇರಿಸಲಾಗಿದೆ. ಇದು ಭಾರತೀಯ ತ್ರಿವರ್ಣ ಧ್ವಜದ ಸಾಂಕೇತಿಕ ಚಿಹ್ನೆಯನ್ನು ಪ್ರತಿಬಿಂಬಿಸುತ್ತದೆ. ಈ ವಿನ್ಯಾಸವನ್ನು ಭಾರತ ಸರ್ಕಾರವು ಜುಲೈ 15, 2010 ರಂದು ಅಧಿಕೃತವಾಗಿ ಅಂಗೀಕರಿಸಿತು. ಭಾರತದ ಆರ್ಥಿಕ ಶಕ್ತಿಯನ್ನು ತೋರಿಸಲು ಮತ್ತು ರೂಪಾಯಿಯನ್ನು ಜಾಗತಿಕ ಕರೆನ್ಸಿಯಾಗಿ ಗುರುತಿಸಲು ಈ ಚಿಹ್ನೆಯನ್ನು ರಚಿಸಲಾಗಿದೆ.

ಈಗ ಚಿಹ್ನೆ ವಿವಾದ ಸ್ವರೂಪ ಪಡೆದುಕೊಂಡಿದ್ದೇಕೆ?

ಈಗ ತಮಿಳುನಾಡಿನ ಸರ್ಕಾರ ರೂಪಾಯಿ ಚಿಹ್ನೆಯನ್ನು ಬದಲಿಸಿ ತಮಿಳಿನಲ್ಲಿ ಬರೆದಿದೆ. ಈ ನಡೆಗೆ ಬಿಜೆಪಿ ಮತ್ತು ಇತರ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.ಈ ಕುರಿತಾಗಿ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಡಿಎಂಕೆ ಸರ್ಕಾರವು ರೂಪಾಯಿಯ ರಾಷ್ಟ್ರೀಯ ಚಿಹ್ನೆಯನ್ನು ತಮಿಳು ಚಿಹ್ನೆಯೊಂದಿಗೆ ಬದಲಾಯಿಸಿರುವುದು ಅತ್ಯಂತ ಹಾಸ್ಯಾಸ್ಪದ ಎಂದು ಹೇಳಿದರು. ಆದರೆ ಈ ಚಿಹ್ನೆಯನ್ನು ಒಬ್ಬ ತಮಿಳು ವ್ಯಕ್ತಿ ವಿನ್ಯಾಸಗೊಳಿಸಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಚಿಹ್ನೆಯನ್ನು ತಮಿಳು ಸಮುದಾಯದ ವ್ಯಕ್ತಿಯೊಬ್ಬರು ಮಾಡಿದ್ದಾರೆಂದು ಅವರಿಗೆ ತಿಳಿದಿಲ್ಲವೇ? ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಕೂಡ ಡಿಎಂಕೆ ಸರ್ಕಾರದ ಮೇಲೆ ಟೀಕಾ ಪ್ರಹಾರ ನಡೆಸಿ ಸ್ಟಾಲಿನ್ ಅವರಿಗೆ ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಅಷ್ಟೊಂದು ಸಮಸ್ಯೆ ಇದ್ದರೆ, ಮೊದಲು ಅವರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬೇಕು ಏಕೆಂದರೆ 'ಸ್ಟಾಲಿನ್' ಎಂಬ ಹೆಸರನ್ನು ರಷ್ಯಾದ ನಾಯಕನಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಡಿಎಂಕೆ ಸರ್ಕಾರ ಹೇಳುವುದೇನು? 

ಡಿಎಂಕೆ ಸರ್ಕಾರ ಈ ಬದಲಾವಣೆಯನ್ನು ಭಾಷಾ ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಅಸ್ಮಿತೆಯ ಸಂಕೇತ ಎಂದು ಹೇಳಿದೆ.ತಮಿಳುನಾಡಿನಲ್ಲಿ ಸ್ಥಳೀಯ ಭಾಷೆಯನ್ನು ಉತ್ತೇಜಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇತರ ಹಲವು ರಾಜ್ಯಗಳಲ್ಲಿಯೂ ಸಹ, ಬಜೆಟ್ ದಾಖಲೆಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಚಿಹ್ನೆಗಳನ್ನು ಬಳಸಲಾಗುತ್ತದೆ.ಆದರೆ ತಮಿಳು ನಾಡಿನಲ್ಲಿ ಮಾಡಿರುವ ಬದಲಾವಣೆಗೆ ವಿರೋಧ ಯಾಕೆ ವ್ಯಕ್ತವಾಗುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ, ಎಂದು ರಾಜ್ಯ ಸರ್ಕಾರದ ವಕ್ತಾರರು ತಮಿಳುನಾಡಿನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 

About the Author

Trending News