S-400 : ಸಮರದಲ್ಲಿನ್ನಾರು ಸಾಟಿ….? ಭಾರತದ ಮಹಾವ್ಯೂಹಕ್ಕೆ ಅಮೇರಿಕವೇ ಗಡಗಡ..! ಚೀನಾ ಯಾವ ಲೆಕ್ಕ..?

ಭಾರತದ ಬತ್ತಳಿಕೆಗೆ ಹೊಸ ಮಹಾ ಅಸ್ತ್ರ ವ್ಯೂಹವೊಂದು ಸೇರ್ಪಡೆಯಾಗಲಿದೆ. ಆ ಅಸ್ತ್ರ ಭಾರತದ (India) ಬತ್ತಳಿಕೆ ಸೇರುವುದನ್ನು ಅರಿತಿರುವ ಅಮೆರಿಕ  ನಡುಗಿ ಹೋಗಿದೆ. 

Written by - Ranjitha R K | Last Updated : Jan 16, 2021, 02:56 PM IST
  • ಭಾರತ ರಷ್ಯಾದಿಂದ ನಾಲ್ಕು S-400 ಮಹಾ ಕ್ಷಿಪಣಿ ವ್ಯೂಹವನ್ನು ಖರೀದಿಸುತ್ತಿದೆ
  • ಭಾರತದ ಮಹಾಕ್ಷಿಪಣಿ ವ್ಯೂಹಕ್ಕೆ ಅಮೆರಿಕವೇ ನಡುಗಿ ಹೋಗಿದೆ.
  • S-400 ಕ್ಷಿಪಣಿ ವ್ಯೂಹ ಖರೀದಿಯನ್ನು ಕೈಬಿಡಿ ಎಂದು ಧಮ್ಕಿ ಹಾಕಿದೆ ಅಮೆರಿಕ
S-400 : ಸಮರದಲ್ಲಿನ್ನಾರು ಸಾಟಿ….? ಭಾರತದ ಮಹಾವ್ಯೂಹಕ್ಕೆ ಅಮೇರಿಕವೇ ಗಡಗಡ..! ಚೀನಾ ಯಾವ  ಲೆಕ್ಕ..?

ದೆಹಲಿ : ಭಾರತದ ಬತ್ತಳಿಕೆಗೆ ಹೊಸ ಮಹಾ ಅಸ್ತ್ರ ವ್ಯೂಹವೊಂದು ಸೇರ್ಪಡೆಯಾಗಲಿದೆ. ಆ ಅಸ್ತ್ರ ಭಾರತದ (India) ಬತ್ತಳಿಕೆ ಸೇರುವುದನ್ನು ಅರಿತಿರುವ ಅಮೆರಿಕ  ನಡುಗಿ ಹೋಗಿದೆ. ಆ ಪರಿಣಾಮಕಾರಿ ಬ್ರಹ್ಮಾಸ್ತ್ರದ ಮುಂದೆ ವೈರಿಗಳ ಆಟ ಇನ್ನು ನಡೆಯುವುದಿಲ್ಲ. ಈ ವ್ಯೂಹ ಈ ವರ್ಷವೇ ಭಾರತೀಯ ಸೇನೆಯನ್ನು ಸೇರಲಿದೆ. ಅಮೆರಿಕ, ಚೀನಾ ಪಾಕಿಸ್ತಾನದ ನಡು ನಡುಗಿಸಿದ ಆ ಮಹಾ ಅಸ್ತ್ರವ್ಯೂಹ ಯಾವುದು..?

ಕ್ಷಣಾರ್ಧದಲ್ಲಿ 72 ಟಾರ್ಗೆಟ್ ಉಡೀಸ್, ಇದು ಅಭೇದ್ಯ ಮಹಾ ಕ್ಷಿಪಣಿ ವ್ಯೂಹ..!
 ಈ ಮಹಾಕ್ಷಿಪಣಿ ವ್ಯೂಹದ ಹೆಸರು S-400. ಇದು ಆಕಾಶಕ್ಕೆ ಹಾಕುವ ಅಭೇದ್ಯ ರಕ್ಷಣಾ ಕವಚ. ಮೊದಲಿಗೆ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಅಥವಾ ಕ್ಷಿಪಣಿ ವ್ಯೂಹದ ತಾಕತ್ತಿನ ಬಗ್ಗೆ ತಿಳಿಯೋಣ. ಇದೊಂದು ಮಹಾ ಕ್ಷಿಪಣಿ ರಕ್ಷಣಾ ವ್ಯವಸ್ಥೆ. ಆಕಾಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತದೆ. ಇದರ ಕಣ್ಣು ತಪ್ಪಿಸಿ ಯಾವುದೇ ಕ್ಷಿಪಣಿ, ಯುದ್ಧ ವಿಮಾನ (Fighter Jet) ಭಾರತದ ಯುದ್ಧಕ್ಷೇತ್ರ ಪ್ರವೇಶಿಸುವಂತಿಲ್ಲ. ಹಾಗೇನಾದರೂ ಪ್ರವೇಶ ಮಾಡಿದರೆ, ಅದರ ಕಥೆ ಫಿನಿಶ್.  S-400 ಕ್ಷಿಪಣಿ ವ್ಯೂಹ  ಕ್ಷಣಾರ್ಧದಲ್ಲಿ 72 ಕ್ಷಿಪಣಿಗಳನ್ನು ಆಕಾಶಕ್ಕೆ ಉಡಾಯಿಸುತ್ತದೆ. ಸುಮಾರು 300 ಕಿ.ಮಿ ತನಕ ಅದರ ರೇಂಜ್ ಇರುತ್ತದೆ. ಬಿರುಸಿನ ಯುದ್ಧದ (War) ಸಂದರ್ಭದಲ್ಲಿ ವೈರಿ ಸೇನೆ ಕ್ಷಿಪಣಿ, ಯುದ್ಧವಿಮಾನಗಳ ಮೂಲಕ ಬಾಂಬ್ ಮಳೆ ಸುರಿಸುವ ಸಾಧ್ಯತೆ ಇರುತ್ತದೆ. S-400 ಕ್ಷಿಪಣಿ ವ್ಯೂಹಕ್ಕೆ ಆದೇಶ ಕೊಟ್ಟರೆ, ಕ್ಷಣಾರ್ಧದಲ್ಲಿ ಅಂತಹ 72 ಟಾರ್ಗೆಟ್ ಮುಗಿಸಿಬಿಡುತ್ತದೆ.  ಅಷ್ಟೇ ಅಲ್ಲ ಅರೆಘಳಿಗೆಯಲ್ಲಿ ಮತ್ತೊಂದು ಹೊಸ ಪ್ರಹಾರಕ್ಕೆ ಸಜ್ಜಾಗಿರುತ್ತದೆ. ಪ್ರಬಲ ರಡಾರ್ ವ್ಯವಸ್ಥೆ ಕೂಡಾ ಇದರಲ್ಲಿದೆ.   ಈ ಕ್ಷಿಪಣಿ ವ್ಯೂಹದ ಕಣ್ತಪ್ಪಿಸಿ ನೊಣ ಕೂಡಾ ನುಸುಳುವಂತಿಲ್ಲ.  ರಷ್ಯಾ (Russia) ನಿರ್ಮಿತ  ಈ ಕ್ಷಿಪಣಿ ವ್ಯೂಹವನ್ನು ಭಾರತ ಖರೀದಿಸುತ್ತಿದೆ. ಗೊತ್ತಿರಲಿ, ಇದು ವಿಶ್ವದ ಬೆಸ್ಟ್ ಮತ್ತು ಟಾಪ್ ಮಿಲಿಟರಿ ವೆಪನ್.

ಇದನ್ನೂ ಓದಿ : UDAN scheme: ಭಾರತದ ಈ ನಗರದಲ್ಲಿ ಈಗ ಏರ್ ಟ್ಯಾಕ್ಸಿ ಸೇವೆ ಲಭ್ಯ...!

ಭಾರತಕ್ಕೆ ಬರಲಿದೆ ನಾಲ್ಕು S-400 ಕ್ಷಿಪಣಿ ವ್ಯೂಹ..!
ಭಾರತ ಒಟ್ಟು ನಾಲ್ಕು ಎಸ್ 400 ಕ್ಷಿಪಣಿ ವ್ಯೂಹವನ್ನು ಖರೀದಿ ಮಾಡುತ್ತಿದೆ. ಎರಡು ವ್ಯೂಹ ಪಶ್ಚಿಮಗಡಿಯಲ್ಲಿ ಪಾಕಿಸ್ತಾನ (Pakistan) ಸೇನೆಗೆ ಅಭಿಮುಖವಾಗಿ ರಹಸ್ಯ ಸ್ಥಳದಲ್ಲಿ ನಿಯೋಜಿಸಲಾಗುವುದು. ಇನ್ನೆರಡು ಚೀನಾಕ್ಕೆ (China) ಎದುರಾಗಿ ಉತ್ತರ ಮತ್ತು ಈಶಾನ್ಯ ಗಡಿಯಲ್ಲಿ ನಿಯೋಜಿಸಲಾಗುವುದು. ಹಾಗಾಗಿ, ಪಾಕಿಸ್ತಾನ, ಚೀನಾದ ಯಾವುದೇ ಕ್ಷಿಪಣಿ, ಯುದ್ಧ ವಿಮಾನ ನಮ್ಮ ವಾಯುಪ್ರದೇಶಕ್ಕೆ ನುಗ್ಗಿದರೆ ಅವುಗಳ ಕಥೆ ಫಿನಿಶ್.  ನೆನಪಿರಲಿ.

ಭಾರತದ ಹೊಸ ಮಿತ್ರ ಅಮೆರಿಕಗೆ ಎದೆ  ನಡುಕ ಯಾಕೆ,,?
S-400 ಇದು ರಷ್ಯಾ ನಿರ್ಮಿತ ಕ್ಷಿಪಣಿ ವ್ಯೂಹ. ಅಮೆರಿಕಕ್ಕೆ ರಷ್ಯಾ ಶತ್ರು. ಇಷ್ಟೊಂದು ಪ್ರಬಲ ಶಸ್ತ್ರ ಭಾರತದ ಬತ್ತಳಿಕೆಯಲ್ಲಿರುವುದು ಅಮೆರಿಕಗೆ (America) ಬೇಕಾಗಿಲ್ಲ. ಜೊತೆಗೆ ರಷ್ಯಾದ ಜೊತೆ ಭಾರತದ ಶಸ್ತ್ರಾಸ್ತ್ರ ವ್ಯವಹಾರವೂ ಅದಕ್ಕೆ ಬೇಕಿಲ್ಲ. ಭಾರತ ಸ್ವತಂತ್ರ ವಿದೇಶಾಂಗ ನೀತಿ ಅನುಸರಿಸುತ್ತದೆ. ತನ್ನ ಸಾರ್ವಭೌಮತ್ವಕ್ಕೆ ಅಡ್ಡಿಯಾದರೆ, ಅಮೆರಿಕವನ್ನೂ ಎದುರು ಹಾಕಿಕೊಳ್ಳಲು ಭಾರತ ಹಿಂದೆ ಮುಂದೆ ನೋಡುವುದಿಲ್ಲ ಎಂಬುದು ಅಮೆರಿಕಗೆ ಚೆನ್ನಾಗಿ ತಿಳಿದಿದೆ. ಹಾಗಾಗಿ, S-400 ಕ್ಷಿಪಣಿ ವ್ಯೂಹವನ್ನು ಖರೀದಿ ಮಾಡಬೇಡಿ. ನಿಮಗೆ ಅದಕ್ಕಿಂತಲೂ ಬಲಶಾಲಿಯಾಗಿರುವ ಟಾಮ್ ಹಾಕ್ ಕ್ಷಿಪಣಿ ವ್ಯೂಹ ನೀಡುತ್ತೇವೆ ಎಂದು ಭಾರತದೊಟ್ಟಿಗೆ ಅಮೆರಿಕ ಚೌಕಾಶಿ  ಮಾಡುತ್ತಿದೆ. ಆದರೆ ಚೌಕಾಶಿಗೆ ಭಾರತ ಬಗ್ಗುತ್ತಿಲ್ಲ.

ಇದನ್ನೂ ಓದಿ :  ವಿಶ್ವದ ಅತ್ಯಂತ ಶಕ್ತಿಶಾಲಿ Missile ಅನಾವರಣಗೊಳಿಸಿದ ಉತ್ತರ ಕೊರಿಯಾ

ಭಾರತಕ್ಕೆ ಅಮೆರಿಕ ಧಮ್ಕಿ.!
 ಯಾವಾಗ ಭಾರತದೊಟ್ಟಿಗೆ ಚೌಕಾಶಿ ವರ್ಕೌಟ್ ಆಗಲಿಲ್ಲವೋ, ಅಮೆರಿಕ ಹೊಸ ತಂತ್ರ ರೂಪಿಸಿದೆ. ಈಗ, S-400 ಕ್ಷಿಪಣಿ ವ್ಯೂಹವನ್ನು ಕೈಬಿಡಿ. ಇಲ್ಲದಿದ್ದರೆ ಭಾರತದ ಮೇಲೆ ನಿರ್ಬಂಧ ಹೇರುತ್ತೇವೆ ಎಂದು ಅಮೆರಿಕ ಧಮ್ಕಿ ಹಾಕಿದೆ. ಆ ಧಮ್ಕಿಗೂ ಭಾರತ ಬಗ್ಗಿಲ್ಲ. ನಿಮಗಿಂತ ಮೊದಲು ರಷ್ಯಾ ಜೊತೆ ನಮ್ಮ ರಕ್ಷಣಾ ಬಾಂಧವ್ಯವಿದೆ (India-Russia Defence Deal 2021). ನಿರ್ಬಂಧ ಹೇರುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು  ಕಠಿಣ ಸಂದೇಶ ಕಳುಹಿಸಿದೆ. ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ನಡೆಯಲ್ಲಿದೆ ಅಮೆರಿಕ. ಭಾರತ – ಅಮೆರಿಕ ರಾಜತಾಂತ್ರಿಕರು ಈ ವಿಷಯ ಇತ್ಯರ್ಥ ಮಾಡುವಲ್ಲಿ ನಿರತರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News